Advertisement

ಸುರೇಶ್‌ಗೌಡರಿಂದ ಪಾಠ ಕಲಿಯಬೇಕಿಲ್ಲ

05:56 AM May 26, 2020 | Lakshmi GovindaRaj |

ನಾಗಮಂಗಲ: ಕೋವಿಡ್‌-19ರ ನಿಯಂತ್ರಣದ ಬಗ್ಗೆ ಸರ್ಕಾರ ಸನ್ನಿವೇಶಕ್ಕೆ ತಕ್ಕಂತೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದು ಈ ವಿಚಾರದಲ್ಲಿ ಜಿಲ್ಲಾಡಳಿತ ಸಕಾರಾತ್ಮಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ನಾವು ಯಾರಿಂದಲೂ  ಪಾಠ ಕಲಿಯುವ ಅಗತ್ಯವಿಲ್ಲ ಎಂದು ಶಾಸಕ ಸುರೇಶ್‌ಗೌಡರ ಹೇಳಿಕೆಗೆ ಜಿಲ್ಲಾ ಸಚಿವ ನಾರಾಯಣಗೌಡ ತಿರುಗೇಟು ನೀಡಿದರು.

Advertisement

ತಾಲೂಕಿನ ಸಾತೇನಹಳ್ಳಿಯಲ್ಲಿ ಕಂಟೈನ್ಮೆಂಟ್‌ ಝೊನ್‌ ತೆರವುಗೊಳಿಸಿ ಮಾತನಾಡಿ, ಜಿಲ್ಲಾ ಉಸ್ತುವಾರಿ  ಸಚಿವನಾಗಿ ನನಗೂ ಜವಾಬ್ದಾರಿಯಿದೆ. ಜವಾಬ್ದಾರಿ ಇಲ್ಲದೆ ಮಾತನಾಡುವವರ ಬಗ್ಗೆ ನಾನು ಮಾತನಾಡಲ್ಲ. ಕೊರೊನಾ ನಿಯಂತ್ರಣ ವಿಚಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕೆಂಬು ದು ನನ್ನ ಉದ್ದೇಶ. ಆದರೆ  ಇದನ್ನು ಸಹಿಸಿಕೊಳ್ಳದವರು ನೀಡುವ ಹೇಳಿಕೆಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

ಶಿಸ್ತು ಕ್ರಮ: ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಕೊರೊನಾ ಸೋಂಕು ವರದಿಯ ಯಡವಟ್ಟು ಕುರಿತು ಪ್ರತಿಕ್ರಿಯಿಸಿ, ಈ ಬಗ್ಗೆ  ಸಂಪೂರ್ಣ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಮಾಹಿತಿ ಪರಿಶೀಲಿಸಿ ತಪ್ಪಿತಸ್ಥರ ವಿರುದಟಛಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು. ಈ ವೇಳೆ ಉಪವಿಭಾಗಾಧಿಕಾರಿ ಶೈಲಜಾ, ಡಿವೈಎಸ್ಪಿ ವಿಶ್ವನಾಥ್‌, ತಹಶೀಲ್ದಾರ್‌  ಕುಂಞ ಅಹಮದ್‌, ಡಾ.ಧನಂಜಯ, ಸಿಪಿಐ ರಾಜೇಂದ್ರ, ತಾಪಂ ಇಒ ಅನಂತರಾಜು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next