Advertisement

ಕೀಟಗಳ ಮೇಲೆ ಸರ್ಜಿಕಲ್‌ ಸ್ಟೈಕ್‌

12:30 AM Feb 25, 2019 | |

ಕೀಟಗಳು ರೈತರನ್ನು ಇನ್ನಿಲ್ಲದಂತೆ ಕಾಡುತ್ತವೆ. ಕೆಲವು ಬಾರಿ, ರೋಗ ಬಾಧೆಗಿಂತ ಕೀಟಬಾಧೆಯೇ ಹೆಚ್ಚು.  ಇದಕ್ಕೆ  ಏನಪ್ಪಾ ಮಾಡುವುದು ಅನ್ನೋ ತಲೆಬೇನೆ ಬೇಡ. ಏಕೆಂದರೆ,  ದಾವಣಗೆರೆಯ ಕರಿಬಸಪ್ಪ ಎನ್ನುವ ರೈತ, ಸೋಲಾರ್‌ ಕೀಟನಾಶಕ ಯಂತ್ರವನ್ನು ಆವಿಷ್ಕರಿಸುವ ಮೂಲಕ  ಇದಕ್ಕೊಂದು ಪರಿಹಾರ ಕಂಡು ಹಿಡಿದಿದ್ದಾರೆ. 

Advertisement

ಇವರು ಕೀಟಗಳನ್ನು ಆಕರ್ಷಿಸಲು ಯಾವುದೇ ಕೀಟ ನಾಶಕ ಬಳಸುವುದಿಲ್ಲ. ಕೀಟಗಳನ್ನು ನಾಶ ಮಾಡುವ ಈ ಕಲೆಸಕ್ಕೆ ಬೇಕಿರುವುದು ಕೇವಲ ಬೆಳಕು ಮತ್ತು ಶಾಂಪೂ ನೀರು. 

ಹೂವು, ಹಣ್ಣು, ತರಕಾರಿ, ಬತ್ತ, ತೊಗರಿ, ತೋಟಗಾರಿಕೆ ಸೇರಿದಂತೆ ಎಲ್ಲಾ ಬೆಳೆಗಳನ್ನು ಬೆಳೆಯುವ ಹಂತದಲ್ಲಿ ಕಾಡುವ ಮೀಟು ಹುಳ, ಕಪ್ಪು ತಲೆಕೀಟ, ಬೇರು ಹುಳ, ಕಾಂಡ ಕೊರಕ, ಕಾಯಿ ಕೊರಕ, ರಸ ಹೀರುವ ಮತ್ತು ಎಲ್ಲಾ ತರಹದ ಶತ್ರು ಕೀಟಗಳನ್ನು ಬೆಳೆಯಿಂದ ಮುಕ್ತ ಮಾಡಲು ಇದು ಅತ್ಯಂತ ಸೂಕ್ತ ಯಂತ್ರ ಎನ್ನುತ್ತಾರೆ ಕರಿಬಸಪ್ಪ. 

ಸೋಲಾರ್‌ ಚಾಲಿತ ಯಂತ್ರವಾದ್ದರಿಂದ ವಿದ್ಯುತ್‌ ಕೈ ಕೊಟ್ಟರೆ ಏನು ಮಾಡುವುದು ಎಂಬ ತಲೆನೋವು ಇಲ್ಲ. ಬೆಳಗ್ಗೆ  ಚಾರ್ಜ್‌ ಮಾಡಿದರೆ ಸಂಜೆಯವರೆಗೂ ಬಳಸಬಹುದು. ಒಂದು ಲೀಟರ್‌ ನೀರಿಗೆ ಎರುಡ ಹನಿ ಶಾಂಪೂ ಸೇರಿಸಿದರೆ ಚಿಟ್ಟೆ, ದುಂಬಿ, ಕಾಂಡ ಕೊರೆಯುವ ಹುಳು, ರಸಹೀರುಕ ಇನ್ನಿತರ ಕೀಟಗಳನ್ನು ತೊಲಗಿಸಬಹುದು. 

ಈ ಯಂತ್ರವು ಹಗಲಿನ ಸಮಯದಲ್ಲಿ ಸೂರ್ಯನ ಬೆಳಕಿನಿಂದ ಚಾರ್ಜ್‌ ಆಗಿ ಮುಸ್ಸಂಜೆಯಾಗುತ್ತಿದ್ದಂತೆ ಸ್ವಯಂ ಚಾಲನೆಯಾಗುತ್ತದೆ. ಸರಿ ಸುಮಾರು ಮೂರು ನಾಲ್ಕು ಗಂಟೆಗಳ ಕಾಲ ಕೆಲಸ ಮಾಡಬಲ್ಲದು. 

Advertisement

ಈ ಯಂತ್ರದಲ್ಲಿ LED ಬಲ್ಬ… ಗಳ ಬಳಕೆ ಮಾಡಲಾಗಿದೆ.  ಇದು ಚಾಲನೆಯಾದ ಸಮಯದಲ್ಲಿ ಇದರಿಂದ ಪ್ರಸರಿಸುವ ಬೆಳಕಿನ ಕಿರಣಗಳು ಕೀಟಗಳನ್ನು ಆಕರ್ಷಿಸುತ್ತವೆ. ಯಂತ್ರದ ಒಂದು ಯೂನಿಟ್‌ ಬೆಳೆಗಳ ಎತ್ತರಕ್ಕನುಗುಣವಾಗಿ ಯೂನಿಟ್‌ ನ ಸುತ್ತ 1-2 ಎಕರೆಯ ವಿಸ್ತೀರ್ಣದಲ್ಲಿರುವ ಕೀಟಗಳನ್ನು ಆಕರ್ಷಿಸುವ ಶಕ್ತಿ ಹೊಂದಿದೆ.  ಈ ಯಂತ್ರವು  ಧಾರವಾಡ-ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ, ಶಿವಮೊಗ್ಗದ ಅಡಿಕೆ ಸಂಶೋಧನಾ ಕೇಂದ್ರ, ಮುನಿರಾಬಾದ್‌ನ ತೋಟಗಾರಿಕಾ ಕಾಲೇಜು, ಹೈದ್ರಾಬಾದ್‌ನ ಇಕ್ರಿಸಾಟ್‌ ಸಂಸ್ಥೆಗಳಿಂದ ಪರೀಕ್ಷೆಗೆ ಒಳಪಟ್ಟಿದೆ. 

Advertisement

Udayavani is now on Telegram. Click here to join our channel and stay updated with the latest news.

Next