Advertisement
ಯುವ ವೇದಿಕೆ ತಾಲೂಕು ಅಧ್ಯಕ್ಷ ಚಂದ್ರಶೇಖರ ಡೋಣೂರು ಮಾತನಾಡಿ, ರಾಜ್ಯದಲ್ಲಿ ಎಲ್ಲಾ ಜಾತಿ ಸಮುದಾಗಳ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಾಗಿದ್ದು, ವೀರಶೈವ ಲಿಂಗಾಯತ ನಿಗಮ ಸ್ಥಾಪನೆ ಮಾಡಿಲ್ಲ. ಇದುವರೆಗೂ ಅಧಿ ಕಾರ ನಡೆಸಿರುವ ಸರಕಾರಗಳು ಸಮಾಜವನ್ನು ಕಡೆಗಣಿಸುತ್ತಾ ಬಂದಿವೆ.
Related Articles
Advertisement
ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯದಲ್ಲಿ ನೂರಾರು ಒಳ ಪಂಗಡಗಳಿದ್ದು, ನಮ್ಮ ಸಮಾಜದ ಯುವಕರು ಸರಿಯಾದ ಶಿಕ್ಷಣ, ಉದ್ಯೋಗವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಮಾಜದ ಮುಖಂಡ ಸೋಮಶೇಖರ ಶಾಬಾದಿ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯದ ಹಿತ ದೃಷ್ಟಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಿ ಉದ್ಯೋಗ, ಶಿಕ್ಷಣ ಇತರೆ ಸೌಲಭ್ಯಕ್ಕಾಗಿ ಮೀಸಲಾತಿಯನ್ನು ಸಹ ನೀಡಿ ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಒತ್ತಾಯಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬರೆದ ಮನವಿಯನ್ನು ಗ್ರೇಡ್ 2 ತಹಶೀಲ್ದಾರ್ ಸೋಫಿಯಾ ಸುಲ್ತಾನ್ ಅವರಿಗೆ ನೀಡಿದರು. ವೀರಶೈವ ಲಿಂಗಾಯತ ಯುವ ವೇದಿಕೆ ಮುಖಂಡರಾದ ವೀರೇಶ ನಿಷ್ಠಿ ದೇಶಮುಖ, ಶಿವರಾಜ ಕಲಕೇರಿ, ವೀರೇಶ ಪಂಚಾಂಗ ಮಠ, ಶೇಖರಗೌಡ, ಬಸಣ್ಣಗೌಡ, ಮಂಜುನಾಥ ಗುಳಗಿ, ಜಗದೀಶ ಪಾಟೀಲ, ರಾಘವೇಂದ್ರ ಸಗರ, ಶರಣಯ್ಯಸ್ವಾಮಿ, ಮಲ್ಕಪ್ಪ ಅಕ್ಕಿ, ಸೂಗುರೇಶ ಮಡ್ಡಿ, ಹರೀಶ ಹಳ್ಳದ, ಬಾಗೇಶ ಕಾಳಗಿ, ಮಂಜು ಮಠಪತಿ, ದಿನೇಶ ದಾದಾ, ಕುಮಾರ ಹೂಗಾರ, ಶಿವು ಹೂಗಾರ, ಬಸನಗೌಡ ಶಂಕರಗೌಡ ಮುನಮುಟಗಿ ಇದ್ದರು.