Advertisement

ಕನಕದಾಸರ ಪುತ್ಥಳಿ ಅನಾವರಣ

11:10 AM Jun 24, 2019 | Naveen |

ಸುರಪುರ: ನನೆಗುದಿಗೆ ಬಿದ್ದಿರುವ ಇಲ್ಲಿಯ ಕನಕ ಭವನಕ್ಕೆ ಶೀಘ್ರವೇ ಪುನಶ್ಚೇತನ ನೀಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ವರ್ಷದಲ್ಲಿಯೇ ಕಾಮಗಾರಿ ಮುಗಿಸಿ ಸಮುದಾಯದ ಬಳಕೆಗೆ ಅನುಕೂಲ ಮಾಡಿಕೊಡುವುದಾಗಿ ಶಾಸಕ ನರಸಿಂಹ ನಾಯಕ (ರಾಜುಗೌಡ) ಭರವಸೆ ನೀಡಿದರು.

Advertisement

ನಗರಸಭೆ ವ್ಯಾಪ್ತಿಯ ಕುಂಬಾರಪೇಟೆಯ ಕುರುಬರ ಗಲ್ಲಿಯಲ್ಲಿ ರವಿವಾರ ಭಕ್ತ ಕನಕದಾಸರ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು.

ಈ ಹಿಂದೆ ನಾನು ಶಾಸಕನಾಗಿದ್ದಾಗ 2007ರಲ್ಲಿ ಕನಕ ಭವನ ನಿರ್ಮಾಣಕ್ಕೆ 25 ಲಕ್ಷ ರೂ. ಅನುದಾನ ಒದಗಿಸಿ ಕಾಮಗಾರಿಯನ್ನು ಭೂ ಸೇನಾ ನಿಗಮದವರಿಗೆ ವಹಿಸಲಾಗಿತ್ತು. ನಂತರ ಅಧಿಕಾರಕ್ಕೆ ಬಂದವರು ಈ ಬಗ್ಗೆ ಆಸಕ್ತಿ ವಹಿಸಲಿಲ್ಲ. ಹೀಗಾಗಿ ಕಾಮಗಾರಿ ನನೆಗುದಿಗೆ ಬಿದ್ದಿದೆ ಎಂದು ತಿಳಿಸಿದರು.

ಹಾಲು ಮತ ಸಮಾಜದವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದ ಅವರು, ವಾರ್ಡ್‌ನಲ್ಲಿ ಈಗಾಗಲೆ 5 ಬೋರ್‌ ಕೊರೆಯಿಸಿದರು ನೀರು ಲಭ್ಯವಾಗಿಲ್ಲ. ನಗರದ ಬಹುತೇಕ ವಾರ್ಡ್‌ಗಳಲ್ಲಿಯೂ ಇದೆ ಸಮಸ್ಯೆ ಇದೆ. ಇದಕ್ಕೆ ಶಾಸ್ವತ ಪರಿಹಾರ ಕಂಡುಕೊಳ್ಳಲು ಸಭೆ ಕರೆದಿದ್ದೇನೆ.ಅಧಿಕಾರಿಗಳೊಂದಿಗೆ ಚರ್ಚಿಸಿ ನೀರಿನ ಸಮಸ್ಯೆ ಹೋಗಲಾಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸಾನ್ನಿಧ್ಯ ವಹಸಿದ್ದ ತಿಂಥಣಿ ಕನಕ ಗುರುಪೀಠದ ಪೂಜ್ಯ ಸಿದ್ದರಾಮಾನಂದ ಸ್ವಾಮೀಜಿ ಮಾತನಾಡಿ, ಸಮಾಜ ಬಾಂಧವರು ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಡಬೇಕು. ಮಕ್ಕಳಿಗೆ ಉನ್ನತ ವ್ಯಾಸಂಗ ಕೊಡಿಸಬೇಕು ಎಂದರು.

Advertisement

ಅಗತೀರ್ಥ ಗುರುರೇವಣಸಿದ್ದೇಶ್ವರ ಮಠದ ಗುರುಶಾಂತಮೂರ್ತಿ ಮಾತನಾಡಿ, ದೇವರ ಹೆಸರಲ್ಲಿ ಕುರಿಗಳನ್ನು ಹರಕೆ ಕೊಡುವ ಸಾಂಪ್ರದಾಯ ಕೈ ಬಿಡಬೇಕು. ಇದು ನಮ್ಮ ಸಂಸ್ಕೃತಿ ಅಲ್ಲ. ಕುರುಬರು ಮೂಲತ ಈಶ್ವರನ ಆರಾಧಕರು ಎಂದು ತಿಳಿಸಿದರು.

ಕುರುಬ ಸಮಾಜದ ಜಿಲ್ಲಾಧ್ಯಕ್ಷ ವಿಶ್ವನಾಥ ನೀಲಳ್ಳಿ, ತಾಲೂಕು ಅಧ್ಯಕ್ಷ ಯಮನಪ್ಪ ಬಪ್ಪರಗಿ, ಪ್ರಮುಖರಾದ ಯಲ್ಲಪ್ಪ ಕುರುಕುಂದಿ, ರಾಜಾ ಹಣಮಪ್ಪ ನಾಯಕ ತಾತಾ, ನಿಂಗಣ್ಣ ಬಾದ್ಯಾಪುರ, ಹೆಚ್.ಸಿ. ಪಾಟೀಲ, ನಿಂಗಣ್ಣ ಚಿಂಚೋಡಿ, ಬಸವರಾಜ ಅನ್ಸೂರ, ಅಯ್ಯಪ್ಪ ಶಾಂತಪುರ, ಜುಮ್ಮಣ್ಣ ಏಳರೊಟ್ಟಿ, ರಂಗನೌಡ ದೇವಿಕೇರಿ ಇತರರಿದ್ದರು.

ಧರ್ಮರಾಜ ಹುದ್ದಾರ ಸ್ವಾಗತಿಸಿದರು. ದೇವು ಹೆಬ್ಟಾಳ ನಿರೂಪಿಸಿ, ವಂದಿಸಿದರು. ಇದಕ್ಕೂ ಮೊದಲು ಕನಕದಾಸರ ಭಾವಚಿತ್ರ ಅದ್ಧೂರಿ ಮೆರವಣಿಗೆ ಜರುಗಿತು.

Advertisement

Udayavani is now on Telegram. Click here to join our channel and stay updated with the latest news.

Next