Advertisement

ಸುರಪುರ ತಹಶೀಲ್ದಾರ್‌ ಕಚೇರಿಯಲ್ಲಿ ಕೃಷ್ಣ ಜಯಂತಿ

11:51 AM Aug 24, 2019 | Naveen |

ಸುರಪುರ: ಸೃಷ್ಟಿಯಲ್ಲಿ ನಡೆಯುವ ಪ್ರತಿಯೊಂದು ಕ್ರಿಯೆಗೂ ಶ್ರೀ ಕೃಷ್ಣನೆ ಕಾರಣ. ಆತನ ಕೃಪ ಕಟಾಕ್ಷೆ ಇಲ್ಲದೆ ಹುಲ್ಲುಕಡ್ಡಿ ಕೂಡ ಅಲುಗಾಡುವುದಿಲ್ಲ ಎಂದು ತಹಶೀಲ್ದಾರ್‌ ಸುರೇಶ ಅಂಕಲಗಿ ಹೇಳಿದರು.

Advertisement

ಇಲ್ಲಿಯ ತಹಶೀಲ್ದಾರ್‌ ಕಚೇರಿಯಲ್ಲಿ ಶುಕ್ರವಾರ ತಾಲೂಕು ಆಡಳಿತ ಏರ್ಪಡಿಸಿದ್ದ ಶ್ರೀ ಕೃಷ್ಣ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಅಧರ್ಮ ಹೆಚ್ಚಾದಾಗ ಧರೆಗಿಳಿದು ಬಂದು ಧರ್ಮ ರಕ್ಷಿಸುತ್ತೇನೆ ಎಂಬ ಶ್ರೀ ಕೃಷ್ಣನ ಮಾತು ಇಂದು ಸತ್ಯವಾಗಿದೆ. ಕಳೆದ ಕೆಲ ದಿನಗಳ ಹಿಂದೆ ತಾಲೂಕಿನಲ್ಲಿ ಪ್ರವಾಹ ಸೃಷ್ಟಿಯಾಗಿತ್ತು. ಜಲಾಶಯದಿಂದ ದಾಖಲೆ ಪ್ರಮಾಣದಲ್ಲಿ ನದಿಗೆ ನೀರು ಬಿಡಲಾಯಿತು. ಜೀವಹಾನಿಯಂತ ಯಾವುದೇ ಅಹಿತಕರ ಘಟನೆ ನಡೆಯದೆ ಸುರಕ್ಷಿತವಾಗಿ ರಕ್ಷಿಸಿರುವುದು ಕೃಷ್ಣ ಪರಮಾತ್ಮ ಎಂದರು.

ಯಾದವ ಸಮಾಜದ ರಾಜ್ಯ ಉಪಾಧ್ಯಕ್ಷ ವಿಠuಲ ಯಾದವ ಮಾತನಾಡಿ, ಶ್ರೀ ಕೃಷ್ಣನ ಸಂದೇಶಗಳನ್ನು ಪ್ರತಿಯೊಬ್ಬರು ಅಳವಡಿಸಿ ಕೊಂಳ್ಳಬೇಕೆಂದರು.

ನರಸಿಂಹ ಕುಲಕರ್ಣಿ ಮಾತನಾಡಿ, ಭಗವದ್ಗೀತೆ ವಿಶ್ವದ ಇತರೆ ಧರ್ಮ ಗ್ರಂಥಗಳಿಗಿಂತ ಉತ್ಕೃಷ್ಟವಾಗಿದೆ. ದೇಶದಲ್ಲಿ ಅನೇಕ ಜಾತಿ, ಧರ್ಮಗಳಿವೆ. ಪ್ರತಿ ಧರ್ಮಕ್ಕೂ ಧರ್ಮ ಗ್ರಂಥಗಳಿವೆ. ಕರ್ಮ ಯೋಗ, ಭಕ್ತಿ ಯೋಗ, ಜ್ಞಾನ ಯೋಗ, ಸಾಂಖ್ಯೆ ಯೋಗ ಸೇರಿದಂತ 12 ಅಧ್ಯಾಯಗಳ ಮೂಲಕ ಮಾನವ ಕಲ್ಯಾಣ ಬಯಸಿ ಶ್ರೀ ಕೃಷ್ಣ ಭೋದಿಸಿರುವ ಸಂದೇಶ ಜಗತ್ತಿಗೆ ಆದರ್ಶವಾಗಿದೆ. ಎಲ್ಲಾ ಧರ್ಮಗಳ ಸಾರ ಹೊಂದಿರುವ ಭಗವದ್ಗೀತೆಯನ್ನು ಪವಿತ್ರ ಗ್ರಂಥ ಎಂದು ಸ್ವೀಕರಿಸಿರುವುದು ಭಾರತೀಯರಾದ ನಮ್ಮೆಲ್ಲರ ಸೌಭಾಗ್ಯ ಎಂದರು. ಗ್ರೇಡ್‌-2 ತಹಶೀಲ್ದಾರ್‌ ಸೊಫೀಯಾ ಸುಲ್ತಾನ್‌, ಖಜಾನೆ ಅಧಿಕಾರಿ ಮಂಗಲಕುಮಾರ ಗುಡುಗುಂಟಿ. ರಂಗಣ್ಣ, ಕೊಂಡಲ ನಾಯಕ, ಪ್ರಮುಖರಾದ ವೀರುಪಾಕ್ಷಿ ಕೋನಾಳ, ಶಿವುರಾಜ ನಾಯಕ ಇತರರಿದ್ದರು. ರವಿ ನಾಯಕ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next