ಸುರತ್ಕಲ್: ಯಕ್ಷಗಾನ ಸಂಘಟಕ, ಹರಿದಾಸ ಕೀರ್ತನೆಕಾರ ಪಿ. ವಿಜಯಾನಂದ ರಾವ್ (63) ಅವರು ಹೃದಯಾಘಾತದಿಂದ ನ. 19ರಂದು ನಿಧನ ಹೊಂದಿದರು.
Advertisement
ಮೃತರು ಪತ್ನಿ, ಇಬ್ಬರು ಪುತ್ರಿಯರು, ಪುತ್ರನನ್ನು ಅಗಲಿದ್ದಾರೆ. ಶೇಣಿ ಗೋಪಾಲಕೃಷ್ಣ ಚಾರಿಟೇಬಲ್ ಟ್ರಸ್ಟ್ ಇದರ ಕಾರ್ಯದರ್ಶಿಯಾಗಿ ಪ್ರತೀ ವರ್ಷ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಿಸುತ್ತಾ ಬರುತ್ತಿದ್ದರು. ಯಕ್ಷಗಾನ ,ತಾಳಮದ್ದಲೆ ಸಂಘಟನೆಯಲ್ಲೂ ಹೆಚ್ಚಿನ ಆಸಕ್ತಿ ಹೊಂದಿದ್ದರು.