ಸುರತ್ಕಲ್: ಹಲವಾರು ಪ್ರತಿಭಟನೆಗಳ ನಂತರ ಇಲ್ಲಿನ ಟೋಲ್ ಗೇಟಿಗೆ ಕೊನೆಗೂ ಮುಕ್ತಿ ದೊರಕಿದ್ದು, ಶುಕ್ರವಾರದಿಂದ ವಾಹನಗಳು ಉಚಿತವಾಗಿ ಸಂಚರಿಸುತ್ತಿವೆ. ಈ ನಡುವೆ ಈ ಶುಲ್ಕ ಕೇಂದ್ರದಲ್ಲಿ ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದ 50ಕ್ಕೂ ಅಧಿಕ ಮಂದಿ ಉದ್ಯೋಗ ವಂಚಿತರಾಗಿದ್ದಾರೆ.
ಗುರುವಾರ ಮುಂಜಾನೆ ಶುಲ್ಕ ಕೇಂದ್ರದ ಕೆಲ ಸಿಬ್ಬಂದಿಗಳು ಆಗಮಿಸಿ ಕುರ್ಚಿಗಳಲ್ಲಿ ಕುಳಿತು ಮೊಬೈಲ್ ವೀಕ್ಷಿಸುತ್ತಿದ್ದ ದೃಶ್ಯ ಕಂಡು ಬಂತು.
ಹೆಜಮಾಡಿಯ ನವಯುಗ ಟೋಲ್ ಗೇಟ್ ಗೆ ಕೇಂದ್ರ ಸರ್ಕಾರ ನಡೆಸುತ್ತಿದ್ದ ಸುರತ್ಕಲ್ ಟೋಲ್ ಗೇಟ್ ವಿಲೀನವಾಗಿದೆ. ಇದರ ನಡುವೆ ಇಲ್ಲಿನ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಇಂದು ಸಂಜೆ ವಿಜಯೋತ್ಸವ ಸಭೆ ನಡೆಸಲು ನಿರ್ಧರಿಸಿದೆ.
ಕಳೆದ ಬಾರಿ ಟೋಲ್ ಗೇಟ್‌ನಲ್ಲಿ ಸಮಸ್ಯೆ ಉಂಟಾದಾಗ ಸಮಾಜ ಸೇವಕ ಆಸೀಫ್ ಆಪದ್ಭಾಂಧವ 10-15 ದಿನಗಳ ಕಾಲ ವಿಶೇಷ ರೀತಿಯಲ್ಲಿ ದಿನಕ್ಕೊಂದರಂತೆ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡು ಗಮನ ಸೆಳೆದಿದ್ದರು. ಇಂದು ಟೋಲ್ ಗೇಟ್ ರದ್ದಾಗಿರುವುದಕ್ಕೆ ಸಿಹಿ ಹಂಚಿ ಸಂಭ್ರಮಿಸಿದರು.