ಸುರಪುರ: ಕಳೆದ ಐದು ವರ್ಷದ ಆಡಳಿತಾವಧಿಯಲ್ಲಿ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಸಮಾನ ಅವಕಾಶ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸರ್ವ ಸಮುದಾಯಗಳ ಬಗ್ಗೆ ಅಪಾರ ಕಾಳಜಿ ಹೊಂದಿದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ನಗರದ ಡೊಣ್ಣಿಗೇರಾ ವಾರ್ಡ್ ಸಮೀಪದ ದರ್ಗಾ ಹಜರತ್ ಇಶಾ¤ಖ್ ಖಾದ್ರಿ ಮತ್ತು ಅಫ್ಜಲ್ ಉದ್ ದೌಲಾ ಬಹದ್ದೂರ್ ಮಸ್ಜಿದ್ ಹತ್ತಿರ 2015-16ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿª ಯೋಜನೆಯಲ್ಲಿ ನಿರ್ಮಿಸಲಾಗಿರುವ 5 ಲಕ್ಷ ರೂ ಮೊತ್ತದ ಶಾದಿಮಹಲ್ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಇದುವರೆಗೂ ಏಳು ಶಾದಿಮಹಲ್ ನಿರ್ಮಿಸಲಾಗಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಮಸೀದಿ, ವಸತಿ ನಿಲಯ, ಸ್ಮಶಾನ ಅಭಿವೃದ್ಧಿ, ಸಮುದಾಯ ಭವನಗಳ ನಿರ್ಮಾಣ, ಮೌಲಾನ್ ಆಂಗ್ಲ ಮಾಧ್ಯಮ ಶಾಲೆ ಮಂಜೂರು ಮಾಡಿಸಲಾಗಿದೆ. ಜತೆಗೆ ಅಲ್ಪಸಂಖ್ಯಾತ ಇಲಾಖೆ ಅಡಿಯಲ್ಲಿ ಅಲ್ಪಸಂಖ್ಯಾತ ಪ್ರದೇಶದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಇನ್ನಿತರ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದರು.
ಪುರಸಭೆ ಮಾಜಿ ಸದಸ್ಯ ಅಹ್ಮದ್ ಪಠಾಣ ಮಾತನಾಡಿ, ಆರು ತಿಂಗಳ ಹಿಂದೆ ಈ ಶಾದಿಮಹಲ್ ನಿರ್ಮಾಣಕ್ಕೆ ಶಾಸಕರಿಗೆ ಮನವಿ ಮಾಡಿಕೊಂಡಾಗ ಅವರು ಹಿಂದೆ-ಮುಂದೆ ನೋಡದೆ ತಕ್ಷಣ ಸ್ಪಂದಿಸಿ ತಮ್ಮ ಅನುದಾನದಲ್ಲಿ ಮುಸ್ಲಿಂ ಸಮುದಾಯಕ್ಕೆ ಈ ಸೌಲಭ್ಯ ಒದಗಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ನಿರ್ಮಿತಿ ಕೇಂದ್ರದ ಜೆಇ ಸಮೀತ್, ನಗರಸಭೆ ಸದಸ್ಯರಾದ ನಾಗಮ್ಮ ಕಲುಬುರ್ಗಿ, ವೆಂಕಟೇಶ ಹೊಸ್ಮನಿ, ಖಾಲೀದ್ ಅಹ್ಮದ್, ಮನೋಹರ ಕುಂಟೋಜಿ, ಮಲ್ಲಣ್ಣ ಸಾಹು ಮುಧೋಳ, ಮಾನಪ್ಪ ಪ್ಯಾಪ್ಲಿ, ದಾವುಲ್ ಚಿಟ್ಟಿವಾಲೆ, ಕಾಲೇ ಬಾಬು, ವ್ಯವಸ್ಥಾಪಕ ಯಲ್ಲಪ್ಪನಾಯಕ ಡೊಣ್ಣಿಗೇರೆ, ಅಬ್ದುಲ್ ಅಲೀಂ ಗೋಗಿ, ಪ್ರಮುಖರಾದ ಶಿವಕುಮಾರ ಎಲಿಗಾರ, ವೆಂಕೋಬ ಮಂಗಳೂರು, ಅಬ್ದುಲ್ ಗಫಾರ್ ನಗನೂರಿ, ಅಹ್ಮದ್ ಶರೀಫ್,ಸೋಫಿ ಪಠಾಣ, ಖಾಸೀಂ ಶರೀಫ್, ಬಂದೇಲಿ ಸಾಬ್, ಶಕೀಲ್ ಅಹ್ಮದ್ ಸೌದಾಗರ್, ತಮ್ಮಣ್ಣ ಜೆ, ದಶರಥ ಪ್ಯಾಪ್ಲಿ, ರಾಮಕೃಷ್ಣ, ಸೈಯ್ಯದ್ ಚಾಂದ್ ಪಾಶಾ, ಮೊಹ್ಮದ್ ಮೌಲಾಲಿ ಸೌದಾಗರ್, ಸೈಯದ್ ನೂರ್ ಪಾಶಾ ಇತರರು ಇದ್ದರು.
ಮತ್ತೂಮ್ಮೆ ಆಶೀರ್ವದಿಸಿ ತಾಲೂಕಿನಲ್ಲಿ ಹಾಲುಮತ, ವಾಲ್ಮೀಕಿ, ಬ್ರಾಹ್ಮಣ, ಕೋಲಿ ಗಂಗಾಮತ ಸೇರಿ ಇತರೆ ಜನಾಂಗಕ್ಕೆ ಸಮುದಾಯ ಭವನ ನಿರ್ಮಿಸಿಕೊಡಲಾಗಿದ್ದು, ಈ ಜನಪರ ಕಾಳಜಿ ಕಾಂಗ್ರೆಸ್ ಸರಕಾರ ಮಾತ್ರ ಹೊಂದಿದ್ದು, ಬೇರೆ ಪಕ್ಷಗಳಿಗೆ ಈ ಕಾಳಜಿ ಇಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಾವು ಮತ್ತೂಮ್ಮೆ ನನಗೆ ಆಶೀರ್ವದಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸಲು ಅನುಕೂಲ ಮಾಡಿಕೊಡಬೇಕು.
ರಾಜಾ ವೆಂಕಟಪ್ಪ ನಾಯಕ, ಶಾಸಕ