ಏನಾದರಾಗಲಿ, ಈ ಹುಡುಗಿ ಯಾರಂತ ತಿಳಿದುಕೊಳ್ಳಲೇಬೇಕು ಅಂತ ಮನಸ್ಸು ಹಠ ಹಿಡಿಯಿತು. ಯಾವುದೋ ಅಪ್ಲಿಕೇಷನ್ ತುಂಬುವ ನೆಪ ಹೂಡಿ, ನಿನಗಾಗಿ ಕಾಯುತ್ತಾ ನಿಂತೆ. ಹತ್ತು ನಿಮಿಷದ ನಂತರ ನೀನು ಕೆಲಸ ಮುಗಿಸಿ, ಹೊರಡಲನುವಾದೆ. ನಿನಗೆ ಗೊತ್ತೇ ಆಗದಂತೆ ನಾನೂ ನಿನ್ನನ್ನು ಹಿಂಬಾಲಿಸಿದೆ.
ಅವತ್ತು ಯಾವುದೋ ಕೆಲಸದ ನಿಮಿತ್ತ ಬ್ಯಾಂಕ್‌ಗೆ ಹೋಗಿದ್ದೆ. ಹಿಂದಿನ ಎರಡು ದಿನ ಬ್ಯಾಂಕಿಗೆ ರಜೆ ಇದ್ದುದ್ದರಿಂದಲೋ ಏನೋ ಬ್ಯಾಂಕ್ ಜನರಿಂದ ಗಿಜಿಗುಡುತ್ತಿತ್ತು. ಬ್ಯಾಂಕ್ ಕೆಲಸ ಅಂದ್ರೆ ಮಹಾನ್ ಬೋರು ಅಂತ ಬೈಯುತ್ತಲೇ, ಬಂದ ಕೆಲಸ ಮುಗಿಸಿಕೊಂಡು ಹೊರಡುವವನಿದ್ದೆ. ಆಗ ಕಣ್ಮುಂದೆ ಮಿಂಚೊಂದು ಪಾಸ್ ಆದಂತಾಯ್ತು. ಏನಾಯ್ತು ಅಂತ ಕಣ್ಣರಳಿಸಿ ನೋಡಿದರೆ, ನೀನು ನೂರು ವ್ಯಾಟ್ ಬಲ್ಬ್ನಂತೆ ನಸುನಗುತ್ತಾ ಕ್ಯಾಷಿಯರ್ ಬಳಿ ಮಾತಾಡುತ್ತಿದ್ದೆ. ಅಬ್ಟಾ, ಒಂದ್ಸಾರಿ ಇಲ್ಲಿಂದ ಹೊರಟರೆ ಸಾಕಪ್ಪಾ ಅನ್ನುತ್ತಿದ್ದವನನ್ನು ನಿನ್ನ ನಗು ಸ್ಟಾಚ್ಯು ಹೇಳಿ ನಿಲ್ಲಿಸಿಬಿಟ್ಟಿತ್ತು.
ಏನಾದರಾಗಲಿ, ಈ ಹುಡುಗಿ ಯಾರಂತ ತಿಳಿದುಕೊಳ್ಳಲೇಬೇಕು ಅಂತ ಮನಸ್ಸು ಹಠ ಹಿಡಿಯಿತು. ಯಾವುದೋ ಅಪ್ಲಿಕೇಷನ್ ತುಂಬುವ ನೆಪ ಹೂಡಿ, ನಿನಗಾಗಿ ಕಾಯುತ್ತಾ ನಿಂತೆ. ಹತ್ತು ನಿಮಿಷದ ನಂತರ ನೀನು ಕೆಲಸ ಮುಗಿಸಿ, ಹೊರಡಲನುವಾದೆ. ನಿನಗೆ ಗೊತ್ತೇ ಆಗದಂತೆ ನಾನೂ ನಿನ್ನನ್ನು ಹಿಂಬಾಲಿಸಿದೆ. ಒಂದೆರಡು ಬಾರಿ, ನೀನು ತಿರುಗಿ ನನ್ನತ್ತ ನೋಡಿ, ನಸು ನಕ್ಕಂತಾಯ್ತು. ಸರಿ, ಇವಳನ್ನು ಇವತ್ತು ಪರಿಚಯ ಮಾಡಿಕೊಳ್ಳಲೇಬೇಕು ಅಂತ ನಿರ್ಧರಿಸಿದೆ. ಅಷ್ಟರಲ್ಲಿ ನೀನು, ಪಕ್ಕದಲ್ಲಿದ್ದ ದೇವಸ್ಥಾನದತ್ತ ಹೊರಟೆ. ದೇವಿಯ ದರ್ಶನ ಅದಾಗಲೇ ಆಗಿದ್ದರೂ, ನಿನ್ನನ್ನು ಮಾತಾಡಿಸುವ ಸಲುವಾಗಿ ನಾನೂ ದೇವಸ್ಥಾನದ ಆವರಣಕ್ಕೆ ಬಂದೆ.
ನೀನು ಅಲ್ಲೇ ಸ್ವಲ್ಪ ದೂರದಲ್ಲಿದ್ದ ನಲ್ಲಿಯಿಂದ ಕಾಲು ತೊಳೆಯುತ್ತಿದ್ದೆ. ಶೂ ಹಾಕಿದ್ದೇನೆಂಬುದನ್ನೂ ಮರೆತು ನಾನು ಕಾಲನ್ನು ನಲ್ಲಿಯ ಕೆಳಗೆ ತಂದಾಗ ನೀನು- “ರೀ, ಶೂ ಕಳಚಿ ಕಾಲು ತೊಳೆಯಿರಿ’ ಅಂದು, ದೇವಸ್ಥಾನದತ್ತ ಹೊರಟೆ. ನೀನು ಹೋದ ದಾರಿ ನೋಡುತ್ತಾ, ಬೇಗ ಬೇಗ ಕಾಲು ತೊಳೆಯಬೇಕು ಅಂತ ನಾನು ಶೂ ಕಳಚಲು ಶುರು ಮಾಡಿದೆ. ಆಗ ಯಾರೋ ನನ್ನ ಕಾಲು ಹಿಡಿದು ಎಳೆದಂತಾಯ್ತು. ನಾನು ನಿನ್ನನ್ನು ಕೂಗಬೇಕು ಅಂದುಕೊಳ್ಳುವಷ್ಟರಲ್ಲಿ, ಯಾರೋ ನನ್ನ ಹೆಸರನ್ನು ಕೂಗುತ್ತಾ, ಕಾಲು ಜಗ್ಗತೊಡಗಿದರು…. ಎಚ್ಚರವಾದಾಗ ನಮ್ಮಪ್ಪ ಹೊದಿಕೆ ಎಳೆಯುತ್ತಾ, “ಏಳ್ಳೋ, ಗಂಟೆ ಎಂಟಾಯ್ತು. ಬ್ಯಾಂಕ್‌ಗೆ ಹೋಗ್ಬೇಕು ಅಂತಿದ್ಯಲ್ಲ’ ಅಂತ ನನ್ನನ್ನು ಎಬ್ಬಿಸುತ್ತಿದ್ದರು.
ಓ ಕನಸಿನ ಕನ್ಯೆಯೇ, ನಿನ್ನ ಮುಖ ನನಗಿನ್ನೂ ನೆನಪಿದೆ. ಇವತ್ತು ನೀನು ಖಂಡಿತಾ ಬ್ಯಾಂಕ್‌ಗೆ ಬರಿ¤àಯ, ಅಂತ ಒಳ ಮನಸ್ಸು ಹೇಳುತ್ತಿದೆ. ನಿನಗಾಗಿ ಕಾಯ್ತಾ ಇರಿ¤àನಿ…ಆಯ್ತಾ?
ಇಂತಿ ನಿನ್ನ ಹಿಂಬಾಲಕ
-ಮಣಿಕಂಠ ಪಾ ಹಿರೇಮಠ