Advertisement

ಸುರತ್ಕಲ್‌ ರೈಲು ನಿಲ್ದಾಣ: ಪಿಆರ್‌ಎಸ್‌ ಭಾಗ್ಯ, ಇನ್ನು ಮುಂಬಯಿ ಪಯಣ ಸರಳ

02:36 PM Aug 05, 2022 | Team Udayavani |

ಸುರತ್ಕಲ್‌: ಹತ್ತು ವರ್ಷಗಳ ಬೇಡಿಕೆಯಾಗಿದ್ದ ಪ್ಯಾಸೆಂಜರ್ಸ್‌ ರಿಸರ್ವೇಷನ್‌ ಸೆಂಟರ್‌, ಸುರತ್ಕಲ್‌ ರೈಲು ನಿಲ್ದಾಣದಲ್ಲಿ ಆರಂಭಗೊಂಡಿದ್ದು, ಇದು ಇಲ್ಲಿಂದ ಮುಂಬಯಿ ಹಾಗೂ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನ ಸಿಗಲಿದೆ.

Advertisement

ಈಗಾಗಲೇ ಎಂಆರ್‌ಪಿಎಲ್‌, ಎನ್‌ಐಟಿಕೆ, ಎಚ್‌ಪಿಸಿಎಲ್‌ ಸಹಿತ ಸಾವಿರಾರು ಉದ್ಯೋಗಿಗಳಿಗೆ ಇದು ವರದಾನವಾದರೆ, ಮುಂಬಯಿ ಸಂಪರ್ಕವಿರುವ ಇಲ್ಲಿನ ಸುತ್ತಮುತ್ತಲಿನ ಬಹುತೇಕ ಜನರಿಗೆ ಪಿಆರ್‌ಎಸ್‌ ಸೌಲಭ್ಯವು ಅತೀ ಹತ್ತಿರದಲ್ಲಿಯೇ ಸಿಕ್ಕಂತಾಗಿದೆ. ಪಡುಬಿದ್ರಿಯಿಂದ ಕುಳೂರುವರೆಗಿನ ಪ್ರಯಾಣಿಕರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಿದ್ದು, ಹೆಚ್ಚಿನ ಜನಸಂದಣಿ ಇರದೆ ಆರಾಮವಾಗಿ ರಿಸರ್ವೇಷನ್‌ ಪಡೆಯಬಹುದಾಗಿದೆ.

ಪಿಆರ್‌ಎಸ್‌ ಕುರಿತು ಮಾಹಿತಿ ಎಲ್ಲರಿಗೂ ಸಿಗುವಂತಾಗಲು ಇದೀಗ ವಿವಿಧ ಸಂಘ – ಸಂಸ್ಥೆಗಳು ಕೊಂಕಣ ರೈಲ್ವೇಯೊಂದಿಗೆ ಕೈ ಜೋಡಿಸಲು ಮುಂದಾಗಿವೆ. ಬಹುಭಾಷಿಕರ ಪ್ರದೇಶವಾದ ಇಲ್ಲಿ ಕನ್ನಡ, ಇಂಗ್ಲಿಷ್‌, ಹಿಂದಿ ಮತ್ತಿತರ ಭಾಷೆಗಳಲ್ಲಿ ಕರಪತ್ರ ಹಂಚಿ ಮಾಹಿತಿ ನೀಡಿ ಪಿಆರ್‌ಎಸ್‌ ಸೌಲಭ್ಯ ಎಲ್ಲರೂ ಪಡೆಯಲು ಯೋಜನೆ ರೂಪಿಸುತ್ತಿವೆ. ನಾಗರಿಕ ಸಲಹಾ ಸಮಿತಿಯಿಂದಲೂ ಇದಕ್ಕೆ ಪ್ರೋತ್ಸಾಹ ಲಭಿಸಿದೆ.

ಫ್ಲ್ಯಾಟ್‌ ಫಾರ್ಮ್ ಹೆಚ್ಚಳಕ್ಕೆ ಪ್ರಾಮುಖ್ಯ

ಸುರತ್ಕಲ್‌ ರೈಲು ನಿಲ್ದಾಣದಲ್ಲಿ ರೈಲು ಓಡಾಟ ಸುಗಮವಾಗಿಸಲು ಎರಡು ರೈಲು ಫ್ಲ್ಯಾಟ್‌ಫಾರ್ಮ್ ನಿರ್ಮಾಣಕ್ಕೆ ಒತ್ತು ನೀಡಲು ಚಿಂತನೆಯೂ ನಡೆದಿದೆ. ಈಗಾಗಲೇ ಒಂದು ಫ್ಲ್ಯಾಟ್‌ಫಾರ್ಮ್ ಕಾರ್ಯ ಎಸಗುತ್ತಿದ್ದು, ಭವಿಷ್ಯದ ದೃಷ್ಟಿಯಿಂದ ಅಭಿವೃದ್ಧಿ ಪಡಿಸಲು ಯೋಚಿಸಲಾಗಿದೆ.

Advertisement

ಪ್ರಮುಖ ರೈಲು ನಿಲುಗಡೆಗೆ ಮನವಿ: ಎರ್ನಾಕುಲಂ ನಿಜಾಮುದ್ದೀನ್‌, ಎರ್ನಾಕುಲಮ್‌ ಅಜ್ಮೀರ್ ಸಹಿತ ಪ್ರಮುಖ ರೈಲು ನಿಲುಗಡೆಗೆ ಬೇಡಿಕೆ ಮಂಡಿಸಲಾಗಿದೆ. ಇದಕ್ಕೆ ಕೊಂಕಣ ರೈಲು ನಿಗಮದ ಚೇರ್ಮನ್‌, ಸಿಎಂಡಿ ಸಂಜಯ್‌ ಗುಪ್ತ ಸ್ಪಂದಿಸಿದ್ದಾರೆ. ಸುರತ್ಕಲ್‌ ಮೂಲಕ ಒಂದೊಮ್ಮೆ ಪ್ರಯಾಣ ದಟ್ಟಣೆ ಹೆಚ್ಚಾಗಿದ್ದೇ ಆದಲ್ಲಿ ರೈಲು ನಿಲುಗಡೆಗೆ ಹಸುರು ನಿಶಾನೆ ದೊರಕಲಿದೆ. –ರಾಜ್‌ಮೋಹನ್‌ ರಾವ್‌, ಅಧ್ಯಕ್ಷರು, ನಾಗರಿಕ ಸಲಹಾ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next