Advertisement

ಮಕ್ಕಳ ಕಲಿಕೆಗೆ ಶೈಕ್ಷಣಿಕ ಮೇಳ ಸಹಕಾರಿ

06:13 PM Dec 12, 2019 | Naveen |

ಸುರಪುರ: ಮಕ್ಕಳ ಕಲಿಕೆ ಅಭಿವೃದ್ಧಿಗೆ ಶೈಕ್ಷಣಿಕ ಮೇಳಗಳು ಹೆಚ್ಚು ಸಹಕಾರಿಯಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನ ಓಲೇಕಾರ ಹೇಳಿದರು.

Advertisement

ನಗರದ ಖುರೇಶಿ ಮೊಹಲ್ಲಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಅಜೀಂ ಪ್ರೇಮಜೀ ಫೌಂಡೇಶನ್‌ ಸಹಯೋಗದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಭಾಷಾ ಮತ್ತು ಗಣಿತ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಮೇಳಗಳಿಂದ ಮಕ್ಕಳಲ್ಲಿ ಗುಣಾತ್ಮಕ ಕಲಿಕೆ ಉಂಟು ಮಾಡಲು ಸಾಧ್ಯ ಎಂದು ಹೇಳಿದರು.

ಅಜೀಮ್‌ ಪ್ರೇಮಜೀ ಫೌಂಡೇಶನ್‌ ಸಂಪನ್ಮೂಲ ವ್ಯಕ್ತಿ ಅನ್ವರ್‌ ಜಮಾದಾರ್‌ ಮಾತನಾಡಿ, ಕಳೆದ ಇಪ್ಪತ್ತು ದಿನಗಳಿಂದ ಮಕ್ಕಳು ನಿರಂತರವಾಗಿ ಭಾಷೆ ಮತ್ತು ಗಣಿತಕ್ಕೆ ಸಂಬಂಧಿಸಿದ ಅನೇಕ ಚಟುವಟಿಕೆ ಅನುಭವತ್ಮಾಕವಾಗಿ ಕಲಿತಿರುವುದಕ್ಕೆ ಈ ಮೇಳ ಸಾಕ್ಷಿಯಾಗಿದೆ. ಇಂತಹ ಶೈಕ್ಷಣಿಕ ಮೇಳಗಳಿಂದ ಮಕ್ಕಳಲ್ಲಿ ಯೋಚಿಸುವ, ಪ್ರಶ್ನಿಸುವ ಹಾಗೂ ನಿರರ್ಗಳವಾಗಿ ಮಾತನಾಡುವ ಸಾಮರ್ಥ್ಯಗಳ ಅಭಿವೃದ್ಧಿಯಾಗುವುದು ಎಂದು ಹೇಳಿದರು.

ಭಾಷೆ ಮತ್ತು ಗಣಿತ ವಿಷಯದ ಚಟುವಟಿಕೆಗಳಾದ ಸನ್ನಿವೇಶ ನೋಡಿ ವಿವರಿಸುವುದು, ಚಿತ್ರ ನೋಡಿ ಕಥೆ ರಚಿಸುವುದು, ಸ್ವಂತ ವಾಕ್ಯ ಬಳಸಿ, ಗಾದೆ ಮಾತುಗಳು, ಪದ ರಚನೆ, ಕಥೆಗೆ ಶೀರ್ಷಿಕೆ ಬರೆಯುವುದು, ಗಣಿತದ ಮೂಲಕ್ರಿಯೆಗಳು, ನನ್ನ ಸಮಯ, ಆಕೃತಿಗಳು, ಹಾವು ಏಣಿ ಆಟ ಹೀಗೆ ಅನೇಕ ವಿಷಯಗಳು ಕುರಿತು ಮಕ್ಕಳು ವಿವರಿಸಿದರು. ಶಾಲೆ ಮುಖ್ಯ ಶಿಕ್ಷಕ ಸಾಮ್ಯುವೆಲ್‌ ಅಧ್ಯಕ್ಷತೆ ವಹಿಸಿದ್ದರು. ಖುರೇಶಿ ಮೊಹಲ್ಲಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುರಬರಗಲ್ಲಿ ಸರಕಾರಿ ಪ್ರಾಥಮಿಕ ಶಾಲೆ, ಪಾಳದಕೇರಿ ಸರಕಾರಿ ಪ್ರಾಥಮಿಕ ಶಾಲೆ, ಖುರೇಶಿ ವೇಹಲ್ಲಾ ಸರಕಾರಿ ಪ್ರಾಥಮಿಕ ಉರ್ದು ಶಾಲೆ ಮಕ್ಕಳು ಭಾಗವಹಿಸಿದ್ದರು. ಬಿಆರ್‌ಸಿ ಅಮರೇಶ ಕುಂಬಾರ, ಬಿಆರ್‌ಪಿ ಖಾದರ್‌ ಪಟೇಲ್‌, ಸಿಆರ್‌ಪಿ ತಿಪ್ಪಣ್ಣ ಶಿನ್ನೂರ, ಯೂನುಸ್‌ ಕಮತಗಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೋಮರಡ್ಡಿ ಮಂಗಿಹಾಳ, ಜಾಕೀರ್‌ ಹುಸೇನ್‌, ಶಿಕ್ಷಕರಾದ ಮಮತಾ, ರವಿ ಗಲಗಿನ, ರೇಣುಕಾ, ಬಸಯ್ಯ ಮಠಪತಿ, ಮುಲ್ಕಚಾಂದ, ಸುಜಾತಾ, ಅಮರಯ್ಯ, ಚನ್ನಪ್ಪ ಕ್ಯಾದಗಿ, ಇಂದುಮತಿ, ಅಬ್ದುಲ್‌ ರಹೀಮ್‌, ಸಬೀಯಾ ಬಾನು, ಶಕೀಲ್‌, ರಾಜಶೇಖರ ದೇಸಾಯಿ, ಪ್ರಮುಖರಾದ ಮಹ್ಮದ್‌ ಶಕೀಲ್‌, ಹನೀಫ್‌, ಎಸ್‌ಡಿಎಂಸಿ ಅಂಬಲಪ್ಪ, ನಾಗೇಶ ಗೋಪಾಲ, ಎಪಿಎಫ್‌ನ ಪರಮಣ್ಣ ತೆಳಗೇರಿ, ಸುರಪುರ ಕ್ಲಸ್ಟರ್‌ನ ವಿವಿಧ ಶಾಲೆ ಶಿಕ್ಷಕರು, ಮಕ್ಕಳು ಪಾಲಕ ಮತ್ತು ಪೋಷಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next