Advertisement

ಸುಳ್ಳು ಮಾಹಿತಿ ನೀಡಿದರೆ ಕಾರ್ಡ್‌ ರದ್ದು

11:07 AM Jun 05, 2019 | Naveen |

ಸುರಪುರ: ಸೋರಿಕೆ ತಡೆಗಟ್ಟುವ ಉದ್ದೇಶದಿಂದ ಸರಕಾರ ಪಡಿತರ ವಿತರಣೆಗೆ (ಇ ಕೆವ್ಹಾಸಿ) ಹೆಬ್ಬೆರಳು ಗುರುತು ಮಾಡಿಕೊಳ್ಳುವುದು ಕಡ್ಡಾಯಗೊಳಸಿದೆ (ಇ ಕೆವ್ಹಾಸಿ) ಮಾಡಿಕೊಳ್ಳದವರಿಗೆ ಅಗಸ್ಟ ತಿಂಗಳಿಂದ ಪಡಿತರ ಕಡಿತಗೊಳಸಲಾಗುವುದು ಎಂದು ಆಹಾರ ಇಲಾಖೆ ಉಪನಿರ್ದೇಶಕ ದತ್ತಪ್ಪ ಹೇಳಿದರು.

Advertisement

ಇಲ್ಲಿಯ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಪಡಿತರ ವಿತರಕ ಮಾಸಿಕ ಸಭೆಯ ಅಧ್ಯಕ್ಷತೆ ವಹಸಿ ಮಾತನಾಡಿದ ಅವರು, ಪಡಿತರ ಚೀಟಿಯಲ್ಲಿ ಹೆಸರಿರುವ ಮತ್ತು ಭಾವಚಿತ್ರ ಹೊಂದಿರುವ ಪ್ರತಿಯೊಬ್ಬ ಸದಸ್ಯರು ತಮ್ಮ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಕಡ್ಡಾಯವಾಗಿ (ಇ-ಕೆವ್ಹಾಸಿ) ಹೆಬ್ಬೆರಳಿನ ಗುರುತು ನೀಡಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಗೆ ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ. ನೋಂದಣಿ ಮಾಡಿಕೊಳ್ಳದವರಿಗೆ ಅಗಸ್ಟ ತಿಂಗಳಿಂದ ಪಡಿತರ ಕಡಿತ ಮಾಡಲಾಗುವುದು ಎಂದು ತಿಳಿಸಿದರು.

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕುಟುಂಬಸ್ಥರು ಕಟುಂಬದಲ್ಲಿ ಯಾರದಾದರು ಒಬ್ಬರ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕು. ಸಾಮಾನ್ಯ ಮತ್ತು ಇತರೆ ಹಿಂದುಳಿದ ಹಾಗೂ ಅಲ್ಪ ಸಂಖ್ಯಾತರಿಗೆ ಈ ನಿಯಮ ಅನ್ವಯವಾಗುವುದಿಲ್ಲ. ವಯೋ ವೃದ್ಧರಾಗಿದ್ದು, ಹೆಬ್ಬರಳು ಗುರುತು ಬರದೆ ಇದ್ದಲ್ಲಿ ಅಂತಹವರು ಮತ್ತು ಕುಷ್ಠ ರೋಗಿಗಳು, ಹಾಸಿಗೆ ಹಿಡಿದ ರೋಗಿಗಳು ಸೂಕ್ತ ದಾಖಲೆ ನೀಡಿ ತಹಶೀಲ್ದಾರ್‌ ಕಚೇರಿಯ ಆಹಾರ ನಿರೀಕ್ಷಕರ ಲಾಗಿನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಮೃತಪಟ್ಟಿದ್ದರೆ ಮದುವೆಯಾಗಿ ಹೋಗಿದ್ದರೆ ಸ್ಥಳದಲ್ಲಿ ವಾಸವಿಲ್ಲದಿದ್ದರೆ ಅಂತವರ ಹೆಸರುಗಳನ್ನು ಪಡಿತರ ಚೀಟಿಯಿಂದ ತೆಗೆದುಹಾಕಬೇಕು. ವರಮಾನ ಹೆಚ್ಚು ಇದ್ದು ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್‌ ಪಡೆದಿದ್ದರೆ ಆಹಾರ ನಿರೀಕ್ಷಕರಿಗೆ ಅಂತಹವರ ಮಾಹಿತಿ ನೀಡಿ ಕಾರ್ಡ್‌ ರದ್ದುಪಡಿಸಬೇಕು. ಸರಕಾರಿ ಅರೇ ಸರಕಾರಿ ನೌಕರರು ಕಾರ್ಡ್‌ಪಡೆದಿದ್ದರೆ ತಕ್ಷಣವೇ ಕಾರ್ಡ್‌ನ್ನು ಇಲಾಖೆಗೆ ಒಪ್ಪಿಸಿ ಹೊಸ ಅರ್ಜಿ ಹಾಕಿ ಎಪಿಎಲ್ ಕಾರ್ಡ್‌ ಪಡೆದುಕೊಳ್ಳಬೇಕು ಒಂದು ವೇಳೆ ತನಿಖೆಯಲ್ಲಿ ಸಿಕ್ಕುಬಿದ್ದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ತಾಕೀತು ಮಾಡಿದರು.

ಪ್ರತಿ ಕಾರ್ಡ್‌ನ ಎಲ್ಲಾ ಸದಸ್ಯರ ಹೆಬ್ಬರಳು ಗುರುತು ಪಡೆಯವ ಕೆಲಸವನ್ನು ಅಂಗಡಿಯ ಮಾಲೀಕರು ಎರಡು ತಿಂಗಳವರೆಗೆ ನೋಂದಣಿ ಶುಲ್ಕವನ್ನು ಸರಕಾರ ಭರಿಸಲಿದೆ. ಒಟ್ಟಾರೆಯಾಗಿ ಸೋರಿಕೆ ತಡೆಗಟ್ಟಲು ವಿತರಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಸೂಚಿಸಿದರು.

Advertisement

ಆಹಾರ ಶಿರಸ್ತೇದಾರ ರವಿಕುಮಾರ, ನಿರೀಕ್ಷಕರಾದ ತಿರುಪತಿ. ಅಪ್ಪಯ್ಯ ಹಿರೇಮಠ ಸೀನಿಯರ ಪ್ರೋಗ್ರಾಮರ್‌ ಮಲ್ಲೇಶಿ, ಮಹೇಶ ಇದ್ದರು. ವಿತರಕರ ಸಂಘದ ಅಧ್ಯಕ್ಷ ತಿರುಪತಿಗೌಡ ಚಿಗರಿಹಾಳ, ವೆಂಕಟೇಶ ದೇವತ್ಕಲ್, ಬಸವರಾಜಪ್ಪ ತಂಬಾಕೆ, ಶರಣಗೌಡ ದೇಸಾಯಿ, ಆರ್‌.ಎಲ್. ಜಕಾತಿ, ಶಿವರಾಯ ಕಾಡ್ಲೂರ. ಮೋಹನ ರಫುಗಾರ, ರಮೇಶ ದೊರೆ, ರಾಜು ಬನ್ನಿಗಿಡ, ಆರ್‌.ಬಿ. ದೇಶಪಾಂಡೆ, ಎಸ್‌.ಬಿ. ಪಾಟೀಲ, ಈಶ್ವರಯ್ಯ, ಮಹಣಮಂತ್ರಾಯ, ಮಲ್ಕಣಗೌಡ, ರಂಗಪ್ಪ ಬಾದ್ಯಾಪುರ, ನಾಗರೆಡ್ಡಿ ರತ್ತಾಳ, ಮಾನಯ್ಯ ಶಾಂತಪುರ, ಬಸಣಗೌಡ ಪಾಟೀಲ, ಮಹಿಬೂಬ ನಾಲತವಾಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next