Advertisement

ಸುರತ್ಕಲ್‌: ಕೆಲಸಕ್ಕೆಂದು ತೆರಳಿ ನಾಪತ್ತೆಯಾದವಳು ವಿವಾಹವಾಗಿ ಪತ್ತೆ!

07:31 PM Jan 29, 2023 | Team Udayavani |

ಸುರತ್ಕಲ್‌: ಜು.16ರಂದು ಕೆಲಸಕ್ಕೆ ತೆರಳಿದವಳು ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದ ಸುರತ್ಕಲ್‌ 3ನೇ ಬ್ಲಾಕ್‌ ನಿವಾಸಿ ,ಮಣಪ್ಪುರಂ ಫೈನಾನ್ಸ್‌ ಉದ್ಯೋಗಸ್ಥೆಯಾಗಿರುವ ಶಿವಾನಿ(20)ತನ್ನ ಪ್ರಿಯಕರನೊಂದಿಗೆ ಮದುವೆಯಾಗಿ ಪತ್ತೆಯಾಗಿದ್ದಾಳೆ.ಪೊಲೀಸರು ಮಾಹಿತಿ ಆದಾರದಲ್ಲಿ ಪತ್ತೆ ಮಾಡಿ ಕರೆ ತಂದರು.

Advertisement

ಜ.24ರಂದು ನಗರದ ಕಂಕನಾಡಿ ಠಾಣೆಯ ಪೊಲೀಸ್‌ ಆಧಿಕಾರಿಗಳ ಮುಂದೆ ಹಾಜರಾಗಿ ತಾನು ಪ್ರೀತಿಸಿದವನನ್ನು ಸ್ವಯೇಚ್ಚೆಯಿಂದ ಮದುವೆಯಾಗಿದ್ದಾಗಿ ಹೇಳಿಕೆ ನೀಡಿದ್ದು ಪತಿಯೊಂದಿಗೆ ಬಾಳುವುದಾಗಿ ಲಿಖೀತ ಹೇಳಿಕೆ ನೀಡಿದ್ದಾಳೆ.

ಲವ್‌ ಜಿಹಾದ್‌ ಆತಂಕದ ನಡುವೆ ಒಂದುವಾರ ಪೊಲೀಸರು ಪತ್ತೆಗೆ ಪ್ರಯತ್ನಿಸಿದ್ದರು. ಗೋವ, ಮುಂಬೈಗೆ ತೆರಳಿದ್ದ ಜೋಡಿ ಹಣದ ಸಮಸ್ಯೆ ಎದುರಾದಾಗ ಎರಡು ಮೊಬೈಲ್‌ ಮಾರಿ ಅದರ ಹಣದಿಂದ ಸ್ವಲ್ಪ ಸಮಯ ಕಳೆದಿದ್ದರು. ಸ್ನೇಹಿತರ ಜತೆ ಸಂಪರ್ಕ ಹೊಂದಿದ್ದನ್ನು ಪತ್ತೆ ಹಚ್ಚಿದ ಪೊಲೀಸರು ಯುಪಿಐ ಹಣವನ್ನು ಹಾಕಿದ ವಿಳಾಸ ಪತ್ತೆ ಮಾಡಿ ಈ ಜೋಡಿಯ ಸಂಪರ್ಕ ಸಾಧಿಸಿದ್ದರು.

ಇದನ್ನೂ ಓದಿ: ಹಿಂದೂಗಳು ಒಂದಾಗುವುದೇ ಎಲ್ಲದಕ್ಕೂ ಉತ್ತರ: ಡಾ| ಕಲ್ಲಡ್ಕ ಪ್ರಭಾಕರ್‌ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next