Advertisement

ಜಿ.ಪಂ. ಡಿಎಸ್‌ 2 ಜೆಟ್ಟಿ ಅಗ್ರಹಾರ ಗ್ರಾಮ ಪಂಚಾಯತ್ ಗೆ ದಿಢೀರ್ ಭೇಟಿ

09:59 PM Oct 11, 2022 | Team Udayavani |

ಕೊರಟಗೆರೆ :ತಾಲೂಕಿನ ಜೆಟ್ಟಿ ಅಗ್ರಹಾರ ಗ್ರಾಮ ಪಂಚಾಯತ್  ಗೆ ಡಿ ಎಸ್ 2 ಅತಿಕ್ ಅವರು ದಿಢೀರ್ ಭೇಟಿ ನೀಡಿ ಗ್ರಾಪಂ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.

Advertisement

2018-19ನೇ ಸಾಲಿನ ಎಸ್ ಸಿ ,ಎಸ್ ಟಿ ಅನುದಾನ ದುರ್ಬಳಕೆ ಮಾಡಿದ್ದ ಪಿ ಡಿ ಓ ಮಂಜುಳಾರವರ ವಿರುದ್ಧ ಜೆಟ್ಟಿ ಅಗ್ರಹಾರ ನಾಗರಾಜು 2021 ಸಾಲಿನಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳ ಕೈಗೊಂಡ ಮಿಂಚಿನ ಕಾರ್ಯಾಚರಣೆಯಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಮಂಜಮ್ಮಸಿಕ್ಕಿ ಬಿದ್ದಿದ್ದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೂ ದೂರು ನೀಡಲಾಗಿತ್ತು. ಜೆಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಥರಟಿ ಹಾಗೂ ದಮಗಲಯ್ಯನ ಪಾಳ್ಯ ಗ್ರಾಮಗಳಲ್ಲಿ ಎಸ್ಸಿ, ಎಸ್ ಟಿ ಸಮುದಾಯದ ಇಲ್ಲದ ಕಡೆ ಕಾಮಗಾರಿ ಮಾಡಿದ್ದೇವೆ.ಎಂದು ಬಿಲ್ ಮಾಡಿಕೊಂಡಿರುವ ಆರೋಪ ಎಸ್ಸಿ ಎಸ್ಟಿ ಕಾಲೋನಿಗಳಲ್ಲಿ ಕಾಮಗಾರಿಗಳನ್ನು ಮಾಡದೇ ಅಕ್ರಮವಾಗಿ ಅನುದಾನ ಬಿಡುಗಡೆ ಮಾಡಿ ಬಳಸಿಕೊಂಡಿದ್ದರು.

ಥರಟಿ ಗ್ರಾಮದಲ್ಲಿ1.40 ಸಾವಿರ ರೂಗಳ ಬಿಲ್ ಮಾಡಿ ಹಾಗೂ 1 40000 ರೂ ಗಳನ್ನು ದುರುಪಯೋಗ ಪಡಿಸಿ ಕೊಂಡಿರುತ್ತಾರೆ. ಡಿ ಎಸ್ 2 ರವರು ಭೇಟಿ ನೀಡಿ ಯಾವುದೇ ದಲಿತ ಕಾಲೋನಿ ಇಲ್ಲದಿರುವುದು ಸ್ದಳ ಪರೀಶೀಲನೆ ಮಾಡಿ ಖಚಿತ ಪಡಿಸಿಕೊಂಡಿದ್ದಾರೆ.

ದಮಗಲಯ್ಯನ ಪಾಳ್ಯ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಎಸ್ಸಿ ಎಸ್ಟಿ ಸಮುದಾಯ ಇರುವಿಕೆಯನ್ನು ವಿಚಾರಿಸಿದಾಗ ಒಂದು ಮನೆಯು ಎಸ್ಸಿ ಎಸ್ಟಿ ಮನೆಗಳು ಇಲ್ಲದಿರುವುದು ಗ್ರಾಮಸ್ಥರು ಖಚಿತ ಪಡಿಸಿದ್ದಾರೆ ಎಂಬುದು ಗ್ರಾಮಸ್ಥರಿಂದ ಕೇಳಿಬಂದಿದೆ.ಎರಡು ಗ್ರಾಮಗಳ ಕಾಮಗಾರಿ ಸ್ದಳ ತನಿಖೆಯ ನಂತರ ಮಾತನಾಡಿದ ಜಿಲ್ಲಾ ಪಂಚಾಯತ್ DS2 ಅತೀಕ್ ರವರು ಸಾಮಾಜಿಕ ಹೋರಾಟಗಾರ ಜೆಟ್ಟಿ ಅಗ್ರಹಾರದ ನಾಗರಾಜು ದೂರಿನ ಅನ್ವಯ ಪ್ರಾದೇಶಿಕ ಆಯುಕ್ತರ ನ್ಯಾಯಾಲಯದಿಂದ ಸ್ದಳ ತನಿಖೆ ಮಾಡಿ ವರದಿ ನೀಡಲು,ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳಿಗೆ ಆದೇಶ ಹೊರಡಿಸಿದ್ದಾರೆ. ಮೇಲಧಿಕಾರಿಗಳ ಮಾರ್ಗದರ್ಶನದಂತೆ ನಮ್ಮ ತಂಡ ಎರಡು ಗ್ರಾಮಗಳಿಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದಿದ್ದೇವೆ. ವರದಿಯನ್ನು ಕೂಡಲೇ ಪ್ರಾದೇಶಿಕ ಆಯುಕ್ತರ ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ ಎಂದರು.

Advertisement

ಈ ಸಮಯದಲ್ಲಿ ಜೆಟ್ಟಿ ಅಗ್ರಹಾರ ನಾಗರಾಜು,ನೂತನ ಪಿಡಿಒ ಮೈಲಣ್ಣ ಸಿ ಟಿ ಓ ಸಣ್ಣ ಮುಸಿಯಪ್ಪ, ತಾಲ್ಲೂಕು ಯೋಜನಾಧಿಕಾರಿ ಮಧುಸೂಧನ್ ಹಾಗೂ ಗ್ರಾಮಸ್ಥರು ಸ್ಥಳದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next