Advertisement
ಸುರತ್ಕಲ್ ಮಧ್ಯ, ಪೆಡ್ಡಿಯಂಗಡಿ, ಸೂರಿಂಜೆ, ಕಾಟಿಪಳ್ಳ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು ಇದಕ್ಕೆ ಲೋಕೋಪಯೋಗಿ ಇಲಾಖೆಯಿಂದ ಅನುದಾನ ಬರಬೇಕಿರುವ ಕಾರಣ ಚೇಳ್ಯಾರು ಪಂಚಾಯತ್ ಸತತ ಬೇಡಿಕೆ ಮಂಡಿಸುತ್ತಲೇ ಇದ್ದರೂ ಅನುದಾನ ವಿಳಂಬವಾಗುತ್ತಿದೆ.
Related Articles
ಮಧ್ಯ ವೃತ್ತದಿಂದ ಪೆಡ್ಡಿ ಅಂಗಡಿವರೆಗೆ ಒಟ್ಟು 3 ಕಿ.ಮೀ. ರಸ್ತೆಗೆ ಡಾಮರು ಕಾಮಗಾರಿ, ಮಳೆ ನೀರು ಹರಿಯುವ ತೋಡು ನಿರ್ಮಾಣಕ್ಕೆ 2.25 ಕೋಟಿ ರೂ. ಅನುದಾನ ಬೇಕೆಂದು ಲೋಕೋಪಯೋಗಿ ಇಲಾಖೆ ಯಿಂದ ಅಂದಾಜು ಪಟ್ಟಿ ತಯಾರಿಸಲಾಗಿತ್ತು. ಆದರೆ ಯೋಜನೆ ನನೆಗುದಿಗೆ ಬಿದ್ದಿದೆ.
Advertisement
ನಾಗರಿಕರ ಸಮಸ್ಯೆಯನ್ನು ಬಗೆ ಹರಿಸಲು ಪಂಚಾಯತ್, ಲೋಕೋಪಯೋಗಿ ಇಲಾಖೆ ಈ ನಿಟ್ಟಿನಲ್ಲಿ ಕಾಮಗಾರಿ ಶೀಘ್ರ ನಡೆಸಲು ಬೇಕಾದ ಕ್ರಮ ವನ್ನು ಕೈಗೊಳ್ಳಬೇಕು ಎಂಬುದು ನಾಗರಿಕರ, ಶಾಲಾ ವಿದ್ಯಾರ್ಥಿಗಳ ಆಗ್ರಹವಾಗಿದೆ.
ಮಧ್ಯ ರಸ್ತೆಯ ಶಾಲೆ ಬಳಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳನ್ನು ಎಚ್ಚರಿಸುವ ಸಲುವಾಗಿ ರಸ್ತೆಯ ದುಸ್ಥಿತಿಯ ಬಗ್ಗೆ ಗ್ರಾಮಸ್ಥರು ಬ್ಯಾನರ್ ಅಳವಡಿಸಿದ್ದಾರೆ. ಏನೇನು ಸಮಸ್ಯೆ?
-ಹಲವಾರು ವರ್ಷಗಳಿಂದ ಈ ರಸ್ತೆ ಕೆಟ್ಟು ಹೋಗಿದ್ದು, ತಾತ್ಕಾಲಿವಾಗಿಯೂ ದುರಸ್ತಿ ಮಾಡದ್ದಿರಂದ ಹಿರಿಯ ನಾಗರಿಕರು, ಶಾಲಾ ಮಕ್ಕಳು ನಡೆದಾಡಲೂ ಪರದಾಡುವಂತಾಗಿದೆ. -ಧೂಳಿನ ಸಮಸ್ಯೆಯಿಂದ ಅಸ್ತಮಾ, ಕಣ್ಣುರಿ, ಅಲರ್ಜಿ ಯಂತಹ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. -ನಿರ್ವಹಣೆ ಕೊರತೆಯಿಂದ ಬೀದಿ ದೀಪ ಕೈ ಕೊಟ್ಟರೆ ರಾತ್ರಿಯ ವೇಳೆ ಹೊಂಡ ತುಂಬಿದ ಈ ರಸ್ತೆಯಲ್ಲಿ ನಡೆಯಲು ಸಾಧ್ಯವಿಲ್ಲ ದಂತಾಗಿದೆ. -ಚರಂಡಿ ಇಲ್ಲದೆ ಮಳೆನೀರು ರಸ್ತೆಯಲ್ಲೇ ಹರಿಯುವ ಸ್ಥಿತಿಯಿದೆ. ಇದರಿಂದ ರಸ್ತೆ ಬದಿಯ ಮಣ್ಣು ಸವೆದು ಹೊಂಡ ಸೃಷ್ಟಿಯಾಗಿದೆ. -ಇಲ್ಲಿನ ದೈವಸ್ಥಾನ, ದೇವಸ್ಥಾನಗಳಿಗೆ ಜಾತ್ರೆಗೆ ಬರುವವರು ರಸ್ತೆ ನಾದುರಸ್ತಿಯಲ್ಲಿರುವ ಕಾರಣ ಹಿಂದೇಟು ಹಾಕುವಂತಾಗಿದೆ. ಇದರಿಂದ ಸ್ಥಳೀಯ ವ್ಯಾಪಾರಿಗಳಿಗೆ ವ್ಯಾಪಾರವಿಲ್ಲದೆ ನಷ್ಟವಾ ಗುತ್ತಿದೆ. ರಸ್ತೆ ದುರಸ್ತಿ, ಬೀದಿ ದೀಪದ ವ್ಯವಸ್ಥೆಗೆ ಸಮರ್ಪಕ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ. ಪ್ರಸ್ತಾವನೆಗೆ ಅಂಕಿತ
ಪ್ರಸ್ತುತ ಪಂಚಾಯತ್ ಒತ್ತಡದ ಮೇರೆಗೆ ಶಾಸಕ ಉಮಾನಾಥ ಕೊಟ್ಯಾನ್ ಮುತುವರ್ಜಿಯಿಂದ ಡಾಮರು ಕಾಮಗಾರಿ ಮಾಡಲು 1 ಕೋಟಿ ರೂಪಾಯಿಯ ಪ್ರಸ್ತಾವನೆಗೆ ಅಂಕಿತ ದೊರಕಿದೆ.
-ಜಯಾನಂದ ಚೇಳ್ಯಾರು, ಪಂ. ಅಧ್ಯಕ್ಷ