Advertisement

ಯಕ್ಷ ಬಾಂಧವ್ಯ ಪ್ರಶಸ್ತಿಗೆ ಸುರೇಶ ಬಂಗೇರ 

06:00 AM Nov 16, 2018 | Team Udayavani |

 ಸಾಲಿಗ್ರಾಮ ಮೇಳದ ವತಿಯಿಂದ ನೀಡುವ ಪುರುಷ ವೇಷದಾರಿ ಶಿರಿಯಾರ ಮಂಜು ನಾಯ್ಕರ ನೆನಪಿನ “ಯಕ್ಷ ಬಾಂಧವ್ಯ’ ಪ್ರಶಸ್ತಿಯನ್ನು ಈ ಬಾರಿ ನಡುತಿಟ್ಟಿನ ಪ್ರಾತಿನಿಧಿಕ ಪುರುಷ ವೇಷದಾರಿಯಾಗಿರುವ ಕೋಟ ಸುರೇಶ ಬಂಗೇರ ಇವರಿಗೆ ನೀಡಲಾಗುತ್ತದೆ. ಪ್ರಶಸ್ತಿ ಪ್ರದಾನ ಸಾಲಿಗ್ರಾಮ ಮೇಳದ ಪ್ರಥಮ ಡೇರೆ ಆಟ ಲಾಗಾಯ್ತಿನಿಂದಲೂ ನೆಡೆದುಕೊಂಡು ಬಂದ ಶಿರಿಯಾರದಲ್ಲಿ ನ. 16ರಂದು ನೆರವೇರಲಿದೆ. 

Advertisement

 ಶಿರಿಯಾರ ಮಂಜು ನಾಯ್ಕರ ಲಾಲಿತ್ಯಪೂರ್ಣ ಶ್ರುತಿಬದ್ದ ಮಾತುಗಾರಿಕೆ, ವೀರಭದ್ರ ನಾಯ್ಕರ ಹೆಜ್ಜೆಗಾರಿಕೆ, ಮೊಳಹಳ್ಳಿ ಹೆರಿಯ ನಾಯ್ಕರ ರಂಗತಂತ್ರ ಮತ್ತು ಕಿರು ಹೆಜ್ಜೆ ಈ ಮೂರನು °ಒಮ್ಮೆಗೆ ನೋಡಬೇಕಾದರೆ ಸುರೇಶ ಬಂಗೇರರ ವೇಷಗಾರಿಕೆಯ ಸೊಗಸನ್ನು ನೋಡಬೇಕು.ಕನಕಾಂಗಿ ಕಲ್ಯಾಣ,ಜಾಂಬವತಿ ಕಲ್ಯಾಣ, ಕೃಷ್ಣಾರ್ಜುನ-ಸುಭದ್ರ ಕಲ್ಯಾಣ ಸಹಿತ ಯಾವುದೇ ಪ್ರಸಂಗದ ಕೃಷ್ಣನಿರಲಿ ಅಲ್ಲಿ ಮಂಜುನಾಯ್ಕರ ನಿರಾತಂಕ ನಿರರ್ಗಳವಾದ ಮಾತುಗಾರಿಕೆ,ಕರ್ಣಾರ್ಜುನದ ಅರ್ಜುನ,ವೀರಮಣಿ ಕಾಳಗದ ಪುಷ್ಕಳ,ತಾಮ್ರದ್ವಜ ಮುಂತಾದ ವೇಷಗಳಲ್ಲಿ ಹೆರಿಯನಾಯ್ಕರ ರಂಗ ನಿರ್ವಹಣೆ,ಹೆಜ್ಜೆಗಾರಿಕೆ,ಅತಿಕಾಯನಂಥ ಪಾತ್ರಗಳಲ್ಲಿ ವೀರಭದ್ರ ನಾಯ್ಕರ ಮಟಾ³ಡಿ ಶೈಲಿಯನ್ನು ಗುರುತಿಸಬಹುದಾದ ಬಡಗುತಿಟ್ಟಿನ ಅಪರೂಪದ ಕಲಾವಿದರಲ್ಲಿ ಇವರೂ ಒಬ್ಬರು. ಎಲ್ಲಿಯೂ ಯಕ್ಷಗಾನದ ಆವರಣ ಭಂಗ ಮಾಡದೆ ಪಾತ್ರಗಳ ಔಚಿತ್ಯ ಕೆಡಿಸದೆ,ಎದುರು ಪಾತ್ರದಾರಿಗಳಿಗೆ ಅನಗತ್ಯ ಸವಾಲು ಹಾಕದೇ ಹಿರಿಯರು ಹಾಕಿಕೊಟ್ಟ ಚೌಕಟ್ಟಿನೊಳಗೆ ಕಡೆದು ನಿಲ್ಲಿಸಿದ ಬಿಂಬದ ಹಾಗೆ ಅವರ ಪಾತ್ರಚಿತ್ರಣ. ಮಂದಾರ್ತಿ ಮೇಳದಲ್ಲಿ ಗೆಜ್ಜೆಕಟ್ಟಿ ನಂತರ ದೀರ್ಘ‌ಕಾಲ 17 ವರ್ಷ ಸೌಕೂರು,ಸಾಲಿಗ್ರಾಮ,ಪೆರ್ಡೂರು ಕಮಲಶಿಲೆ ಮೇಳದಲ್ಲಿ ಸೇವೆ ಸಲ್ಲಿಸಿ ಸದ್ಯಅಮೃತೇಶ್ವರಿ ಮೇಳದ ಪುರುಷ ವೇಷದಾರಿ ಜೊತೆಗೆ ಮೇಳದ ಪ್ರಬಂಧಕರಾಗಿ ಸೇವೆ ಸಲ್ಲಿಸುತಿದ್ದಾರೆ.

ಉದಯ 

Advertisement

Udayavani is now on Telegram. Click here to join our channel and stay updated with the latest news.

Next