Advertisement

ಬೆಳಕಿನ ಹಬ್ಬಕ್ಕೆ ಪಣತಿ ಖರೀದಿ ಜೋರು

12:32 PM Oct 27, 2019 | |

„ಸಿದ್ದಯ್ಯ ಪಾಟೀಲ
ಸುರಪುರ:
ಬೆಳಕಿನ ಹಬ್ಬಕ್ಕೆ ಎಲ್ಲೆಡೆ ಸಂಭ್ರಮದ ಸಿದ್ಧತೆ ನಡೆದಿದ್ದು, ನಗರದಲ್ಲಿ ಪಣತಿ, ಆಕಾಶ ಬುಟ್ಟಿಗಳಿಗೆ ಬೇಡಿಕೆ ಹೆಚ್ಚಿದ್ದು, ಭರ್ಜರಿ ವ್ಯಾಪಾರ ನಡೆಯುತ್ತಿದೆ. ದೀಪಾವಳಿ ಹಬ್ಬ ಬಂದರೆ ಸಾಕು ಎಲ್ಲರಿಗೂ ನೆನಪಾಗುವುದು ಹಣತಿ. ಆದರೆ ವರ್ಷದಿಂದ ವರ್ಷಕ್ಕೆ ಮಣ್ಣಿನ ಹಣತಿಗಳಿಗೆ ಬೇಡಿಕೆ ಕ್ಷೀಣಿಸುತ್ತಿದೆ.

Advertisement

ಆಧುನಿಕ ಸಂಸ್ಕೃತಿಗೆ ಮಾರು ಹೋಗುತ್ತಿರುವ ಜನತೆ ಮಣ್ಣಿನ ಹಣತೆ ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದು, ಫ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಮತ್ತು ಚೀನಿ ಮಣ್ಣಿನ ಪಣತಿಗಳತ್ತ ಜನತೆ ಆಕರ್ಷಿತರಾಗಿದ್ದಾರೆ. ವಿವಿಧ ಮಾದರಿ ಪಣತಿ ಲಭ್ಯ: ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ನಿಂದ ಕೂಡಿದ ಆನೆ ಮೇಲಿನ ಹಣತಿ, ಹೃದಯಾಕಾರದ ಹಣತಿ, ಗುಡಿಸಲು ಮಾದರಿ, ಬಾಳೆ ಎಲೆ ಮಾದರಿ, ಕಮಲದ ಹೂ, ದೀಪಕಾರದ ಹಣತಿ, ಕೈ ಹಸ್ತದಲ್ಲಿರುವ ಹಣತಿ, ಗಂಟೆಯಾಕಾರ ಹಣತಿ, ಧೂಪದ ಮಾದರಿ ಹಣತಿ, ನವಿಲಾಕಾರದ ಹಣತಿ, ತೆಂಗಿನ ಕಾಯಿ ರೂಪದ ಹಣತಿ, ವೃಂದಾವನದಲ್ಲಿನ ಹಣತಿ ಸೇರಿದಂತೆ ಇನ್ನಿತರೆ ಮಾದರಿ ಹಣತಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಮಣ್ಣಿನ ಹಣತಿ ನೋಡಲು ಚೆನ್ನಾಗಿ ಕಾಣುವುದಿಲ್ಲ. ಮನೆ ಎದುರು ಹಚ್ಚಿದರೂ ಆಕರ್ಷಕವಾಗಿ ಕಾಣುವುದಿಲ್ಲ. ಬೆಲೆ ಹೆಚ್ಚಾಗಿದ್ದರೂ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಹಾಗೂ ಚೀನಿ ಪಿಂಗಾಣಿ ಹಣತಿಗಳನ್ನು ಕೊಳ್ಳುವಲ್ಲಿ ಮಹಿಳೆಯರು, ಯುವತಿಯರು ಮಗ್ನರಾಗಿದ್ದಾರೆ.

ಮಣ್ಣಿನ ವಸ್ತುಗಳೇ ಶ್ರೇಷ್ಠ: ಸನಾತನ ಪರಂಪರೆಯಲ್ಲಿ ಮಣ್ಣಿನಿಂದ ತಯಾರಿಸಿದ ಪ್ರತಿಯೊಂದು ವಸ್ತುಗಳಿಗೂ ಐತಿಹಾಸಿಕ ಹಾಗೂ ವೈಜ್ಞಾನಿಕ ಹಿನ್ನೆಲೆ ಇದೆ. ಹಿಂದೆ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳಿಗೂ ಮಣ್ಣಿನ ವಸ್ತುಗಳನ್ನು ಬಳಸುತ್ತಿದ್ದರು. ಇದು ಈಗಲೂ ಮುಂದುವರಿದಿದೆ.

ಹಬ್ಬದ ಸಂಭ್ರಮಕ್ಕೆ ಬೇಕಾಗುವ ಹಣತಿ ಮತ್ತು ಇತರೆ ವಸ್ತುಗಳನ್ನು ಸಿದ್ಧ ಪಪಡಿಸಿಕೊಂಡುವ ಕುಂಬಾರರ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಕುಂಬಾರಿಕೆ ವೃತ್ತಿ ಮೇಲೆಯೇ ಜೀವನ ಸಾಗಿಸುವುದು ಕಷ್ಟವಾಗಿದೆ. ಕುಂಬಾರಿಕೆ ವೃತ್ತಿಯನ್ನೇ ಬಿಟ್ಟು ಬಿಡುವ ಯೋಚನೆಯಲ್ಲಿದ್ದೇವೆ ಎಂದು ರಂಗಂಪೇಟೆ ಮಡಿವಾಳಪ್ಪ ಕುಂಬಾರ ತಮ್ಮ ಅಳಲು ತೋಡಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next