Advertisement

ಸಾರ್ವಜನಿಕ ಪ್ರದೇಶಗಳಲ್ಲಿ ಅಪರಾಧ ತಡೆಗೆ ಕಣ್ಗಾವಲು

01:00 AM Mar 15, 2019 | Team Udayavani |

ಕಾಪು: ಸಾರ್ವಜನಿಕ ಪ್ರದೇಶಗಳಲ್ಲಿ ಸಿಸಿ ಕೆಮರಾ ಅಳವಡಿಸುವ ಕಾನೂನು ಜಾರಿಯಾದ ಹಿನ್ನೆಲೆಯಲ್ಲಿ  ಉಡುಪಿ ಜಿಲ್ಲೆಗೆ ಒಟ್ಟು 35 ಸಿಸಿ ಕೆಮರಾ ಮಂಜೂರಾಗಿದೆ. ಇವುಗಳನ್ನು ಜನನಿಬಿಡ ಸ್ಥಳಗಳು ಮತ್ತು ಆಯಕಟ್ಟಿನ ಪ್ರದೇಶಗಳಲ್ಲಿ ಅಳಡಿಸಲು ಉದ್ದೇಶಿಸಲಾಗಿದೆ. 

Advertisement

ಜಿಲ್ಲೆಗೆ 35 ಸಿಸಿ ಕೆಮರಾ
ಉಡುಪಿ ಎಸ್ಪಿ ಆಫೀಸ್‌ ವ್ಯಾಪ್ತಿ – 12, ಕಾಪು ಪೊಲೀಸ್‌ ಠಾಣೆ- 5, ಮಲ್ಪೆ ಪೊಲೀಸ್‌ ಠಾಣೆ – 6, ಕುಂದಾಪುರ ಪೊಲೀಸ್‌ ಠಾಣೆ – 6, ಬೈಂದೂರು ಪೊಲೀಸ್‌ ಠಾಣೆ – 6 ಹೀಗೆ ಆಯಕಟ್ಟಿನ 20 ಕಡೆಗಳಲ್ಲಿ 35 ಸಿಸಿ ಕೆಮರಾಗಳು ಕೆಲವೇ ದಿನಗಳಲ್ಲಿ ಕಾರ್ಯಾಚರಿಸಲಿವೆ.  

100ರಿಂದ 500 ಜನ ಸೇರುವ ಸಾರ್ವಜನಿಕ ಪ್ರದೇಶಗಳಲ್ಲಿ ಸಿಸಿ ಕೆಮೆರಾ ಕಡ್ಡಾಯವಾಗಿ ಅಳವಡಿಸ ಬೇಕು ಎಂಬ ಕಾನೂನನ್ನು ರಾಜ್ಯ ಸರಕಾರ ಎರಡು ವರ್ಷಗಳ ಹಿಂದೆ ಜಾರಿಗೆ ತಂದಿತ್ತು. ಅದರಂತೆ ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯ ಮೂಳೂರು ಪೇಟೆಯಲ್ಲಿ 2, ಕಾಪು ಲೈಟ್‌ ಹೌಸ್‌ ಬಳಿ 2 ಮತ್ತು ಉದ್ಯಾವರ ಪೇಟೆಯಲ್ಲಿ 1 ಸಿಸಿ ಕೆಮರಾ ಅಳವಡಿಕೆಯಾಗಲಿದೆ. ಕಾಪು ಪೊಲೀಸರ ಸಮ್ಮುಖದಲ್ಲಿ ಖಾಸಗಿ ಕಂಪೆನಿಯು ಸ್ಥಳ ಸರ್ವೆ ಕೂಡ ನಡೆಸಿದೆ. 

ಕಾಪು, ಕಟಪಾಡಿ ಜಂಕ್ಷನ್‌ನಲ್ಲಿ ಕಣ್ಗಾವಲು 
ಈಗಾಗಲೇ ರಾ.ಹೆ. 66ರ ಕಾಪು ಪೊಲಿಪು ಜಂಕ್ಷನ್‌ನಲ್ಲಿ 4 ಮತ್ತು ಕಟಪಾಡಿ ಜಂಕ್ಷನ್‌ನಲ್ಲಿ 4 ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ. ಪೊಲಿಪು ಜಂಕ್ಷನ್‌ನಲ್ಲಿ ಅಳವಡಿಸ ಲಾಗಿರುವ ಸಿಸಿ ಕೆಮರಾದ ಸರ್ವರ್‌ ಕಾಪು ಪೊಲೀಸ್‌ ಠಾಣೆಯ ನಿಯಂತ್ರಣದಲ್ಲಿದ್ದರೆ, ಕಟಪಾಡಿ ಜಂಕ್ಷನ್‌ನಲ್ಲಿರುವ ಸಿಸಿ ಕ್ಯಾಮರಾ ನಿಯಂತ್ರಣ ಕಟಪಾಡಿ ಹೊರ ಠಾಣೆಯ ನಿಯಂತ್ರಣ ದಲ್ಲಿದೆ.

ಪ್ರಕರಣ ಭೇದಿಸಲು ನೆರವು 
ಕಾಪು ಮಾರುಕಟ್ಟೆಯ 6 ಆಯಕಟ್ಟಿನ ಪ್ರದೇಶಗಳಲ್ಲಿ ಕಾಪು ಪುರಸಭೆಯ ಮೂಲಕ ಸಿಸಿ ಕೆಮರಾ ಕಣ್ಗಾವಲು ಅಳವಡಿಕೆಯಾಗಿದ್ದು, ಈ ಹಿಂದೆ ನಡೆದಿದ್ದ ಕೊಲೆ ಪ್ರಕರಣ, ಸಣ್ಣಪುಟ್ಟ ಕಳ್ಳತನ, ಅಪಾಯ ಕಾರಿ ಘಟನೆ ನಡೆದಾಗ ಅದನ್ನು ಪತ್ತೆ ಹಚ್ಚಿ, ಭೇದಿಸುವಲ್ಲಿ ಇವುಗಳು ಸಹಕಾರಿಯಾಗಿವೆ. ಮಾರಿಗುಡಿ,  ಜನಾರ್ದನ ದೇವಸ್ಥಾನದಲ್ಲಿ ಅಳವಡಿಸಲಾಗಿರುವ ಸಿಸಿ ಕೆಮರಾಗಳು ಕೂಡ 2-3 ಬಾರಿ ಉಪಯೋಗಕ್ಕೆ ಬಂದಿದ್ದವು.

Advertisement

ಇನ್ನೂ 5 ಕಡೆ ಸಿಸಿ ಕೆಮರಾಕ್ಕೆ ಬೇಡಿಕೆ
ಕಾಪು ವ್ಯಾಪ್ತಿಯಲ್ಲಿ ಇನ್ನೂ 5 ಕಡೆ ಸಿಸಿ ಕೆಮರಾಕ್ಕೆ ಬೇಡಿಕೆಯಿದೆ. ಕಾಪು ಬೀಚ್‌ ಪ್ರವೇಶದ್ವಾರ, ಇನ್ನಂಜೆ ರೈಲ್ವೇ ನಿಲ್ದಾಣ, ಎಕ್ಸ್‌ಪ್ರೆಸ್‌ ಬಸ್‌ ನಿಲ್ದಾಣ, ಕಾಪು ಬಸ್‌ ನಿಲ್ದಾಣ ಮತ್ತು ಕಾಪು ಸರಕಾರಿ ಪ್ರಥಮದರ್ಜೆ ಕಾಲೇಜಿನ ಬಳಿ ಸಿಸಿ ಕೆಮರಾ ಅಳವಡಿಸಲು ಬೇಡಿಕೆ ಇದೆ. ಈ ಸಂಬಂಧ ಉನ್ನತಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.  

ಪುರಸಭೆ ಸ್ಪಂದನೆ  
ಸಾರ್ವಜನಿಕ ಪ್ರದೇಶಗಳಲ್ಲಿ, ಜಂಕ್ಷನ್‌ ಪ್ರದೇಶಗಳಲ್ಲಿ ಪೊಲೀಸ್‌ ಇಲಾಖೆ ಕಣ್ಗಾವಲು ಇರಬೇಕು. ಕಾಪು ಮಾರುಕಟ್ಟೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿರುವುದರಿಂದ ಪೊಲೀಸರಿಗೆ ನೆರವಾಗಿದೆ. ಅಂತಹ ಪ್ರದೇಶಗಳನ್ನು ಗುರುತಿಸಿ, ಪೊಲೀಸರಿಂದ ಬೇಡಿಕೆ ಬಂದರೆ ಅದನ್ನು ಪೂರೈಸಲು ನಾವು ಪ್ರಯತ್ನಿಸುತ್ತೇವೆ.
-ರಾಯಪ್ಪ , ಮುಖ್ಯಾಧಿಕಾರಿ, ಕಾಪು ಪುರಸಭೆ

ಗುಣಮಟ್ಟದ ಸಿಸಿ ಕೆಮರಾ  
ಸಿಸಿ ಕೆಮರಾ ಕಣ್ಗಾವಲು ಇದ್ದಲ್ಲಿ  ಅಪರಾಧ ಪ್ರಕರಣ ತಡೆ, ಭೇದಿಸಲು ಸಾಧ್ಯವಿದೆ. ಕೆಮರಾ ಅಳವಡಿಕೆ ವೇಳೆ ಗುಣಮಟ್ಟ ಕಾಯ್ದುಕೊಳ್ಳಲಾಗುವುದು.  
-ನವೀನ್‌ ಎಸ್‌. ನಾಯಕ್‌, ಕಾಪು ಪೊಲೀಸ್‌ ಠಾಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next