Advertisement

ಮೋಡ ಬಿತ್ತನೆಗೆ ಸಕಲ ಸಿದ್ಧತೆ

11:22 AM Aug 07, 2019 | Naveen |

ಸುರಪುರ: ಹೈಕ ಭಾಗದಲ್ಲಿ ಮುಂಗಾರು ಮಳೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಸರಕಾರ ಮೋಡ ಬಿತ್ತನೆಗೆ ಮುಂದಾಗಿದ್ದು, ಸುರಪುರ ಟೇಲರ್‌ ಮಂಜಿಲ್ ಆವರಣದಲ್ಲಿ ರೇಡಾರ್‌ ಅಳವಡಿಸಲಾಗಿದ್ದು, ಮೋಡ ಬಿತ್ತನೆಗೆ ಸಕಲ ಸಿದ್ಧತೆ ಕಾರ್ಯ ಭರದಿಂದ ಸಾಗಿದೆ.

Advertisement

ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ಮುಂಗಾರು ಮಳೆ ಆರಂಭದಲ್ಲಿ ಒಳ್ಳೆ ಮುನ್ಸೂಚನೆ ನೀಡಿ, ರೈತರ ಕೈ ಹಿಡಿಯುವ ಭರವಸೆ ಮೂಡಿಸಿತ್ತು. ಆದರೆ, ಸಕಾಲಕ್ಕೆ ಮಳೆ ಬಾರದೆ ಇರುವುದರಿಂದ ಪುನಃ ಬಗಾಲದ ಛಾಯೆ ಆವರಿಸಿತು. ಈ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಮಾಡಿ ಮಳೆ ತರಿಸುವ ಮೂಲಕ ರೈತರಿಗೆ ಒಂದಿಷ್ಟು ನೆರವಾಗುವ ದೃಷ್ಟಿಯಿಂದ ಸರಕಾರ ಮೋಡ ಬಿತ್ತನೆಗೆ ಮುಂದಾಗಿದೆ ಎನ್ನಲಾಗುತ್ತಿದೆ.

2017-18ರಲ್ಲಿ ಟೇಲರ್‌ ಮಂಜಿಲ್ ಆವರಣದಲ್ಲಿ ಮೋಡ ಬಿತ್ತನೆಗಾಗಿ ರೇಡಾರ್‌ ಟಾವರ್‌ ಅಳವಡಿಸಲಾಗಿತ್ತು. ಗದಗ ಜಿಲ್ಲೆಯಿಂದ ಮೋಡ ಬಿತ್ತನೆ ಮಾಡಿ ಮಳೆ ತರಿಸಲಾಗಿತ್ತು. ಈಗ ಮಳೆ ಕೊರತೆಯಾಗಿರುವುದರಿಂದ ಪುನಃ ರೇಡಾರ್‌ ಟಾವರ್‌ ಅಳವಡಿಸಿ ಮೋಡ ಬಿತ್ತನೆ ಮಾಡಲಾಗುತ್ತಿದೆ.

ಮೋಡ ಬಿತ್ತನೆಗೆ ಕರ್ನಾಟಕದಲ್ಲಿ ಮೂರು ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಬೆಂಗಳೂರು, ಗದಗ, ಸುರಪುರ, ರೇಡಾರ್‌ಗಳು ಸುಮಾರು ಸುತ್ತಲಿನ 200 ಕೀ.ಮೀಟರ್‌ವರೆಗೆ ಸ್ಕಲಿತ ಮತ್ತು ನಿಷ್ಕಲಿತ ಮೋಡಗಳನ್ನು ಪತ್ತೆ ಮಾಡಿ ಅಂತರ ಜಾಲದ ಮೂಲಕ ಮಾಹಿತಿ ರವಾನಿಸುತ್ತದೆ. ಮಾಹಿತಿ ಆಧರಿಸಿ ಗದಗ ಕೇಂದ್ರದಿಂದ ಜಟ್ ವಿಮಾನದ ಮೂಲಕ ಸಿಲ್ವರ್‌ ಆಯೋಡೆಡ್‌ ದ್ರಾವಣವನ್ನು ಮೋಡಗಳ ಮೇಲೆ ಸಿಂಪಡಿಸಿ ಮಳೆ ತರಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next