Advertisement

ನಗರೇಶ್ವರ ಪೂಜೆಯಿಂದ ಇಷ್ಟಾರ್ಥ ಸಿದ್ಧಿ

04:13 PM Jun 24, 2019 | Team Udayavani |

ಸುರಪುರ: ರಂಗಂಪೇಟೆ ನಗರೇಶ್ವರ ದೇವಸ್ಥಾನದಲ್ಲಿ ಶನಿವಾರ ಆರ್ಯವೈಶ್ಯ ಸಮಾಜ ಬಾಂಧವರಿಂದ 130ನೇ ವರ್ಧಂತಿ ಉತ್ಸವ ಸಂಭ್ರಮದಿಂದ ನಡೆಯಿತು.

Advertisement

ಬೆಳಗಿನಿಂದಲೇ ಭಕ್ತರು ದೇವಸ್ಥಾನಕ್ಕೆ ತೆರಳಿ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಭಾಗಹಿಸಿದ್ದರು. ಕಾಯಿ ಕರ್ಪೂರ ನೀಡಿ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರಚಾರ್ಯ ರಾಜಪುರೋಹಿತ ಪೌರೋಹಿತ್ಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಬೆಳಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಶುಧ್ದೋಧಕ ಅಭಿಷೇಕ, ಶಕಾದಶ ರುದ್ರಾಭಿಷೇಕ, ಪುಷ್ಪಾಲಂಕಾರ, ದೂಪ ದೀಪ, ನೈವೇಧ್ಯ, ಮಂಗಳಾರತಿ, ಮಹಾಮಂಗಳಾರತಿ, ಮಂತ್ರ ಪುಷ್ಪ, ತೀರ್ಥ, ಪ್ರಸಾದ ವಿತರಣೆ ನಡೆಯಿತು.

ನಂತರ ಭಕ್ತರನುದ್ದೇಶಿಸಿ ಮಾತನಾಡಿದ ಅರ್ಚಕ ರಾಘವೇಂದ್ರಚಾರ್ಯ ರಾಜಪುರೋಹಿತ, ಸೃಷ್ಠಿ ಮೂಲ ಕರ್ತನಾಗಿರುವ ಸಾಕ್ಷಾತ ಪರಶಿವನೇ ನಗರೇಶ್ವರನ ರೂಪದಲ್ಲಿದ್ದಾನೆ. ನಗರೇಶ್ವರನ ಪೂಜಿಸುವುದು ಈಶ್ವರನನ್ನು ಪೂಜಿಸಿದಂತೆ. ಈಶ್ವರನ ಪೂಜೆಯಿಂದ ಸಕಲ ಇಷ್ಟಾರ್ಥಗಳು ನೆರವೇರುತ್ತವೆ. ಕಾರಣ ಈಶ್ವರ ಧ್ಯಾನ ಮಾಡುವುದು ಅತ್ಯಂತ ಸೂಕ್ತವಾಗಿದೆ ಎಂದು ಹೇಳಿದರು.

ಕಾಲಕಾಲಕ್ಕೆ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯ ನೆರವೇರಿಸುವುದರಿಂದ ಸಮಾಜದಲ್ಲಿ ಸದಾ ಶಾಂತಿ ನೆಲೆಸುತ್ತದೆ. ಸಕಾಲಕ್ಕೆ ಮಳೆ ಬೆಳೆ ಸಮೃದ್ಧವಾಗಿ ನಾಡು ಸುಭೀಕ್ಷೆಯಿಂದ ಇರುತ್ತದೆ. ಕಾರಣ ಹೆಚ್ಚು ಹೆಚ್ಚು ಧರ್ಮ ಕಾರ್ಯ ಆಯೋಜಿಸಿ ದೇವರುಗಳನ್ನು ಸಂತುಷ್ಟಗೊಳಿಸಬೇಕು ಎಂದು ಸಲಹೆ ನೀಡಿದರು.

Advertisement

ಸಮಾಜ ಬಾಂಧವರಾದ ಲಕ್ಷ್ಮಯ್ಯ ಕಲಕೊಂಡ, ಕೃಷ್ಟಯ್ಯ ಕಲಕೊಂಡ, ರಾಮಾಂಜನೇಯ ಪೋಲಂಪಲ್ಲಿ, ಗುರಪ್ಪಯ್ಯ. ತಿಪ್ಪಯ್ಯ, ಗುರುರಾಜ, ಪ್ರಾಣೇಶ ಪೋಲಂಪಲ್ಲಿ, ರಾಮಯ್ಯ ಕಡಬೂರ, ವಾಸುದೇವ ಹೋಬಳಶೆಟ್ಟಿ, ಶ್ರೀನಿವಾಸ ಚಿತ್ರಾಲ, ಮಲ್ಲಿಕಾರ್ಜುನಯ್ಯ ದಿವಳಗುಡ್ಡ, ನರಸಯ್ಯ ಅಯ್ನಾಳ, ಶ್ರೀವಲ್ಲಭ ಕಡಬೂರ, ರಘುರಾಮ ಕಡಬೂರ, ಗುರುರಾಜ ಪೋಲಂಪಲ್ಲಿ ವೆಂಕಟೇಶ ಕಲಕುಂಡಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next