Advertisement

Surathkal: ಅಶ್ಲೀಲ ಚಿತ್ರ ಕಳುಹಿಸಿ ಯುವತಿಗೆ ನಿರಂತರ ಕಿರುಕುಳ; ಯುವಕ ವಶಕ್ಕೆ

01:20 AM Oct 02, 2024 | Team Udayavani |

ಸುರತ್ಕಲ್‌: ಮಂಗಳೂರಿನಲ್ಲಿ ಶಿಕ್ಷಣ ಪಡೆಯುತ್ತಿರುವ ಕೃಷ್ಣಾಪುರ ಬಳಿಯ ವಿದ್ಯಾರ್ಥಿನಿಯೋರ್ವಳಿಗೆ ಆಶ್ಲೀಲ ಚಿತ್ರಗಳನ್ನು ಕಳುಹಿಸುತ್ತಾ ಯುವಕನೊಬ್ಬ ಕಿರುಕುಳ ನೀಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಈ ಬಗ್ಗೆ ವಿದ್ಯಾರ್ಥಿನಿಯ ಪೋಷಕರು ಸುರತ್ಕಲ್‌ ಠಾಣೆಗೆ ನೀಡಿದ ದೂರಿನ ಮೇರೆಗೆ ಮೆಸೇಜ್‌ ಕಳುಹಿಸಿದ್ದ ಮಂಜನಾಡಿ ಬಳಿಯ ನಿವಾಸಿ ಮೊಹಮ್ಮದ್‌ ಶಾಕೀಬ್‌ನನ್ನು ವಶಕ್ಕೆ ಪಡೆಯಲಾಗಿದೆ. ಎಷ್ಟು ಬೇಕಾದರೂ ದುಡ್ಡು ಕೊಡಬಲ್ಲೆ, ಬರ್ತೀಯಾ ಎಂದು ಆಶ್ಲೀಲ ಚಿತ್ರ ಕಳುಹಿಸಿ ಪದೇಪದೆ ವಾಟ್ಸ್‌ಅಪ್‌ ಮೆಸೇಜ್‌ ಮೂಲಕ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ಇದರಿಂದ ವಿದ್ಯಾರ್ಥಿನಿ ಮಾನಸಿಕ ಆಘಾತಕ್ಕೆ ತುತ್ತಾಗಿ ಕಡಿಮೆ ರಕ್ತದೊತ್ತಡದ ಸಮಸ್ಯೆಗೂ ಒಳಗಾಗಿ ಕಾಲೇಜಿಗೂ ರಜೆ ಹಾಕಿ ಮನೆಯಲ್ಲೇ ಕುಳಿತುಕೊಳ್ಳುವಂತಾಗಿದೆ ಎಂದು ಹೆತ್ತವರು ದೂರಿದ್ದಾರೆ.

ಚೊಕ್ಕಬೆಟ್ಟಿನ ಸ್ನೇಹಿತೆಯ ಬಳಿಯಿಂದ ನಂಬರ್‌ ಪಡೆದಿದ್ದ ಆತ ಯುವತಿ ಹಿಂದೆ ಬಿದ್ದು ಕಿರುಕುಳ ನೀಡತೊಡಗಿದ್ದ ಎನ್ನಲಾಗಿದೆ. ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕಿದ್ದ ಆತ ಅಲ್ಲಿಂದಲೇ ಈ ಕೃತ್ಯ ಎಸಗುತ್ತಿದ್ದ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next