ಹೊಸದಿಲ್ಲಿ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸುಲಭ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಸುರೇಶ್ ರೈನಾ ಐದನೇ ಕ್ರಮಾಂಕದಲ್ಲಿ ಆಡಿ ಅಚ್ಚರಿ ಮೂಡಿಸಿದರೂ, ಹೊಸ ದಾಖಲೆ ನಿರ್ಮಿಸಿದ್ದಾರೆ.
ಐಪಿಎಲ್ ನಲ್ಲಿ 500 ಬೌಂಡರಿ ಬಾರಿಸಿದ ಕೇವಲ ನಾಲ್ಕನೇ ಆಟಗಾರ ಎಂಬ ಕೀರ್ತಿಗೆ ರೈನಾ ಪಾತ್ರರಾದರು. ಬುಧವಾರದ ಪಂದ್ಯಕ್ಕೂ ಮೊದಲು ಸುರೇಶ್ ರೈನಾ 499 ಬೌಂಡರಿ ಬಾರಿಸಿದ್ದರು.
ಇದನ್ನೂ ಓದಿ:IPL 2021 : ಚೆನ್ನೈ ಮತ್ತೆ ಟಾಪ್, ಹೈದರಾಬಾದ್ ಲಾಸ್ಟ್
ಐಪಿಎಲ್ ನಲ್ಲಿ ಇದುವರೆಗೆ ಅತೀ ಹೆಚ್ಚು ಬೌಂಡರಿ ಬಾರಿಸಿದವರಲ್ಲಿ ಅಗ್ರಸ್ಥಾನದಲ್ಲಿರುವುದು ಶಿಖರ್ ಧವನ್. ಡೆಲ್ಲಿ ಕ್ಯಾಪಿಟಲ್ಸ್ ನ ಶಿಖರ್ ಧವನ್ ಐಪಿಎಲ್ ನಲ್ಲಿ 624 ಬೌಂಡರಿ ಬಾರಿಸಿದ್ದಾರೆ. ಉಳಿದಂತೆ ಡೇವಿಡ್ ವಾರ್ನರ್ 525 ಬೌಂಡರಿ, ವಿರಾಟ್ ಕೊಹ್ಲಿ 521 ಬೌಂಡರಿ, ಸುರೇಶ್ ರೈನಾ – 502 ಮತ್ತು ಗೌತಮ್ ಗಂಭೀರ್ 491 ಬೌಂಡರಿಗಳನ್ನು ಬಾರಿಸಿದ್ದರು.
ಬುಧವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ ತಂಡ ಮೂರು ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತ್ತು. ಇದನ್ನು ಬೆನ್ನತ್ತಿದ್ದ ಸಿಎಸ್ ಕೆ 18.3 ಓವರ್ ಗಳಲ್ಲಿ ಗುರಿ ತಲುಪಿ ಜಯ ಸಾಧಿಸಿದೆ.