Advertisement

Surprise; ಕದ್ದಿದ್ದ 37 ರೂ.ವನ್ನು 50 ವರ್ಷ ಬಳಿಕ ಮರಳಿಸಿದ!

12:20 AM Dec 14, 2024 | Team Udayavani |

ಚೆನ್ನೈ: ಬಾಲಕನಾಗಿದ್ದಾಗ ಮಾಡಿದ ತಪ್ಪಿಗೆ ತಮಿಳುನಾಡಿನ ವ್ಯಕ್ತಿಯೊಬ್ಬರು ಈಗ ಪ್ರಾಯಶ್ಚಿತ್ತ ಮಾಡಿಕೊಂಡ ಅತ್ಯಂತ ಅಪರೂಪದ ಘಟನೆ ನಡೆದಿದೆ. ಬರೋಬ್ಬರಿ 50 ವರ್ಷಗಳ ಹಿಂದೆ ಶ್ರೀಲಂಕಾದ ದಂಪತಿಯ ಮನೆಯಿಂದ ಕಳವು ಮಾಡಿದ್ದ 37.50 ಲಂಕಾ ರೂಪಾಯಿಗೆ ಪ್ರಾಯಶ್ಚಿತ್ತವಾಗಿ, ಈಗ ತ.ನಾಡಿನ ಉದ್ಯಮಿಯೊಬ್ಬರು ಆ ಮನೆಯ ಮಾಲಕನನ್ನು ಹುಡುಕಿ ಅವರ ಮೂವರು ಮಕ್ಕಳಿಗೆ ತಲಾ 70,000 ಶ್ರೀಲಂಕಾ ರೂಪಾಯಿ ಹಾಗೂ ಹೊಸ ಬಟ್ಟೆಬರೆಗಳನ್ನು ನೀಡಿದ್ದಾರೆ. 1975ರಲ್ಲಿ ರಂಜಿತ್‌ ಲಂಕಾದಲ್ಲಿ ಮನೆಯೊಂದರ ಶಿಫ್ಟಿಂಗ್‌ ವೇಳೆ ಸಿಕ್ಕಿದ್ದ 37 ರೂ.ಗಳನ್ನು ಮಾಲಕರಿಗೆ ನೀಡದೇ ಜೇಬಿಗಿಳಿಸಿಕೊಂಡಿದ್ದರು. ತಪ್ಪಿಗೆ ಪ್ರಾಯಶ್ಚಿತ್ತವಾಗಿ ಆ ಕುಟುಂಬವನ್ನು ಹುಡುಕಿ, ಅವರಿಗೆ ಹೆಚ್ಚುವರಿ ಹಣ ನೀಡಿದ್ದಾರೆ. ಇಂಥವರೂ ಇದ್ದಾರೆಯೇ ಎಂದು ಆ ಕುಟುಂಬ ಅಚ್ಚರಿಪಟ್ಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next