Advertisement

ಸುರತ್ಕಲ್‌ ಟೋಲ್‌ ಗೇಟ್‌: ಸ್ಥಳೀಯ ವಾಹನಗಳಿಂದ ಸುಂಕ ಸಂಗ್ರಹ ತಡೆಗೆ ಆಗ್ರಹಿಸಿ ಪ್ರತಿಭಟನೆ

10:53 PM Jul 16, 2019 | Team Udayavani |

ಸುರತ್ಕಲ್‌: ಇಲ್ಲಿನ ಟೋಲ್‌ಗೇಟ್‌ನಲ್ಲಿ ಜು. 16ರರಿಂದ ಸ್ಥಳೀಯ ಖಾಸಗಿ ಕಾರುಗಳಿಗೂ ಟೋಲ್‌ ಪಡೆಯುವ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆ ನಡೆಯಿತು.
ಬೆಳಗ್ಗೆ 7 ಗಂಟೆಯಿಂದಲೇ ಟೋಲ್‌ ಗೇಟ್‌ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಮಾನ ಮನಸ್ಕ ಸಂಘಟನೆಯ ಮುಖಂಡರು, ಕಾರ್ಯಕರ್ತರು ಟೋಲ್‌ ಗೇಟ್‌ ಮುಂಭಾಗ ಜಮಾಯಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಕಾರರು ಆಗಮಿಸಿದ್ದರಿಂದ ಬೆಳಗ್ಗೆ ಟೋಲ್‌ ಪಡೆಯುವಲ್ಲಿ ಗುತ್ತಿಗೆದಾರರು ಮುಂದಾಗ ಲಿಲ್ಲ. ಬಳಿಕ ಟೋಲ್‌ ವಿರೋಧಿ ಹೋರಾಟ ಸಮಿತಿ ಸದಸ್ಯರು ಟೋಲ್‌ ಮುಂಭಾಗ ಜಮಾಯಿಸಿ ಜಿಲ್ಲಾ ಉಸ್ತುವಾರ ಸಚಿವರಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದ ಮೇರೆಗೆ ಉಸ್ತುವಾರಿ ಸಚಿವರು ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಟೋಲ್‌ ಸಂಗ್ರಹಿಸದಂತೆ ಆದೇಶಿಸಬೇಕು ಎಂದು ಸೂಚಿಸಿದ್ದರಿಂದ ಜಿಲ್ಲಾಡಳಿತ ಮುಂದಿನ ಆದೇಶ ಬರುವವರಗೆ ಸ್ಥಳೀಯ ವಾಹನ ಗಳಿಂದ ಟೋಲ್‌ ಸಂಗ್ರಹಿಸದಂತೆ ಸೂಚಿ ಸಿತು. ಈ ಹಿನ್ನಲೆಯಲ್ಲಿ ಸುಂಕ ಸಂಗ್ರಹದ ತೀರ್ಮಾನಕ್ಕೆ ಹಿನ್ನಡೆ ಉಂಟಾಗಿ 19 ರಿಜಿಸ್ಟ್ರೇಷನ್‌ ವಾಹನಗಳು ಸುಂಕ ಪಾವತಿಸದೆ ನಿರಾತಂಕವಾಗಿ ಓಡಾಡಿದವು ಎಂದಿನಂತೆ ಓಡಾಡಿದವು.

Advertisement

ಹೋರಾಟ ಸಮಿತಿ ಪ್ರಮುಖರು ಮಾತಾಡಿ, ಸ್ಥಳೀಯ ವಾಹನಗಳಿಗೆ ಸುಂಕ ವಿ ಸುವ ತೀರ್ಮಾನವನ್ನು ಹಿಂಪಡೆದದ್ದನ್ನು ಸ್ವಾಗತಿಸಿ, ಮುಂದೆ ಮತ್ತೆ ಟೋಲ್‌ ಸಂಗ್ರಹಿಸಿದರೆ ತತ್‌ಕ್ಷಣವೇ ತೀವ್ರ ಪ್ರತಿಭಟನೆ ನಡೆಸುವುದಾಗಿ ಹಾಗೂ ಈ ಪ್ರಶ್ನೆಯಲ್ಲಿ ಜೈಲಿಗೆ ಹೋಗಲೂ ಸಿದ್ಧ ಎಂದು ಘೋಷಿಸಿಸಿದರು.

ಟೋಲ್‌ ಗೇಟ್‌ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್‌ ಕಾಟಿಪಳ್ಳ, ಮಾಜಿ ಸಚಿವ ಅಭಯ ಚಂದ್ರ ಜೈನ್‌, ಮಾಜಿ ಶಾಸಕ ವಿಜಯ ಕುಮಾರ್‌ ಶೆಟ್ಟಿ, ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ, ಪುರುಷೋತ್ತಮ ಚಿತ್ರಾಪುರ, ರೇವತಿ ಪುತ್ರನ್‌, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮಿ¤ಯಾಜ್‌, ಮುಖಂಡರಾದ ಶ್ರೀನಾಥ್‌ ಕುಲಾಲ್‌, ಅಜ್ಮಲ್‌ ಅಹ್ಮದ್‌, ಮಕ್ಸೂದ್‌ ಬಿ.ಕೆ., ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿಯ ಅಧ್ಯಕ್ಷರಾದ ಹರೀಶ್‌ ಪುತ್ರನ್‌, ಪದಾ ಧಿಕಾರಿಗಳಾದ ಧನಂಜಯ ಮಟ್ಟು, ವಸಂತ ಬೆರ್ನಾಡ್‌, ಶಶಿಕಾಂತ್‌ ಶೆಟ್ಟಿ, ಶಾಲೆಟ್‌ ಪಿಂಟೊ, ಸದಾಶಿವ ಅಮೀನ್‌, ಉದಯ ಶೆಟ್ಟಿ, ಸುನಿಲ್‌ ಆಳ್ವ, ನಾರಾಯಣ, ಮ್ಯಾಕ್ಸಿ ಕ್ಯಾಬ್‌ ಟ್ಯಾಕ್ಸಿಮೆನ್‌ ಅಸೋಶಿಯೇಷನ್‌ನ ಜಿಲ್ಲಾಧ್ಯಕ್ಷರಾದ ದಿನೇಶ್‌ ಕುಂಪಲ, ವಿಜಯ್‌ ಶಕ್ತಿನಗರ, ವಿಶಾಲ್‌ ಕುಂಪಲ, ಇಂಟಕ್‌ ಮುಖಂಡರಾದ ಸದಾಶಿವ ಶೆಟ್ಟಿ, ಚಿತ್ತರಂಜನ್‌ ಶೆಟ್ಟಿ ಹೋರಾಟ ಸಮಿತಿಯ ಪ್ರಮುಖರಾದ ರಮೇಶ್‌ ಟಿ.ಎನ್‌., ರಶೀದ್‌ ಮುಕ್ಕ, ಮೂಸಬ್ಬ ಪಕ್ಷಿಕೆರೆ, ಹರೀಶ್‌ ರಾವ್‌ ಪೇಜಾವರ, ಪ್ರಭಾಕರ ಶೆಟ್ಟಿ, ರಾಜೇಶ್‌ ಶೆಟ್ಟಿ ಪಡ್ರೆ, ಸಲೀಂ ಶ್ಯಾಡೋ ಮತ್ತಿತರರು ಭಾಗವಹಿಸಿದ್ದರು.

ಟೋಲ್‌ ಸಂಗ್ರಹ ರದ್ದತಿಗೆ ಬಿಜೆಪಿ ಆಗ್ರಹ
ಸುರತ್ಕಲ್‌: ಇಲ್ಲಿನ ಹೆದ್ದಾರಿಯಲ್ಲಿ ಜು. 16ರರಿಂದ ಸ್ಥಳೀಯ ಖಾಸಗೀ ಕಾರು ಗಳಿಗೂ ಟೋಲ್‌ ಪಡೆಯುವ ನಿರ್ಧಾರ ವನ್ನು ವಿರೋಧಿ ಸಿ ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ಮತ್ತು ಮೂಲ್ಕಿ ಮೂಡುಬಿದಿರೆ ಮಂಡಲವು ಟೋಲ್‌ಗೇಟ್‌ ಮುಂಭಾಗ ಪ್ರತಿಭಟನೆ ನಡೆಸಿತು.

ಬೆಳಗ್ಗೆ ಏಳು ಗಂಟೆಯಿಂದ ಪ್ರತಿಭಟನೆ ಆರಂಭಿಸಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಗುತ್ತಿಗೆ ಕಂಪೆನಿಗಳ ವಿರುದ್ಧ ಘೋಷಣೆ ಕೂಗಿದರಲ್ಲದೆ ಸ್ಥಳೀಯ ಖಾಸಗಿ ವಾಹನ ಮಾಲಕರಿಗೆ ಯಾವುದೇ ಕಾರಣಕ್ಕೂ ಟೋಲ್‌ ಪಾವತಿಸದಿರುವಂತೆ ಕರಪತ್ರ ಹಂಚಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ಮಂಗಳೂರು ನಗರ ಉತ್ತರ ಪ್ರಧಾನ ಕಾರ್ಯದರ್ಶಿ ಅಶೋಕ್‌ ಕೃಷ್ಣಾಪುರ ಅವರು ಗುತ್ತಿಗೆದಾರರು ನಷ್ಟದ ನೆಪವೊಡ್ಡಿ ಸ್ಥಳೀಯರಲ್ಲಿ ಟೋಲ್‌ ನೆಪದಲ್ಲಿ ವಸೂಲಿಗೆ ಇಳಿದಿದ್ದಾರೆ. ಈಗಾಗಲೇ ಅ ಧಿಕ ಟೋಲ್‌ ನೀಡುವ ಸ್ಥಳೀಯರು ಮತ್ತೂಂದು ಹೊರೆ ಹೊರಲು ಖಂಡಿತಾ ಸಾಧ್ಯವಿಲ್ಲ. ಬಿಜೆಪಿ ಸ್ಥಳೀಯ ಖಾಸಗಿ ವಾಹನಗಳಿಗೆ ಟೋಲ್‌ ಪಡೆಯುವುದನ್ನು ವಿರೊ ಸುತ್ತದೆ ಮಾತ್ರವಲ್ಲ ಟೋಲ್‌ ರದ್ದಿಗೆ ಸಂಸದರಾದ ನಳಿನ್‌ ಕುಮಾರ್‌ ಕಟೀಲು ಮತ್ತು ಶಾಸಕ ಭರತ್‌ ಶೆಟ್ಟಿ ಅವರ ನೇತೃತ್ವದಲ್ಲಿ ಹೆದ್ದಾರಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ. ಈಗಾಗಲೇ ಸಂಸದರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ ಎಂದರು.

Advertisement

ಟೋಲ್‌ ಸಂಗ್ರಹ ಸಲ್ಲ
ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಬೃಜೇಶ್‌ ಚೌಟ ಮಾತನಾಡಿ, ಒಂದೇ ರಸ್ತೆಗೆ ಮೂರ್‍ನಾಲ್ಕು ಕಡೆ ಟೋಲ್‌ ಈಗಲೇ ಪಾವತಿ ಸಲಾಗುತ್ತಿದೆ. ಅತೀ ಕಡಿಮೆ ದೂರ ಸಂಚಾರಕ್ಕೆ ಸ್ಥಳೀಯರೂ ಟೋಲ್‌ ಪಾವತಿಸುವಂತೆ ಒತ್ತಾಯಿಸುವುದು ಸರಿಯಲ್ಲ. ಈಗಿರುವ ವಿನಾಯಿತಿಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಯಥಾಸ್ಥಿತಿ ಕಾಪಾಡಿ
ಬಳಿಕ ಟೋಲ್‌ ಗುತ್ತಿಗೆ ಕಂಪೆನಿಯ ಪ್ರಬಂಧಕರನ್ನು ಕರೆಸಿ ಬಿಜೆಪಿಯ ಬೇಡಿಕೆಗಳನ್ನು ವಿವರಿಸಲಾಯಿತು. ಯಾವುದೇ ಕಾರಣಕ್ಕೂ ಸ್ಥಳೀಯ ಖಾಸಗಿ ಕಾರುಗಳಿಗೆ ಟೋಲ್‌ ಪಡೆಯಬಾರದು. ಹಿಂದಿನಂತೆಯೇ ಯಥಾಸ್ಥಿತಿ ಕಾಪಾಡಬೇಕು. ಮೂಲಸೌಕರ್ಯ ನೀಡುವಲ್ಲಿ ಆದ್ಯತೆ ನೀಡಬೇಕು ಎಂದು ಒತ್ತಾಯಿಸಲಾಯಿತು.

ಈಶ್ವರ್‌ ಕಟೀಲು, ಕಸ್ತೂರಿ ಪಂಜ, ಸುನಿಲ್‌ ಆಳ್ವ, ತಿಲಕ್‌ ರಾಜ್‌ ಕೃಷ್ಣಾಪುರ, ರಜನಿ ಗುಗ್ಗಣ್ಣ, ಗಣೇಶ್‌ ಹೊಸಬೆಟ್ಟು, ರಘುವೀರ್‌ ಪಣಂಬೂರು, ಸುಮಿತ್ರಾ ಕರಿಯಾ, ದಿವಾಕರ ಸಾಮಾನಿ,ಬೋಜರಾಜ್‌ ಸೂರಿಂಜೆ, ಲೋಕೇಶ್‌ ಬೊಳ್ಳಾಜೆ, ವಿಟuಲ ಸಾಲ್ಯಾನ್‌, ಗುರುಚಂದ್ರ ಹೆಗ್ಡೆ ಗಂಗಾರಿ ಕೂಳೂರು,ನಯನ ಕೋಟ್ಯಾನ್‌, ವರುಣ್‌ ಚೌಟ, ವಚನ್‌ ಮಣೈ, ರಾಘವೇಂದ್ರ ಶೆಣೈ, ಶ್ವೇತ ಮುಂಚೂರು, ಉಮೇಶ್‌ ದೇವಾಡಿಗ ಇಡ್ಯಾ, ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

ಫ್ಲೆಕ್ಸ್‌ ತೆಗೆಯಲು ಒತ್ತಾಯ
ರಸ್ತೆಗಿಳಿದ ಬಿಜೆಪಿ ಕಾರ್ಯಕರ್ತರು ಸ್ಥಳೀಯ ಖಾಸಗೀ ವಾಹನ ಮಾಲಕರಿಗೆ ಟೋಲ್‌ ಪಾವತಿಸಬೇಡಿ ಎಂದು ಮುನ್ಸೂಚನೆ ನೀಡಿದರು. ಇದೇ ಸಂದರ್ಭ ಟೋಲ್‌ ಕೇಂದ್ರದಲ್ಲಿ ಹಾಕಲಾಗಿದ್ದ ದರದ ಮಾಹಿತಿ ಇರುವ ಫ್ಲೆಕ್ಸ್‌ ತೆಗೆಯುವಂತೆ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next