Advertisement

Surrogacy; ಬಾಡಿಗೆ ತಾಯ್ತನ: ದಾನಿಯ ಲಿಂಗಾಣು ಪಡೆಯಬಹುದು

12:47 AM Feb 24, 2024 | Team Udayavani |

ಹೊಸದಿಲ್ಲಿ: ಬಾಡಿಗೆ ತಾಯ್ತನ ನಿಯಮ-2022ಕ್ಕೆ ಕೇಂದ್ರ ಸರಕಾರ ತಿದ್ದುಪಡಿ ತಂದಿದೆ. ದಂಪತಿ ಪೈಕಿ ಒಬ್ಬರು ವೈದ್ಯಕೀಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಅಂತಹವರು ಮಗು ಪಡೆಯಲು ದಾನಿಯ ಅಂಡಾಣು ಅಥವಾ ವೀರ್ಯಾಣು ಬಳಸಿಕೊಳ್ಳಲು ಅವಕಾಶ ಕಲ್ಪಿಸಿದೆ.
ಪತಿ ಅಥವಾ ಪತ್ನಿ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿದ್ದು, ಅಂತಹ ವರು ಮಗು ಪಡೆಯಲು ದಾನಿಯ ಅಂಡಾಣು ಅಥವಾ ವೀರ್ಯಾಣು ಬಳಸಿಕೊಳ್ಳುವ ಅಗತ್ಯವಿದೆ ಎಂಬುದನ್ನು ಜಿÇÉಾ ವೈದ್ಯಕೀಯ ಮಂಡಳಿ ಪ್ರಮಾಣೀಕರಿಸಬೇಕು. ಬಳಿಕವಷ್ಟೇ ಬಾಡಿಗೆ ತಾಯ್ತನ ಮೂಲಕ ಮಗು ಪಡೆಯಲು ಅವಕಾಶವಿರುತ್ತದೆ ಎಂದು ಬುಧವಾರ ಕೇಂದ್ರ ಹೊರಡಿಸಿರುವ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.
ದಂಪತಿ ಪೈಕಿ ಕನಿಷ್ಠ ಒಬ್ಬರ ವಂಶವಾಹಿ, ಬಾಡಿಗೆ ತಾಯ್ತನದ ಮೂಲಕ ಜನಿಸುವ ಮಗುವಿನಲ್ಲಿ ಇರಬೇಕು. ಆಗ ಮಾತ್ರ ಬಾಡಿಗೆ ತಾಯ್ತನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಪತಿ ಹಾಗೂ ಪತ್ನಿ ಇಬ್ಬರೂ ವೈದ್ಯಕೀಯ ಸಮಸ್ಯೆ ಹೊಂದಿದ್ದರೆ ಅಥವಾ ತಮ್ಮದೇ ಸಂತಾನೋತ್ಪತ್ತಿ ಜೀವಕೋಶಗಳನ್ನು ಹೊಂದಿಲ್ಲದಿದ್ದರೆ, ಅವರು ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಸಾಧ್ಯವಿಲ್ಲ. ಇದೇ ವೇಳೆ ವಿಧವೆ ಅಥವಾ ವಿಚ್ಛೇದಿತೆ ಬಾಡಿಗೆ ತಾಯ್ತನ ಮೂಲಕ ಮಗು ಪಡೆಯಲು ಇಚ್ಛಿಸಿದರೆ ತಮ್ಮದೇ ಅಂಡಾಣು ಬಳಸುವುದು ಅಗತ್ಯ ಎಂದು ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next