Advertisement

Surathkal; ಸಿಎಂ, ಡಿಸಿಎಂರಿಗೆ ನಿಂದಿಸಿದವನ ಸೆರೆ

01:09 AM Jan 17, 2024 | Team Udayavani |

ಸುರತ್ಕಲ್‌: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್‌ ವಿರುದ್ದ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾಡಿದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿದ ಅನಿಲ್‌ ಕುಮಾರ್‌ (34) ನನ್ನು ಬಂಧಿಸಲಾಗಿದೆ.

Advertisement

ಮೂಲತಃ ಉತ್ತರ ಕರ್ನಾಟಕದ ಈತ ಕಳೆದ 12 ವರ್ಷಗಳಿಂದ ಸುರತ್ಕಲ್‌ನಲ್ಲಿ ಬಾಡಿಗೆ ವಾಹನ ಚಾಲಕನಾಗಿದ್ದು ,ಕಾನದ ಬಾಡಿಗೆ ಮನೆಯಲ್ಲಿ ವಾಸವಿದ್ದಾನೆ. ಕಳೆದ ಮೂರು ತಿಂಗಳಿನಿಂದ ಪಡಿತರ ಚೀಟಿ ಮಾಡಲು ಅಲೆದಾಡುತ್ತಿದ್ದು ಸರ್ವರ್‌ ಸಮಸ್ಯೆಯಿಂದ ಸಾಧ್ಯವಾಗಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಅನಿಲ್‌ ಅವಾಚ್ಯ ಶಬ್ದಗಳಿಂದ ನಿಂದಿಸಿ ವೀಡಿಯೋ ತುಣುಕೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದ ಎನ್ನಲಾಗಿದೆ.

ಕಾಂಗ್ರೆಸ್‌ ಕಾರ್ಯಕರ್ತ ಸುಹಾನ್‌ ಆಳ್ವ ಅವರು ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next