Advertisement

ಕಲಾಕೃತಿಗಳಲ್ಲಿ ಸೀರೆ ಹಿರಿಮೆ

11:38 AM Jun 23, 2018 | |

ಬೆಂಗಳೂರು: ನಾಡಿನ ಸಂಸ್ಕೃತಿ, ಪರಂಪರೆ ಮರೆಯಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಕಲಾವಿದರು ತಮ್ಮ ಕಲಾಕೃತಿಗಳ ಮೂಲಕ ಜನರನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ ಎಂದು ಅಂತಾರಾಷ್ಟ್ರೀಯ ಚಿತ್ರಕಲಾವಿದ ಕಾಂತರಾಜ್‌ ಅಭಿಪ್ರಾಯಪಟ್ಟರು.

Advertisement

ಮಹಾತ್ಮಗಾಂಧಿ ರಸ್ತೆಯ ರಂಗೋಲಿ ಮೆಟ್ರೋ ಕಲಾ ಕೇಂದ್ರದಲ್ಲಿ ಶುಕ್ರವಾರ ಹುಬ್ಬಳ್ಳಿಯ ಯುವ ಚಿತ್ರ ಕಲಾವಿದ ಗಣೇಶ್‌ ಎಸ್‌. ಸಬೋಜಿ ಅವರ “ಮತ್ಸ’ ಕಲಾಕೃತಿಗಳ ಪ್ರದರ್ಶನ‌ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಉತ್ತರ ಕರ್ನಾಟಕ ಭಾಗದ ಸುಪ್ರಸಿದ್ಧ ಇಳಕಲ್‌ ಸೀರೆ ಇಂದು ಆಧುನಿಕ ಬದುಕಿಗೆ ಸಿಲುಕಿ ತನ್ನ ವರ್ಚಸ್ಸು ಕಳೆದುಕೊಳ್ಳುತ್ತಿದೆ.

ಇದನ್ನು ಗಮನಿಸಿರುವ ಕಲಾವಿದ ಗಣೇಶ್‌ ಎಸ್‌. ಸಬೋಜಿ ಅವರು ಮತ್ಸ ಕಲ್ಪನೆ ಮೂಲಕ ತಮ್ಮ ಕಲಾಕೃತಿಯಲ್ಲಿ ಸೀರೆಯ ಮೌಲ್ಯ ಕಟ್ಟಿಕೊಡುವ ಪ್ರಯತ್ನಕ್ಕೆ ಮುಂದಾಗಿರುವುದು ಶ್ಲಾಘನೀಯ. ಮೊಬೈಲ್‌ ಯುಗದಲ್ಲಿ ಮುಳುಗಿ ಹೋಗಿರುವ ಇಂದಿನ ಯುವ ಪೀಳಿಗೆ ನಾಡಿನ ಕಲೆ, ಸಂಸ್ಕೃತಿಯನ್ನು ಮರೆಯುತ್ತಿದ್ದು ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.

ಹಿರಿಯ ಚಿತ್ರಕಲಾವಿದ ಗಣೇಶ್‌ ದೊಡಮನಿ ಮಾತನಾಡಿ, ಕಲಾವಿದನಿಗೆ ಕಲಾಕೃತಿ ಬಿಡಿಸುವ ನಿಪುಣತೆ ಇದ್ದರೆ ಸಾಲದು. ಆತನಿಗೆ ತಾನು ಬಿಡಿಸಿದ ಕಲಾಕೃತಿಗಳ ಬಗ್ಗೆ ಕಲಾರಸಿಕರಿಗೆ ಮನ ಮುಟ್ಟುವ ರೀತಿಯಲ್ಲಿ ವರ್ಣಿಸಿ ಹೇಳುವ ಕೌಶಲ್ಯ ಕೂಡ ಇರಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next