ಉಸ್ತುವಾರಿ ಸಚಿವರ ಮನವಿ ಮೇರೆಗೆ ಜಿಲ್ಲಾಧಿಕಾರಿ ಅವರು ಖಾಸಗಿ ಕಾರುಗಳಿಗೆ ಸುಂಕ ವಸೂಲಿಗೆ 3 ದಿನಗಳ ತಡೆ ನೀಡಿದ್ದಾರೆ.
Advertisement
ಮಂಗಳವಾರ ಸುರತ್ಕಲ್ ಟೋಲ್ ಪ್ಲಾಜಾದಲ್ಲಿ ಕೆಎ19 ಖಾಸಗಿ ವಾಹನಗಳಿಗೂ ಸುಂಕ ವಸೂಲಿ ವಿರೋಧಿಸಿ ಮಂಗಳವಾರ ಬೆಳಗ್ಗೆ 7ಕ್ಕೆ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಅದೇ ವೇಳೆಗೆ ಹೋರಾಟ ಸಮಿತಿ ಸದಸ್ಯರೂ ಆಗಮಿಸಿ ಟೋಲ್‌ಗೇಟ್ ಮುಂಭಾಗ ಜಮಾಯಿಸಿದರು. ಸಮಿತಿಯು ಉಸ್ತುವಾರಿ ಸಚಿವರಿಗೆ ದೂರವಾಣಿ ಮೂಲಕ ಟೋಲ್‌ಗೇಟ್‌ನಲ್ಲಿನ ಬೆಳವಣಿಗೆತಿಳಿಸಿದ ಬಳಿಕ ಸಚಿವ ಖಾದರ್ ಅವರು ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಯಥಾಸ್ಥಿತಿ ಮುಂದುವರಿಸುವಂತೆ ಸೂಚಿಸಿದ ಮೇರೆಗೆ ಜಿಲ್ಲಾಧಿಕಾರಿಯವರು ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸುವ ಮೂಲಕ ಸುಂಕ ಪಡೆಯದಂತೆ ತಡೆದರು.
ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಪುರುಷೋತ್ತಮ ಚಿತ್ರಾಪುರ, ರೇವತಿ ಪುತ್ರನ್, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮಿ¤ಯಾಜ್, ಮುಖಂಡರಾದ ಶ್ರೀನಾಥ್ ಕುಲಾಲ್, ಅಜ್ಮಲ್ ಅಹ್ಮದ್, ಮಕ್ಸೂದ್ ಬಿ.ಕೆ., ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿಯ ಅಧ್ಯಕ್ಷ ಹರೀಶ್ ಪುತ್ರನ್, ಪದಾ ಧಿಕಾರಿಗಳಾದ ಧನಂಜಯ ಮಟ್ಟು, ವಸಂತ ಬೆರ್ನಾಡ್, ಶಶಿಕಾಂತ್ ಶೆಟ್ಟಿ, ಶಾಲೆಟ್ ಪಿಂಟೊ, ಇಂಟಕ್ ಮುಖಂಡರಾದ ಸದಾಶಿವ ಶೆಟ್ಟಿ, ಚಿತ್ತರಂಜನ್ ಶೆಟ್ಟಿ ಹೋರಾಟ ಸಮಿತಿಯ ಪ್ರಮುಖರಾದ ರಮೇಶ್ ಟಿ.ಎನ್., ರಶೀದ್ ಮುಕ್ಕ, ಮೂಸಬ್ಬ ಪಕ್ಷಿಕೆರೆ, ಹರೀಶ್ ರಾವ್ ಪೇಜಾವರ, ಪ್ರಭಾಕರ ಶೆಟ್ಟಿ, ರಾಜೇಶ್ ಶೆಟ್ಟಿ ಪಡ್ರೆ, ಸಲೀಂ ಶ್ಯಾಡೋ ಮೊದಲಾದವರು ಉಪಸ್ಥಿತರಿದ್ದರು.
Related Articles
ಬಿಜೆಪಿ ಹಾಗೂ ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಏಕಕಾಲದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದವು. ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವ ನಿರೀಕ್ಷೆಯಿದ್ದುದರಿಂದ ಎಸಿಪಿ ಶ್ರೀನಿವಾಸ ಗೌಡ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
Advertisement