Advertisement

ಬ್ರಿಟನ್ ನ ಮಹಿಳೆಯರು ವ್ಯವಸ್ಥೆಯ ಮೇಲೆಯೇ ನಂಬಿಕೆ ಕಳೆದುಕೊಂಡಿರುವುದ್ಯಾಕೆ..?  

11:53 AM Mar 12, 2021 | Team Udayavani |

ಬ್ರಿಟನ್ : ಬಹುತೇಕ ಬ್ರಿಟನ್ ನ ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಲೈಂಗಿಕ ಕಿರುಕುಳಕ್ಕೆ ಬಲಿಪಶುಗಳಾಗಿದ್ದಾರೆ ಎಂದು ಇತ್ತೀಚೆಗೆ ಬಿಡುಗಡೆಯಾದ  ಸಮೀಕ್ಷೆಯ ವರದಿವೊಂದು ಮಾಹಿತಿ ನೀಡಿದೆ.

Advertisement

ಸಮೀಕ್ಷೆಗೆ ಒಳಗೊಂಡ ಬಹುತೇಕ ಎಲ್ಲಾ 18 ರಿಂದ 24 ವರ್ಷದೊಳಗಿನ ಮಹಿಳೆಯರು  ಸಾರ್ವಜನಿಕ ವಲಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದ್ದಾರೆ ಎಂದು ಹೇಳಿಕೊಂಡಿದ್ದಾರೆ ಎಂದು ಸಮೀಕ್ಷೆಯ ವರದಿ ತಿಳಿಸಿದೆ.

ಓದಿ : ಬೆಳ್ತಂಗಡಿ: ರಾ.ಹೆ 73ರ ಸಮೀಪದ ಅರಣ್ಯದಲ್ಲಿ 6 ಮಂಗಗಳ ಮೃತದೇಹ ಪತ್ತೆ, ಆತಂಕ ಸೃಷ್ಟಿ

ಯುನೈಟೆಡ್ ಸ್ಟೇಷನ್ಸ್ ಈಕ್ವಿಟಿ ಫಾರ್ ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣ ಅಥವಾ ವುಮೆನ್ ಯು ಕೆ ನಡೆಸಿದ ಸಮೀಕ್ಷೆಯಲ್ಲಿ ಈ ರೀತಿಯ ವರದಿಯಾಗಿದೆ ಎಂದು ತಿಳಿದು ಬಂದಿದೆ.

ಬ್ರಿಟಿಷ್ ಸಂಶೋಧನೆ ಮತ್ತು ವಿಶ್ಲೇಷಣಾ ಸಂಸ್ಥೆ ಯುಗೊವ್ ಮೂಲಕ ನಡೆಸಿದ ಈ ಸಮೀಕ್ಷೆಯಲ್ಲಿ ಶೇಕಡಾ 97ರಷ್ಟು ಮಹಿಳೆಯರು ತಮಗಾದ ಲೈಂಗಿಕ ಕಿರುಕುಳವನ್ನು ಹೇಳಿಕೊಳ್ಳುವುದಕ್ಕೆ ಮುಜುಗರ ಪಟ್ಟರೇ, ಶೇಕಡಾ 45 ರಷ್ಟು ಮಹಿಳೆಯರು ಲೈಂಗಿಕ ಕಿರುಕುಳ ಅನುಭವಿಸಿಯಾದ ಮೇಲೆ ಹೇಳಿ ಪ್ರಯೋಜನ ಇಲ್ಲ, ಹೇಳಿಕೊಳ್ಳುವುದರಿಂದ ವ್ಯವಸ್ಥೆಯಲ್ಲಿ ಏನು ಬದಲಾಗುವುದಿಲ್ಲ ಎಂದು ಅಸಮಾಧಾನವನ್ನು ವ್ಯಕ್ತ ಪಡಿಸಿದ್ದಾರೆ. ಬಹುತೇಕ ಎಲ್ಲಾ ಮಹಿಳೆಯರು ವ್ಯವಸ್ಥೆಯ ಬಗ್ಗೆ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಈ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

Advertisement

ದಿ ಗಾರ್ಡಿಯನ್ ನೊಂದಿಗೆ ನಡೆಸಿದ ಒಂದು ಸಂದರ್ಶನದಲ್ಲಿ ವುಮೆನ್ ಯು ಕೆ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕಿ ಕ್ಲೇರ್ ಬಾರ್ನೆಟ್, ಯುವತಿಯರು ಸಮಾಜದಲ್ಲಿ ಕೆಲವರು ತಮ್ಮನ್ನು ಒಂದು ವಸ್ತುವಾಗಿ ನೋಡುತ್ತಿರುವ ವಿರುದ್ಧ ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಂಡಿದ್ದಾರೆ. ಒಂದಿಷ್ಟು ಧೈರ್ಯಶಾಲಿಯಾಗಿದ್ದಾರೆ. ಆದರೇ, ವಯಸ್ಸಾದ ಮಹಿಳೆಯರು ಕತ್ತಲಾದಾಗ ಹಾಗೂ ಇನ್ನು ಕೆಲವು ಸಂದರ್ಭದಲ್ಲಿ ತಮ್ಮ ರಕ್ಷಣೆಯ ಬಗ್ಗೆ ಭಯ ಪಡುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ನಾವಿಂದು ಮಹಿಳೆಯ ಸಬಲೀಕರಣ ಆಗುತ್ತಿದೆ ಎಂದು ಬಯಸುತ್ತೇವೆ ಆದರೇ, ಇಂದು ಪ್ರತಿ ಮನೆ ಮನೆಯಲ್ಲೂ ಮಹಿಳೆ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಾಳೆ. ಮಿತಿಯೊಳಗೆ ಬದುಕುತ್ತಾಳೆ. ಅದನ್ನು ವ್ಯಕ್ತ ಪಡಿಸುವುದಕ್ಕಾಗೆ ಪರದಾಡುತ್ತಾಳೆ. ಇದು ಮಾನವ ಹಕ್ಕುಗಳ ಬಿಕ್ಕಟ್ಟು ಎಂದು ಸಹ ಬಾರ್ನಟ್ ಹೇಳಿಕೊಂಡಿದ್ದಾರೆ.

ಪ್ರಪಂಚದಾದ್ಯಂತ ಲಿಂಗಭೇದಭಾವದ ಉದಾಹರಣೆಗಳನ್ನು ದಾಖಲಿಸುವ ಗುರಿಯನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿರುಯವ ವೆಬ್ ಸೈಟ್ ‘ಎವರಿಡೆ ಸೆಕ್ಸಿಸಮ್ ಪ್ರಾಜೆಕ್ಟ್’ ನ ಸಂಸ್ಥಾಪಕಿ ಲಾರಾ ಬೇಟ್ಸ್ ಮಹಿಳೆಯರು ತಮ್ಮ ಸುತ್ತಲಿನ ವ್ಯವಸ್ಥೆಯ ಬಗ್ಗೆ ಸಂಪೂರ್ಣ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಓದಿ : ಆರ್ಥಿಕತೆ ಚೇತರಿಕೆ : ಐಪಿಒ ತೆರೆಯಲಿದೆ ಕಲ್ಯಾಣ್ ಜ್ಯುವೆಲರ್ಸ್..!

Advertisement

Udayavani is now on Telegram. Click here to join our channel and stay updated with the latest news.

Next