Advertisement
ಕಾಗಿನೆಲೆಯ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
Related Articles
Advertisement
ನಾವು ಕುಡಿಯುವ ನೀರಿಗೆ, ಮೇವಿಗೆ ಹಣ ಕೊಟ್ಟಿದ್ದೇವೆ. ನಾವು ಏನೂ ಮಾಡದೇ ಕುಳಿತಿಲ್ಲ. ಜಿಲ್ಲಾಧಿಕಾರಿಗಳಿಗೆ, ಮಂತ್ರಿಗಳಿಗೆ ಸೂಚನೆ ಕೊಟ್ಟಿದ್ದೇನೆ.ಬರಗಾಲದ ಬಗ್ಗೆ ಸಭೆ ನಡೆಸಬೇಕು. ಯಾರಿಗೂ ತೊಂದರೆ ಆಗಬಾರದು, ಸಮೀಕ್ಷೆ ಮಾಡಬೇಕು ಎಂದು ಹೇಳಿದರು.
ಜನಗಳಿಗೆ ಬರಗಾಲದಲ್ಲಿ ನರೇಗಾ ಯೋಜನೆಯಡಿ ನೂರು ದಿನದ ಬದಲು 150 ದಿನ ಕೆಲಸ ಕೊಡಬೇಕು ಎಂಬ ನಿಯಮವಿದೆ. ಆದರೆ, ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಕೊಡುತ್ತಿಲ್ಲ ಎಂದ ಅವರು, ಇಡೀ ದೇಶದಲ್ಲಿ ಹನ್ನೆರಡು ರಾಜ್ಯದಲ್ಲಿ ಬರಗಾಲ ಇದೆ. ಯಾವ ರಾಜ್ಯಕ್ಕೂ ಪರಿಹಾರ ಹಾಗೂ ಅನುಮತಿ ಕೊಟ್ಟಿಲ್ಲ. ಕೇಂದ್ರದಿಂದ ಬರಗಾಲ ತಂಡ ಅಧ್ಯಯನ ಮಾಡಿ ವರದಿ ಕೊಟ್ಟಿದೆ. ಆದರೂ ಪರಿಹಾರ ಕೊಟ್ಟಿಲ್ಲ ಎಂದರು.
ಇಲ್ಲಿಯ ಬಿಜೆಪಿಯವರು ಹೇಳುತ್ತಾರೆ. ಅವರಿಗೆ ಯಾಕೆ ನೋಡುತ್ತೀರಿ ಅಂತಾ. ಆದರೆ ನಾವು ಆ ಕಡೆ ನೋಡುವುದಿಲ್ಲ. ನಮಗೆ ಬರಬೇಕಾಗಿರುವ ಪರಿಹಾರ ಬರಬೇಕಲ್ಲ ಎಂದು ಹೇಳಿದರು.
ಬೆಳಗಾವಿ ಅಧಿವೇಶನದಲ್ಲಿ ಪ್ರಮುಖ ವಿಷಯಗಳ ಬಗೆಗಿನ ವಿಚಾರ, ವಿರೋಧ ಪಕ್ಷದವರು ಏನು ಪ್ರಸ್ತಾಪ ಮಾಡುತ್ತಾರೆ. ಅದಕ್ಕೆ ನಾವು ಉತ್ತರ ಕೊಡುವುದಕ್ಕೆ ತಯಾರಿದ್ದೇವೆ ಎಂದು ಹೇಳಿದ ಅವರು, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತೇವೆ ಎಂದರು.
ಸಿಎಂ ವಕೀಲರಾಗಿ ಡಿಕೆಶಿ ಕೇಸ್ ವಾಪಸ್ ಪಡೆದಿದ್ದು, ಎಷ್ಟರ ಮಟ್ಟಿಗೆ ಸರಿ ಎಂಬ ಎಚ್ ಡಿಕೆ ಹೇಳಿಕೆ ಕುರಿತು ಸಿಎಂ ಪ್ರತಿಕ್ರಿಯಿಸಿ, ನಾವು ವಕೀಲರಾಗಿ ಇರೋದಕ್ಕೆ ವಾಪಸ್ ಪಡೆದಿದ್ದೇವೆ. ಅವರ ವಕೀಲರು ಅಲ್ಲ. ಕಾನೂನು ಪ್ರಕಾರ ಇಲ್ಲ ಎಂಬ ಕಾರಣಕ್ಕೆ ವಾಪಸ್ ಪಡೆದಿದ್ದೇವೆ.
ವಕೀಲರಾಗಿ ಇರುವುದಕ್ಕೆ ವಾಪಸ್ ಪಡೆದಿದ್ದೇವೆ. ಇಲ್ಲ ಎಂದರೆ ಯಡಿಯೂರಪ್ಪ, ಕುಮಾರಸ್ವಾಮಿ ರೀತಿಯಲ್ಲಿ ನಾನೂ ಇರುತ್ತಿದ್ದೆ ಎಂದು ಕುಟುಕಿದರು.