Advertisement

ಸುರಪುರ ಸೀತಾಫಲಕ್ಕೆ ಡಿಮ್ಯಾಂಡ್‌

11:09 AM Oct 30, 2019 | Naveen |

ಸಿದ್ದಯ್ಯ ಪಾಟೀಲ
ಸುರಪುರ: ತಾಲೂಕಿನ ಬಹುತೇಕ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಬೆಳೆದ ಸೀತಾಫಲ ಹಣ್ಣಿಗೆ ರಾಜ್ಯ ಸೇರಿದಂತೆ ನೆರೆ ರಾಜ್ಯಗಳಲ್ಲೂ ಭಾರೀ ಬೇಡಿಕೆ ಬಂದಿದೆ.

Advertisement

ಮಳೆ ಪ್ರಮಾಣ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಕಡಿಮೆ ಆಗಿದ್ದರಿಂದ ಇಳುವರಿ ಕಡಿಮೆಯಾಗಿತ್ತು. ಪ್ರಸಕ್ತ ಸಾಲಿನಲ್ಲಿ ಸಾಕಷ್ಟು ಮಳೆಯಾಗಿದ್ದರಿಂದ ಉತ್ತಮ ಇಳುವರಿ ಬಂದಿದೆ. 2 ವರ್ಷಕ್ಕೊಮ್ಮೆ ಟೆಂಡರ್‌: ಈ ಹಣ್ಣು ಬೆಟ್ಟಗುಡ್ಡಗಳಲ್ಲಿ ಬೆಳೆಯುವುದರಿಂದ ಇದು ಅರಣ್ಯ ಇಲಾಖೆಗೆ ಒಳಪಡುತ್ತಿದ್ದು, ಅರಣ್ಯ ಇಲಾಖೆಯವರು 2 ವರ್ಷಕ್ಕೊಮ್ಮೆ ಟೆಂಡರ್‌ ಕರೆಯುತ್ತಾರೆ. ಕಳೆದ ಬಾರಿ 2017-18ನೇ ಸಾಲಿಗೆ 4 ಲಕ್ಷ ರೂ.ಗಳಿಗೆ ಗುತ್ತಿಗೆ ನೀಡಲಾಗಿತ್ತು. ಪ್ರಸ್ತಕ ವರ್ಷ 2019-20ನೇ ಸಾಲಿಗೆ 3.55 ಲಕ್ಷ ರೂ.ಗಳಿಗೆ ಟೆಂಡರ್‌ ಆಗಿದೆ.

ಇಲ್ಲೇ ಹೆಚ್ಚು ಬೆಳೆಯುತ್ತೆ: ಸಾಮಾನ್ಯವಾಗಿ ಸೆಪ್ಟೆಂಬರ್‌ ತಿಂಗಳಲ್ಲಿ ಬರುವ ಈ ಸೀತಾಫಲ ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳಲ್ಲೂ ದೊರೆಯುತ್ತದೆ. ತಾಲೂಕಿನ ಕುಂಬಾರಾಪೇಟ, ತಳವಾರಗೇರಾ, ವಾಗಣಾಗೇರಿ, ಜಾಲಿಬೆಂಚಿ, ಮಾಚಗುಂಡಾಳ, ದೇವರ ಗೋನಾಲ, ಟಿ.ಬೊಮ್ಮನಳ್ಳಿ, ಸಿದ್ದಾಪುರ, ವಾರಿ ಸಿದ್ದಾಪುರ, ಹಸನಾಪುರ, ರತ್ತಾಳ, ದೇವಿಕೇರಿ, ಲಕ್ಷ್ಮೀಪುರ, ಬಿಜಾಸ್ಪೂರ ಸೇರಿದಂತೆ ನಗರದ ಸುತ್ತಮುತ್ತಲಿನ ಬೆಟ್ಟಗುಡ್ಡಗಳ ಪ್ರದೇಶದಲ್ಲಿ ಸೀತಾಫಲ ಹೆಚ್ಚಾಗಿ ಬೆಳೆಯುತ್ತಿದೆ.

ಪ್ರತಿದಿನ ಸರಬರಾಜು: ಪ್ರತಿ ದಿನಕ್ಕೆ 2ರಿಂದ 3 ಕ್ವಿಂಟಲ್‌ ಸೀತಾಫಲವನ್ನು ಹೈದ್ರಾಬಾದ್‌, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ.

ವಿವಿಧ ದರ ನಿಗದಿ: ಈ ಹಿಂದೆ 200 ರಿಂದ 300 ರೂ. ಗೆ ನೂರು ಸೀತಾಫಲ ಸಿಗುತ್ತಿದ್ದವು. ಆದರೀಗ ಬೆಲೆ ಗಗನಕ್ಕೇರಿದೆ. 20 ಸೀತಾಫಲಕ್ಕೆ 100 ರೂಪಾಯಿ ದರದಂತೆ ಮಾರುತ್ತಿದ್ದಾರೆ. ಒಂದು ಹಣ್ಣನ್ನು 10 ರೂ.ಗೆ ಮಾರಲಾಗುತ್ತಿದೆ.

Advertisement

ಸ್ಥಳೀಯವಾಗಿ ಮಾರಾಟ: ನಗರದ ಬಸ್‌ ನಿಲ್ದಾಣ, ಗಾಂಧಿ ವೃತ್ತ, ಅರಮನೆ ಮಾರ್ಗ, ಕೋತಿ ಮಹಲ, ಪಟೇಲ್‌ ವೃತ್ತ, ತರಕಾರಿ ಮಾರುಕಟ್ಟೆ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಸೀತಾಫಲ ಮಾರಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next