Advertisement
ಇಡ್ಯಾ ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನದ ಕೆಳಗಿನ ರಸ್ತೆಗೆ ಹೊಂದಿಕೊಂಡಂತೆ ನಿಲ್ದಾಣ ನಿರ್ಮಿಸಲಾಗುತ್ತಿದ್ದು ಇಲ್ಲಿ ಸರ್ವಿಸ್ ರಸ್ತೆಯಿಲ್ಲ. ಬಸ್ ನಿಲ್ದಾಣವಾದರೆ ವಿದ್ಯಾರ್ಥಿಗಳು, ಹಿರಿಯರು ನಡೆದಾಡಲು ಸ್ಥಳವಿಲ್ಲದಂತಾಗುತ್ತದೆ ಇನ್ನೊಂದೆಡೆ ದೇಗುಲಕ್ಕೆ ಈ ರಸ್ತೆಯಾಗಿ ಯೇ ಹೋಗಬೇಕಾಗಿದ್ದು ವಾಹನ ತಿರುವಿಗೆ ಅಡಚಣೆಯಾಗಲಿದೆ. ಇಲ್ಲಿ ಬಸ್ ಬೇ ಅನತಿ ದೂರದಲ್ಲಿದ್ದರೂ ನಿಲ್ದಾಣ ಇನ್ನೊಂದೆಡೆ ನಿರ್ಮಾಣವಾಗುತ್ತಿದೆ.
ಹೊನ್ನಕಟ್ಟೆ ಬಳಿ ಕುಳಾಯಿ ಮಹಿಳಾ ಮಂಡಳಿ ಮುಂಭಾಗ ಹೆದ್ದಾರಿಯಲ್ಲಿಯೇ ಬಸ್ ಶೆಲ್ಟರ್ ನಿರ್ಮಿಸಲಾಗುತ್ತಿದೆ. ಇಲ್ಲಿ ಮುಖ್ಯವಾಗಿ ನಿಲ್ದಾಣವೇ ಇಲ್ಲ. ಆದರೆ ಸಿಗ್ನಲ್ ಮುಂದೆ ಬಸ್ ನಿಲ್ಲುವುದನ್ನು ತಡೆಯಲು ಈ ಭಾಗದಲ್ಲಿ ಬಸ್ ಶೆಲ್ಟರ್ ನಿರ್ಮಿಸಲಾಗುತ್ತಿದೆ. ಆದರೆ ಇಲ್ಲಿ ಬಸ್ ಬೇ ಇಲ್ಲದ ಕಾರಣ ಬಸ್‌ಗಳು ರಸ್ತೆಯಲ್ಲಿಯೇ ನಿಂತು ಪ್ರಯಾಣಿಕರನ್ನು ಹತ್ತಿ ಇಳಿಸುವ ಕಾರ್ಯ ಅನಿವಾರ್ಯವಾಗಿ ಮಾಡಬೇಕಾಗುತ್ತದೆ. ಹೆದ್ದಾರಿ ಬದಿ ವ್ಯಾಪಾರ ಕೇಂದ್ರಗಳಿದ್ದು ಪ್ರತೀ ಭಾಗದಲ್ಲಿ ಬಸ್ ಶೆಲ್ಟರ್ ನಿರ್ಮಾಣಕ್ಕೆ ಅಡೆ ತಡೆ ಬಂದಿದೆ. ಹೀಗಾಗಿ ಅಧಿಕಾರಿಗಳು ಅನಿವಾರ್ಯವಾಗಿ ಖಾಲಿ ಜಾಗ ಹುಡುಕಿ ಬಸ್ ಶೆಲ್ಡರ್ ನಿರ್ಮಿಸುವತ್ತಾ ಗಮನ ಹರಿಸಿದ್ದಾರೆ.
Related Articles
ಕೇವಲ ನಾಲ್ಕೈದು ಪ್ರಯಾಣಿಕರು ಕುಳಿತು ಕೊಳ್ಳಲಷ್ಟೇ ಅವಕಾಶವಿದೆ. ಇನ್ನೊಂ ದೆಡೆ ಬಿಸಿಲು, ಮಳೆಯಿಂದ ರಕ್ಷಣೆಯಿಲ್ಲ. ಕುಳಾಯಿ ಬಳಿ ಬಸ್ ನಿಲ್ದಾಣ ನಿರ್ಮಾಣ ಅಪಘಾತಕ್ಕೆ ಕಾರಣವಾಗಬಹುದು. ಇಲ್ಲಿ ತಾಂತ್ರಿಕವಾಗಿ ನೋಡಿದರೆ ನಿಲ್ದಾಣಕ್ಕೆ ಸಾಧ್ಯವಾಗದ ಜಾಗ. ಹೀಗಾಗಿ ಬಸ್ ಬೇ ಇರುವಲ್ಲಿಯೇ ಬಸ್ ಶೆಲ್ಟರ್ ನಿರ್ಮಿಸಿ ಎಂದು ಸ್ಥಳೀಯರಾದ ದೀಪಕ್ ಕುಳಾಯಿ ಆಗ್ರಹಿಸಿದ್ದಾರೆ.
Advertisement
ಮಳೆಗಾಳಿಗೆ ರಕ್ಷಣೆ ನೀಡದ ನಿಲ್ದಾಣಗಳು ಕರಾವಳಿಯಲ್ಲಿ ಮಳೆ ಅಧಿಕವಿದ್ದು ಪ್ರಯಾಣಿಕರಿಗೆ ಈ ಹಿಂದೆ ಸಂಘ – ಸಂಸ್ಥೆಗಳು ನಿರ್ಮಿಸಿದ್ದ ಬಸ್ ನಿಲ್ದಾಣಗಳು ಒದ್ದೆಯಾಗದಂತೆ ರಕ್ಷಣೆ ನೀಡುತ್ತಿದ್ದವು.ಆದರೆ ಇದೀಗ ಜಾಹೀರಾತು ಫಲಕ ಅಳವಡಿಕೆಯನ್ನೇ ಕೇಂದ್ರವಾಗಿಸಿ ಬಸ್ ನಿಲ್ದಾಣಗಳು ಆಧುನಿಕ ಶೈಲಿಯಲ್ಲಿ ನಿರ್ಮಾಣವಾಗುತ್ತಿವೆ. ಸೂಕ್ತ ನಿರ್ದೇಶನ ನೀಡಲಾಗುವುದು
ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಒಂದೇ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಟೆಂಡರು ನೀಡಲಾಗಿದೆ. ಉತ್ತಮ ಗುಣಮಟ್ಟದ ಮಾರ್ಬಲ್ ಬಳಸಲು ಸೂಚಿಸಲಾಗಿದೆ. ಕೆಲವೆಡೆ ಮಾರ್ಬಲ್ ತುಂಡಾದ ಘಟನೆಯೂ ಗಮನಕ್ಕೆ ಬಂದಿದೆ. ಈ ಬಗ್ಗೆ ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ನೀಡಲಾಗುವುದು.
– ವಿಜಯ್ ಸ್ಯಾಮ್ಸನ್,
ಹೆದ್ದಾರಿ ಇಲಾಖೆ ಪ್ರಾಜೆಕ್ಟ್ ಡೈರೆಕ್ಟರ್