Advertisement
ಇಲ್ಲಿನ ಆರ್‌ಎಸ್‌ಎಸ್ ಕೇಂದ್ರ ಕಚೇರಿಯಲ್ಲಿ ನಡೆಯುತ್ತಿರುವ ಮೂರು ದಿನಗಳ ಪ್ರತಿನಿಧಿ ಸಭೆಯಲ್ಲಿ ಜೋಷಿ ಅವರೇ ಪುನರಾಯ್ಕೆಯಾಗಿದ್ದಾರೆ ಎಂದು ಪ್ರಚಾರ ಪ್ರಮುಖ್ ಮನಮೋಹನ್ ವೈದ್ಯ ತಿಳಿಸಿದ್ದಾರೆ.
ಮಾತೃ ಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ: ಮಾತೃ ಭಾಷೆ ಅಥವಾ ಯಾವುದೇ ಭಾರತೀಯ ಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಒದಗಿಸಬೇಕು. ಇದಕ್ಕಾಗಿ ಸರಕಾರ ಸೂಕ್ತ ನೀತಿ ರೂಪಿಸಬೇಕು ಎಂದು ಆರೆಸ್ಸೆಸ್ ನಿಲುವಳಿ ಮಂಡಿಸಿದೆ. ಪ್ರತಿನಿಧಿ ಸಭೆಯಲ್ಲಿ ಈ ಸಂಬಂಧ ಒತ್ತಾಯಿಸಲಾಗಿದೆ. ಉನ್ನತ ಶಿಕ್ಷಣದ ಪ್ರವೇಶ ಪರೀಕ್ಷೆಯಲ್ಲೂ ಎಲ್ಲ ಸ್ಥಳೀಯ ಭಾಷೆಯ ಆಯ್ಕೆ ಅವಕಾಶವೂ ಇರಬೇಕು. ಬೋಧನೆ ಮತ್ತು ಅಧ್ಯಯನ ಪಠ್ಯವೂ ಭಾರತೀಯ ಭಾಷೆಯಲ್ಲಿ ಲಭ್ಯವಾಗಬೇಕು ಎಂದು ನಿಲುವಳಿಯಲ್ಲಿ ವಿವರಿಸಲಾಗಿದೆ. ಆಕಾಶವಾಣಿಗಿಂತ ಪ್ರಭಾವಿ: ಭಾರತದ ಶೇ.92ರಷ್ಟು ಭೂಭಾಗವನ್ನು ಆಕಾಶವಾಣಿ ವ್ಯಾಪಿಸಿದ್ದರೆ, ಆರೆಸ್ಸೆಸ್ ಶೇ. 95 ರಷ್ಟು ಭೂಭಾಗ ವ್ಯಾಪಿಸಿದ್ದಾಗಿ ಹೇಳಲಾಗಿದೆ. ನಾಗಾ ಲ್ಯಾಂಡ್, ಮಿಜೋರಾಂ, ಕಾಶ್ಮೀರದ ಕೆಲ ಭಾಗ ಹೊರತು ಪಡಿಸಿ ಬಹುತೇಕ ಪ್ರದೇಶಗಳನ್ನು ವ್ಯಾಪಿಸಿದ್ದೇವೆ ಎಂದು ಆರೆಸ್ಸೆಸ್‌ನ ಜಂಟಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಗೋಪಾಲ್ ಹೇಳಿದ್ದಾರೆ.