Advertisement
ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿಸಿ. ನಾಗೇಶ್ ಅವರುಗಳಿಗೆ ಪತ್ರ ಬರೆದಿರುವ ಅವರು ಶಾಲೆ ಕಾಲೇಜುಗಳ ಆವರಣದಲ್ಲಿ ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಆರೋಪ ಪ್ರತ್ಯಾರೋಪಗಳನ್ನು ಮೀರುವ, ಶಿಕ್ಷಣದ ಕಡೆಗೆ ಒಲವು ಹೆಚ್ಚುವ ಸಕಾರಾತ್ಮಕವಾದ ಕಾರ್ಯಕ್ರಮಗಳನ್ನು ರೂಪಿಸುವ ಕುರಿತಂತೆ ನಾವು ಹೆಚ್ಚಾಗಿ ಆಲೋಚಿಸಬೇಕಿದೆ ಎಂದು ಹೇಳಿದ್ದಾರೆ.
Related Articles
Advertisement
ಅವರ ಅಭಿಪ್ರಾಯಗಳು ಕೆಳಕಂಡಂತಿವೆ
- ಪ್ರತಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ನಡುವೆ ಸೋದರತ್ವ, ಸೌಹಾರ್ದತೆಯನ್ನು ಕಾಪಾಡುವ, ಶೈಕ್ಷಣಿಕ ವಾತಾವರಣವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಶಾಲಾಭಿವೃದ್ದಿ ಮೇಲುಸ್ತುವಾರಿ ಸಮಿತಿಗಳಿಗೆ/ಶಾಲಾ, ಕಾಲೇಜು ಸಲಹಾ ಸಮಿತಿಗಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಖಚಿತ ಜವಾಬ್ದಾರಿಯನ್ನು ನಿಗದಿ ಪಡಿಸಬೇಕಿದೆ.
- ತರಗತಿವಾರು ಮಕ್ಕಳ ಸಭೆಗಳನ್ನು ನಿಗದಿಪಡಿಸಿ ಕೋಮುಸಾಮರಸ್ಯದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಮವಸ್ತ್ರದ ಆಶಯ, ಅದನ್ನು ಧರಿಸಿದಾಗ ಮೂಡಬೇಕಾದ ಸಮಸಮಾಜದ ಹೆಮ್ಮೆಯ ಕುರಿತಂತೆ ಮಕ್ಕಳಲ್ಲಿ ಅರಿವು ಮೂಡಿಸುವ ಪ್ರಯತ್ನಗಳು ಆಗಬೇಕು. ಅದಕ್ಕಾಗಿ ದಿನದ ಒಂದು ಅವಧಿ ಮೀಸಲಿಟ್ಟರೂ ತಪ್ಪಿಲ್ಲ.
- ಶಾಲಾಭಿವೃದ್ಧಿ ಸಮಿತಿಗಳು, ಶಾಲಾ,ಕಾಲೇಜು ಸಲಹಾ ಸಮಿತಿಗಳು, ಪೋಷಕರ ಸಭೆಗಳನ್ನು ವಾರಕ್ಕೊಮ್ಮೆ ಕರೆದು ಈ ಪರಿಸ್ಥಿತಿ ತಿಳಿಯಾಗುವವರೆಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಸಾಧ್ಯವಾಗಬೇಕು. ಮಕ್ಕಳ ಭವಿಷ್ಯ ಕಟ್ಟುವ ಅನಿವಾರ್ಯತೆಯ ಕುರಿತಂತೆ ಮನನ ಮಾಡಿಸಿ ಸೌಹಾರ್ದ ವಾತಾವರಣ ಸೃಷ್ಟಿಸಬೇಕು.
- ಶಾಲಾ ಮಟ್ಟದಲ್ಲಿ ಸ್ಥಳೀಯ ಕಲಾವಿದರ, ಸ್ಥಳೀಯ ಸಾಹಿತಿಗಳ, ಸಾಧಕರನ್ನು ಆಹ್ವಾನಿಸಿ ಮಕ್ಕಳ ಆರೋಗ್ಯಕರ ಚರ್ಚೆಗೆ ವೇದಿಕೆ ಸೃಷ್ಟಿಸಬೇಕು. ವಿದ್ಯಾರ್ಥಿಗೆ ಅವರಿಂದ ಒಳಿತಿನ ಪಾಠ ಮಾಡಿಸಬೇಕು, ಪ್ರಭಾವಿತರನ್ನಾಗಿಸುವ ಪ್ರಯತ್ನ ಆಗಬೇಕು.
- ಸ್ಥಳೀಯವಾಗಿ ಇಂತಹ ವಿಭಿನ್ನ ಪ್ರಯತ್ನಗಳನ್ನು ಕೈಗೊಂಡ ಶಾಲೆಗಳನ್ನು ಗುರುತಿಸಿ, ಅಭಿನಂದಿಸುವ,ಪ್ರಯತ್ನಗಳನ್ನು ದಾಖಲಿಸುವ ವ್ಯವಸ್ಥೆ ಆಗಬೇಕು.
- ರಾಜ್ಯಮಟ್ಟದ ಪ್ರಖ್ಯಾತ ಚಲನಚಿತ್ರಕಲಾವಿದರು, ವಿವಿಧ ಸಾಧಕರುಗಳನ್ನು ಪ್ರೇರೇಪಿಸಿ ಮಕ್ಕಳನ್ನು ಉದ್ದೇಶಿಸಿ ಸಮವಸ್ತ್ರದ ಪ್ರಾಮುಖ್ಯತೆಯನ್ನು ಅರ್ಥೈಸುವ ಕಿರುಚಿತ್ರಗಳನ್ನು ದೃಶ್ಯೀಕರಿಸಿ ವೈರಲ್ ಮಾಡಬಹುದು. ಅಂತೆಯೇ ಖ್ಯಾತ ಹಿನ್ನೆಲೆ ಗಾಯಕರಿಂದ, ಗೀತಸಾಹಿತಿಗಳ ನೆರವನ್ನೂ ಪಡೆದು ವಿಶಿಷ್ಟ ಹಾಡುಗಳನ್ನು ರಚಿಸಿ ಚಿತ್ರೀಕರಿಸಬಹುದು.