ಮಂಗಳೂರು: ಕಳೆದ ಮಂಗಳವಾರ ದುಬೈನಿಂದ ಬಂದಿರುವ ವಿಮಾನದಲ್ಲಿ ಬಂದ 15 ಮಂದಿಗೆ ಕೋವಿಡ್-19 ಸೋಂಕು ದೃಢವಾದ ಹಿನ್ನಲೆ, ಪ್ರಯಾಣದ ವೇಳ ಅವರ ಬಳಿ ಕುಳಿತಿದ್ದವರನ್ನೂ ತಪಾಸಣೆ ಮಾಡಿ ನಿಗಾ ಇಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದುಬೈನಲ್ಲಿ ಪ್ರಯಾಣಿಕರನ್ನು ಕೇವಲ ಸ್ಕ್ರೀನಿಂಗ್ ಮಾತ್ರ ಮಾಡುತ್ತಾರೆ. ಯಾವುದೇ ಟೆಸ್ಟ್ ಗಳನ್ನು ಮಾಡುದಿಲ್ಲ. ಮುಂದಿನ ವಿಮಾನದ ಪ್ರಯಾಣಿಕರ ಸಂಪೂರ್ಣ ಪರೀಕ್ಷೆ ಮಾಡಬೇಕಾಗುತ್ತದೆ. ಈ ಬಗ್ಗೆ ಸರ್ಕಾರದ ಜೊತೆ ಮಾತುಕತೆ ಮಾಡುತ್ತೇವೆ ಎಂದರು.
ಮೇ 12ರಂದು 179 ಮಂದಿ ವಿಮಾನದಲ್ಲಿ ಬಂದಿದ್ದಾರೆ. 125 ಜನ ಮಂಗಳೂರು ನಗರದ ಹತ್ತು ಹೋಟೆಲ್ ಗಳಲ್ಲಿ ಕ್ವಾರೆಂಟೈನ್ ನಲ್ಲಿದ್ದಾರೆ. 15 ಮಂದಿಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಉಳಿದಂತೆ ಸುರತ್ಕಲ್ ಮೂಲದ ಮಹಿಳೆಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಆದ್ದರಿಂದ ಸುರತ್ಕಲ್ ಪ್ರದೇಶವನ್ನು ಕಂಟೈನ್ಮೆಂಟ್ ಮಾಡಲಿದ್ದೇವೆ ಎಂದರು.
ದುಬೈನಿಂದ ಬಂದವರಲ್ಲಿ 38 ಮಂದಿ ಗರ್ಭಿಣಿಯರು ಇದ್ದರು. ಆದರೆ ಇದರಲ್ಲಿ ಯಾರಿಗೂ ಪಾಸಿಟಿವ್ ಕಂಡುಬಂದಿಲ್ಲ ಎಂದ ಅವರು ಒಂದೇ ಫ್ಯಾಮಿಲಿ ಯಲ್ಲಿ ಮೂರು ಮಂದಿಗೆ ಕೋವಿಡ್-19 ಪಾಸಿಟಿವ್ ಬಂದಿದ್ದು, 45 ವರ್ಷದ ಗಂಡ, 33 ವರ್ಷದ,ಹೆಂಡತಿ 6 ವರ್ಷದ ಮಗುವಿಗೆ ಸೋಂಕು ತಾಗಿದೆ ಎಂದರು.
ಮೇ 18 ರಂದು ದುಬೈನಿಂದ ಮತ್ತೊಂದು ವಿಮಾನ ಮಂಗಳೂರಿಗೆ ಬರಲಿದೆ. ಇದರಲ್ಲಿ 171 ಮಂದಿ ಪ್ರಯಾಣಿಕರು ಮಂಗಳೂರಿಗೆ ಬರಲಿದ್ದಾರೆ. ದ.ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಮಾಹಿತಿ ನೀಡಿದರು.