Advertisement

ಶಸ್ತ್ರಚಿಕಿತ್ಸೆ ಲೋಪ: ಬಾಣಂತಿಯರ ಪರದಾಟ; ಲೋಕಾಯುಕ್ತದಿಂದ ಸ್ವಯಂಪ್ರೇರಿತ ದೂರು?

11:05 PM May 22, 2022 | Shreeram Nayak |

ವಿಜಯಪುರ: ವಿಜಯಪುರ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಶಸ್ತ್ರಚಿಕಿತ್ಸಾ ಲೋಪ ಪ್ರಕರಣದ ಕುರಿತು ಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.

Advertisement

ಪ್ರಕರಣದ ಕುರಿತು ಖುದ್ದು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿರುವ ಉಪ ಲೋಕಾಯುಕ್ತ ನ್ಯಾ| ಬಿ.ಎಸ್‌. ಪಾಟೀಲ್‌, ಅನಂತರ ನಗರದಲ್ಲಿರುವ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ವೇಳೆ ಸಾರ್ವಜನಿಕ ಆರೋಗ್ಯ ಸೇವೆ ನೀಡುವಲ್ಲಿ ಆಗಿರುವ ಲೋಪ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಸಾರ್ವಜನಿಕ ಹಿತಾಸಕ್ತಿಗಾಗಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸುವುದಾಗಿ ಜಿಲ್ಲಾಸ್ಪತ್ರೆಯ ಸರ್ಜನ್‌ಗೆ ಎಚ್ಚರಿಸಿದರು.

ಶಸ್ತ್ರ ಚಿಕಿತ್ಸೆಯಂತಹ ಗಂಭೀರ ಪ್ರಕರಣದಲ್ಲಿ ನಿರ್ಲಕ್ಷé ತೋರಿರುವ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲೇಬೇಕಿದೆ. ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿರುವ ಬಾಣಂತಿಯರ ಶಸ್ತ್ರಚಿಕಿತ್ಸಾ ವ್ಯವಸ್ಥೆಯಲ್ಲಿ ಲೋಪ ಸಣ್ಣ ವಿಷಯವಲ್ಲ. ಹೀಗಾಗಿ ಈ ಲೋಪದಿಂದ ಮಹಿಳೆಯರ ಆರೋಗ್ಯದ ಸಮಸ್ಯೆ ಸೃಷ್ಟಿಯಾಗಿದೆ. ಈ ಲೋಪಕ್ಕೆ ಕಾರಣವಾದವರನ್ನು ಪತ್ತೆ ಹೆಚ್ಚಲೇಬೇಕಿದೆ. ಯಾರಿಂದ ಲೋಪವಾಯ್ತು? ಲೋಪಕ್ಕೆ ಕಾರಣವೇನು? ಈ ಲೋಪ ತಪ್ಪಿಸಲು ಸಾಧ್ಯವಾಗಲಿಲ್ಲ ಏಕೆ? ಎನ್ನುವ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದೆ. ಅದಕ್ಕಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಲೋಕಾಯುಕ್ತ ಸ್ವಯಂಪ್ರೇರಿತ ದೂರು ದಾಖಲಿಸುವುದಾಗಿ ಹೇಳಿದರು.

ಕ್ರಮದ ವರದಿಗೆ ಸೂಚನೆ
ಲೋಕಾಯುಕ್ತದಿಂದ ದೂರು ದಾಖಲಿಸಿದ ಅನಂತರ ಸಂಬಂ ಧಿಸಿದವರಿಗೆ ನೋಟಿಸ್‌ ಜಾರಿಯಾಗಲಿವೆ. ಈಗ ಆಗಿರುವ ಪ್ರಮಾದದ ಬಗ್ಗೆ, ಕೈಗೊಂಡ ಕ್ರಮಗಳ ಬಗ್ಗೆ, ಇಂತಹ ಪ್ರಕರಣಗಳು ಮರುಕಳಿಸದಂತೆ ಕೈಗೊಂಡ ಕ್ರಮಗಳೇನು ಎನ್ನುವ ಬಗ್ಗೆ ವರದಿ ನೀಡಲು ಸಂಬಂಧಿ ಸಿದವರಿಗೆ ಸೂಚಿಸಲಾಗಿದೆ. ಜಿಲ್ಲಾಡಳಿತ ಸಹಾಯಕ ಆಯುಕ್ತರ ನೇತೃತ್ವದ ಸಮಿತಿಯಿಂದ ಪಡೆದಿರುವ ವರದಿಯನ್ನು ಅವಲೋಕಿಸಲಾಗುತ್ತದೆ. ಇದಕ್ಕಾಗಿ ಜಿಲ್ಲಾ ಧಿಕಾರಿಗಳು ಈಗಾಗಲೇ ಸಿದ್ಧಪಡಿಸಿರುವ ವರದಿ ಬಗ್ಗೆಯೂ ಚರ್ಚಿಸುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next