Advertisement

ಪ್ರಧಾನಿ ವಿದೇಶ ಸುತ್ತಿದ್ದಕ್ಕೆ ಜಗತ್ತು ನಮ್ಮ ಕಡೆಗಿದೆ: ಮಾಳವಿಕಾ

06:12 AM Mar 14, 2019 | Team Udayavani |

ಸುರತ್ಕಲ್‌ : ಪ್ರಧಾನಿ ನರೇಂದ್ರ ಮೋದಿ ವಿದೇಶ ಸುತ್ತಿದ್ದನ್ನೇ ಅಸ್ತ್ರವಾಗಿಸಿಕೊಂಡ ವಿಪಕ್ಷಗಳು ದೇಶಕ್ಕೆ ಏನೂ ಮಾಡಲಿಲ್ಲ ಎಂದು ಟೀಕೆ ಮಾಡಿದವು.ಆದರೆ ಪುಲ್ವಾಮಾ ಘಟನೆ ಬಳಿಕ ದೇಶ ನಡೆಸಿದ ಉಗ್ರ ವಿರೋ  ಕಾರ್ಯಾಚರಣೆಗೆ ಜಗತ್ತೇ ನಮಗೆ ಬೆಂಬಲ ನೀಡಿತು. ಇದು ವಿದೇಶ ಸುತ್ತಿದರ ಪರಿಣಾಮ ಎಂದು ರಾಜ್ಯ ಬಿಜೆಪಿ ಸಹ ವಕ್ತಾರೆ ಮಾಳವಿಕಾ ಅವಿನಾಶ್‌ ಹೇಳಿದರು.

Advertisement

ಸುರತ್ಕಲ್‌ನಲ್ಲಿ ಬಿಜೆಪಿ ಮಂಗಳೂರು ಉತ್ತರ ವಲಯ ಹಮ್ಮಿಕೊಂಡ ಪ್ರಬುದ್ಧರ ಸಭೆಯಲ್ಲಿ ಅವರು ಮಾತನಡಿದರು. ಜಗತ್ತೇ ಉಗ್ರ ವಿರೋಧಿ  ಕಾರ್ಯಾಚರಣೆಗೆ ಬೆಂಬಲ ನೀಡಿದರೆ ದೇಶದೊಳಗೆ ಕಾಂಗ್ರೆಸ್‌ ಸಾಕ್ಷ್ಯಕೇಳುತ್ತಿದೆ. ದೇಶದ ಸೈನ್ಯದ ಕೆಲಸವನ್ನು ಅನುಮಾನದಿಂದ ನೋಡಿ ದೇಶದ ಪ್ರಜೆಗಳಿಗೆ ಅವಮಾನ ಮಾಡಿದೆ ಎಂದರು.

ಕಾಂಗ್ರೆಸ್‌ನಲ್ಲಿ ಇಂದು 44 ಮಂದಿ ಸಂಸದರಿದ್ದಾರೆ. ಜನರನ್ನು ಮರಳು ಮಾಡಿ ಗರೀಬಿ ಹಠಾವೋ ಘೋಷಣೆ ಮಾಡಿಕೊಂಡು ಯಾವುದನ್ನೇಲ್ಲ ರಾಜಕೀಯ ಮಾಡಲು ಸಾಧ್ಯವೋ ಅದನ್ನೇಲ್ಲಾ ಮಾಡಿ ಸತ್ಯವನ್ನು ಜನತೆ ತಿಳಿದ ಮೇಲೆ ವಿಪಕ್ಷ ಸ್ಥಾನವನ್ನೂ ನೀಡಲಿಲ್ಲ. ಇಂದು ಮತ್ತೆ ಅಪ್ರಚಾರಕ್ಕೆ ಮೊರೆ ಹೋಗಿದ್ದಾರೆ. ರಫೇಲ್‌, ಉದ್ಯೋಗವಿಲ್ಲ, ದೇಶ ಆರ್ಥಿಕ ಪರಿಸ್ಥಿತಿಯ ಬಗ್ಗೆ ಅಪಪ್ರಚಾರವೇ ಇದೀಗ ಅವರಿಗೆ ಸುದ್ದಿಯಾಗಿದೆ. ಆದರೆ ಪ್ರಬುದ್ದ ಮತದಾರರಿಗೆ ಸತ್ಯದ ಅರಿವು ಇದ್ದು ಕಪ್ಪು ಚುಕ್ಕೆಯಿಲ್ಲದ ಸರಕಾರವಾಗಿ ಮೋದಿ ನೇತೃತ್ವದ ಬಿಜೆಪಿ ದೇಶವನ್ನು ಇಂದು ಗೌರವದ ಸ್ಥಾನದಲ್ಲಿ ನಿಲ್ಲಿಸಿದೆ. ಯೋಗದ ಮೂಲಕ ಸಂಸ್ಕಾರವಂತ ದೇಶವಾಗಿ, ಶುಚಿತ್ವದ ಮೂಲಕ ಸ್ವಚ್ಛ ಸುಂದರ ಭಾರತವಾಗಿ,ಗಂಗೆಯ ಶುದ್ಧೀಕರಣದ ಮೂಲಕ ಭಾರತ ಮಾತೆಯ ಪವಿತ್ರ ಭೂಮಿಯನ್ನಾಗಿ ಮಾಡುವಲ್ಲಿ ಶ್ರಮಿಸಿದ್ದಾರೆ ಎಂದರು.

ನಮಗೆ ಪರೀಕ್ಷೆ ಮತ್ತೆ ಬಂದಿದೆ. ಕರ್ನಾಟಕದಲ್ಲಿ ಎ. 18, 23ರಂದು ನಡೆಯುವ ಪರೀಕ್ಷೆಯಲ್ಲಿ ಬಿಜೆಪಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಬೇಕಿದೆ. ಇದಕ್ಕಾಗಿ ಕಾರ್ಯಕರ್ತರು ಹಗಲಿರುಳು ಕೆಲಸ ಮಾಡಿ ಕೆಂದ್ರದಲ್ಲಿ ಮೋದಿ ಸರಕಾರ ಮತ್ತೆ ಬೇಕಿದೆ ಎಂದರು. ಶಾಸಕ ಡಾ| ಭರತ್‌ ಶೆಟ್ಟಿ ವೈ., ಭರತ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜ್ಯೋತಿಷಿ ನಾಗೇಂದ್ರ ಭಾರದ್ವಾಜ್‌ ಕಾರ್ಯಕ್ರಮ ಉದ್ಘಾಟಿಸಿದರು. ಬಿಜೆಪಿಯ ಪ್ರಮುಖ ಜಿಲ್ಲಾ, ವಲಯದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ವರುಣ್‌ ಚೌಟ ಸ್ವಾಗತಿಸಿದರು. ಮಹೇಶ್‌ ಮೂರ್ತಿ ಅವರು ನಿರೂಪಿಸಿದರು.

ಬುದ್ದಿ ಜೀವಿಗಳು
ಬುದ್ಧಿ ಜೀವಿಗಳು ಇಂದು ದೇಶದ ಸಂಸ್ಕೃತಿ, ಸಂಸ್ಕಾರವನ್ನು ಪ್ರಶ್ನಿಸಿ ತೆಗಳವುದನ್ನು ನೋಡಿ ಬಿಜೆಪಿ ಪ್ರಬುದ್ಧರು ಎಂದು ಆ ಶಬ್ದವನ್ನು ಬದಲಾವಣೆ ಮಾಡಿಕೊಂಡಿದೆ. ಬುದ್ಧಿ ಜೀವಿಗಳು ಎನ್ನುವ ಪದವೇ ಇಂದು ಬದಲಾವಣೆಗೆ ಒಳಗಾಗ ಬೇಕಿದೆ.
– ಮಾಳವಿಕಾ ಅವಿನಾಶ್‌
ರಾಜ್ಯ ಬಿಜೆಪಿ ಸಹ ವಕ್ತಾರೆ 

Advertisement
Advertisement

Udayavani is now on Telegram. Click here to join our channel and stay updated with the latest news.

Next