Advertisement

ಪಾಕ್ ಸಂಸತ್ತಿನ ಹೊರಗೆ ‘ಅಖಂಡ ಭಾರತ’ಪೋಸ್ಟರ್!

08:28 PM Mar 17, 2020 | Hari Prasad |

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಶಾಧಿಕಾರವನ್ನು ರದ್ದುಪಡಿಸಿದ ಬೆನ್ನಲ್ಲೇ ಭಾರತದ ವಿರುದ್ಧ ಪಾಕಿಸ್ಥಾನದಲ್ಲಿ ತೀವ್ರ ಅಸಮಧಾನವೇನೋ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಕಾಶ್ಮೀರವನ್ನೂ ಭಾರತ ಒಳಗೊಂಡಂತೆ ಅಖಂಡ ಭಾರತ ನಿರ್ಮಾಣವಾಗಬೇಕೆನ್ನುವ ಕುರಿತ ಬ್ಯಾನರ್ ಒಂದು ಪಾಕಿಸ್ಥಾನ ಸಂಸತ್ತಿನ ಹೊರಗೇ ಪತ್ತೆಯಾಗಿದೆ. ಇದು ಪಾಕ್ ಆಡಳಿತಕ್ಕೆ ಇರಸುಮುರಸು ತಂದಿದೆ.

Advertisement

ಪಾಕ್ ಸಂಸತ್ತು ಮತ್ತು ಪ್ರಧಾನಿ ಇಮ್ರಾನ್ ಖಾನ್ ಅವರ ಅಧಿಕೃತ ನಿವಾಸಕ್ಕಿಂತ ಕೆಲವೇ ಮೀಟರ್ ದೂರದಲ್ಲಿ ರಾಷ್ಟ್ರೀಯ ಪ್ರೆಸ್‌ ಕ್ಲಬ್ ಹೊರಗೆ ಈ ಬ್ಯಾನರ್ ಕಟ್ಟಲಾಗಿದೆ. ವಿದ್ಯುತ್ ಕಂಬಕ್ಕೆ ಈ ಬ್ಯಾನರ್ ಕಟ್ಟಲಾಗಿದ್ದು, ಕೆಲಸಕ್ಕೆ ಹೋಗುವ ಕಾರ್ಮಿಕರು ಇದನ್ನು ಮೊದಲು ಗಮನಿಸಿದ್ದಾಗಿ ‘ಡಾನ್’ ಪತ್ರಿಕೆ ವರದಿ ಮಾಡಿದೆ. ಈ ಪೋಸ್ಟರ್ ಬಗ್ಗೆ ಸಾಜಿದ್ ಮಹ್ಮೂದ್ ಎಂಬುವವರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹರಿಯಬಿಟ್ಟಿದ್ದಾರೆ. ಕೆಲವೇ ಹೊತ್ತಿನಲ್ಲಿ ಇದು ಪಾಕ್‌ ನಾದ್ಯಂತ ವೈರಲ್ ಆಗಿದೆ.

ಕೂಡಲೇ ಎಚ್ಚೆತ್ತುಕೊಂಡ ಇಸ್ಲಾಮಾಬಾದ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಬ್ಯಾನರ್ ತೆಗೆಸಿದ್ದಾರೆ. ಪ್ರಕರಣಕ್ಕ ಸಂಬಂಧಿಸಿದಂತೆ ಸ್ಥಳೀಯ ಪ್ರಿಂಟಿಂಗ್‌ ನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಪ್ರಿಂಟ್ ಮಾಡಲು ಹೇಳಿದ ವ್ಯಕ್ತಿಯೊಬ್ಬನ ಹೆಸರು ಹೇಳಿದ್ದಾನೆ ಎಂದು ಗೊತ್ತಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪತ್ರಿಕೆ ಹೇಳಿದೆ.

 

Advertisement

Udayavani is now on Telegram. Click here to join our channel and stay updated with the latest news.

Next