Advertisement

Surathkal ಭೂಮಾಪನಾಧಿಕಾರಿ ಅಮಾನತು

11:24 PM Dec 03, 2023 | Team Udayavani |

ಸುರತ್ಕಲ್‌: ಕಾನ ಕಟ್ಲ ಜನತಾ ಕಾಲನಿಯ ದ.ಕ. ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಭೂ ವಿವಾದಕ್ಕೆ ಸಂಬಂಧಿಸಿದಂತೆ ಭೂ ಮಾಪನಾಧಿಕಾರಿಯೊಬ್ಬರನ್ನು ಜಿಲ್ಲಾಧಿಕಾರಿ ಅಮಾನತುಗೊಳಿಸಿದ್ದಾರೆ.

Advertisement

ಬೆಳ್ತಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಭೂ ಮಾಪನಾಧಿಕಾರಿ ನಿಝಾಮ್‌ ಅಮಾನತುಗೊಂಡ ಅಧಿಕಾರಿ. ನಿಝಾಮ್‌ ಸುರತ್ಕಲ್‌ ವಲಯ ಭೂ ಮಾಪನಾಧಿಕಾರಿಯಾಗಿದ್ದ ಸಂದರ್ಭ ಸರಕಾರಿ ಶಾಲೆ ಮತ್ತು ಆಟದ ಮೈದಾನವಿರುವ ಭೂಮಿಯನ್ನು ಅಳೆತ ಮಾಡಿ ಖಾಸಗಿ ನಿವೇಶನ ಎಂದು ಜಮೀನಿನ ಮಾಲಕರಿಗೆ ಪ್ರಾಪರ್ಟಿ ಕಾರ್ಡ್‌ ನೀಡಿದ್ದರು.

ಆರ್‌ಟಿಸಿ ಹಾಗೂ ಇಲಾಖೆಯ ಎಫ್‌ಎಂಬಿ ನಕ್ಷೆಯನ್ನು ಪಡೆದುಕೊಂಡು ಕಾನೂನು ಪ್ರಕಾರವಾಗಿಯೇ ಸರ್ವೆ ಆಗಿದೆಯಾದರೂ ಭೂಮಾಪನಾಧಿಕಾರಿ ತಲೆದಂಡವಾಗಿದೆ. ಶಿಕ್ಷಣ ಇಲಾಖೆಗೆ ಮೀಸಲಿರಿಸಲಾದ 1.60 ಎಕರೆ ಭೂಮಿಯಲ್ಲಿ ಅಲ್ಪಭಾಗದಷ್ಟು ಜಮೀನು ವಸತಿ ರಹಿತರಿಗೆ ಮತ್ತು ನಗರಾಭಿವೃದ್ಧಿ ಇಲಾಖೆಯಡಿ ಬರುವ ಮಂಗಳೂರು ಮಹಾನಗರ ಪಾಲಿಕೆಯ ಆಶ್ರಯ ನಿವೇಶನ ಕಟ್ಟಲು ಬಳಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next