Advertisement
ಇಲ್ಲಿಯ ನ್ಯಾಯಾಲಯದಲ್ಲಿ ಬುಧವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಜಿಲ್ಲಾ ಹಾಗೂ ತಾಲೂಕು ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ಟಂಟಂ, ಆಟೋ, ಪಿಕಪ್ ಸೇರಿದಂತೆ ಇತರೆ ಸರುಕು ಸಾಗಣೆ ವಾಹನಗಳಲ್ಲಿ ಮದುವೆ ದಿಬ್ಬಣಗಳಿಗೆ ಪ್ರಯಾಣ ಮಾಡುವುದು. ಹೊಲ ಗದ್ದೆಗಳಿಗೆ ಕಾರ್ಮಿಕರನ್ನು ಕರೆದು ಕೊಂಡು ಹೋಗುವುದು. ಪ್ರಯಾಣಿಕರನ್ನು ಹೊತ್ತೂಯುವುದು ಅಪರಾಧ. ಇಂತಹ ಘಟನೆ ಕಂಡು ಬಂದಲ್ಲಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಳ್ಳಬೇಕು. ಇಂತಹ ಸಂದರ್ಭಗಳಲ್ಲಿ ಅವಘಡ ನಡೆದು ಸಾವು ನೋವು ಆದರೆ ಮೃತ ಕಟುಂಬದವರಿಗೆ ಯಾವುದೇ ಪರಿಹಾರ ಸಿಗುವುದಿಲ್ಲ. ಕಾರಣ ಕಾರ್ಮಿಕರು ಈ ಬಗ್ಗೆ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಮಿಕ ಯೋಜನಾ ನಿರ್ದೇಶಕ ರಘುವೀರ ಸಿಂಗ್ ಠಾಕೂರ ಮಾತನಾಡಿ, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಾದ ಕೃಷಿ ಕೂಲಿ, ಹಮಾಲರು, ಕಟ್ಟಡ, ಕಲ್ಲು ಕ್ವಾರಿ, ಗಣಿ, ಇಟ್ಟಂಗಿ ಬಟ್ಟಿ ಟೈಲರ್‌ಗಳು, ಚಿಂದಿ ಆಯುವವರು, ಗೃಹ ಕಾರ್ಮಿಕರು ಮೆಕ್ಯಾನಿಕ್, ಅಗಸರು, ಕ್ಷೌರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಮಂಡಕ್ಕಿ ಸೇರಿದಂತೆ ಇತರೆ ವರ್ಗದ ಕಾರ್ಮಿಕರ ಹೆಸರು ನೋಂದಾಯಿಸಲಾಗುತ್ತಿದೆ. ರೇಷನ್ ಕಾರ್ಡ್, ಆಧಾರ್ ಕಾರ್ಡ್, ಭಾವಚಿತ್ರ ಇತರೆ ದಾಖಲೆ ನೀಡಿ ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.
ವಿವಿಧ ಇಲಾಖೆಗಳಲ್ಲಿ ಸೇವೆಯಲ್ಲಿರುವ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷ ಹಣಮಂತ್ರಾಯ ಕರಡಿ. ಸದಸ್ಯ ಮಾಳಪ್ಪ ವಂಟೂರ, ತಾಲೂಕು ಕಾರ್ಮಿಕ ಅಧಿಕಾರಿ ಶಿವಶಂಕರ ತಳವಾರ, ಸಿಡಿಪಿ ಲಾಲಸಾಹೇಬ ಪೀರಾಪುರ, ವಕೀಲರ ಸಂಘದ ಅಧ್ಯಕ್ಷ ನಂದನಗೌಡ ಪಾಟೀಲ ಮಕ್ಕಳ ರಕ್ಷಣಾ ಘಟಕದ ರಾಜೇಂದ್ರಯಾದವ ವೇದಿಕೆಯಲ್ಲಿದ್ದರು. ವಕೀಲ ಅಪ್ಪಣ್ಣ ಗಾಯಕವಾಡ ನಿರೂಪಿಸಿ, ವಂದಿಸಿದರು.