Advertisement

ಮಕ್ಕಳ ಶಿಕ್ಷಣಕ್ಕೆ ಕೊಡಲಿ ಪೆಟ್ಟು

11:27 AM Jul 15, 2019 | Team Udayavani |

ಸುರಪುರ: ಆರ್‌ಟಿಇ ಕಾಯ್ದೆ ರದ್ದತಿ ಕುರಿತು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ರಿಟ್‌ಗೆ ಹಿನ್ನೆಡೆಯಾಗಿದೆ. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಒಕ್ಕೂಟ ತೀರ್ಮಾನಿಸಿದೆ ಎಂದು ಆರ್‌ಟಿಇ ವಿದ್ಯಾರ್ಥಿ ಪಾಲಕ ಪೋಷಕ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಎನ್‌. ಯೋಗಾನಂದ ಹೇಳಿದರು.

Advertisement

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ರವಿವಾರ ಆಯೋಜಿಸಿದ್ದ ಚರ್ಚಾ ಸಭೆಯಲ್ಲಿ ಅವರು ಮಾತನಾಡಿದರು.

2012ರಲ್ಲಿ ಜಾರಿಗೊಂಡಿರುವ ಈ ಕಾಯ್ದೆ ಅಡಿಯಲ್ಲಿ ಇದುವರೆಗೇ ಸುಮಾರು 6.50 ಲಕ್ಷ ವಿದ್ಯಾರ್ಥಿಗಳು ಫಲಾನುಭವಿಗಳಾಗಿದ್ದಾರೆ. ಪ್ರತಿ ವರ್ಷ 1.50 ಲಕ್ಷ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ ಸರಕಾರ ಏಕಾಏಕಿ ಇದನ್ನು ರದ್ದು ಪಡಿಸಿರುವುದರಿಂದ ಬಡವರ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಕೊಡಲಿ ಪೆಟ್ಟು ನೀಡಿದಂತ್ತಾಗಿದೆ. ಐಸಿಎಸ್‌ಇ, ಸಿಬಿಎಸ್‌ಇ ಪಠ್ಯದ ಆಧಾರದಲ್ಲಿ ಶಾಲೆ ನಡೆಸುತ್ತಿರುವ ದೊಡ್ಡ ದೊಡ್ಡ ಸಂಸ್ಥೆಗಳು ಆರ್‌ಟಿಇ ದಾಖಲಾತಿಯನ್ನು ನಿರಾಕರಣೆ ಮಾಡುತ್ತಿದ್ದು, ಪ್ರತಿಷ್ಠಿತ ಸಂಸ್ಥೆಗಳನ್ನು ಇನ್ನಷ್ಟು ಎತ್ತರಕ್ಕೆ ಹೋಗುವ ಉದ್ದೇಶದಿಂದ ಸರಕಾರ ಈ ಕಾಯ್ದೆ ರದ್ದು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ತನ್ವೀರ್‌ ಶೇs್ ಅವರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಶಿಕ್ಷಣ ಇಲಾಖೆ ಕಾರ್ಯದರ್ಶಿ ಶಾಲಿನಿ ಘೋಯಲ್ ಅವರಿಗೆ ಮಾಹಿತಿ ನೀಡಿ ವಿವರಿಸಲಾಗಿತ್ತು. ಈ ಬಗ್ಗೆ ಭರವಸೆಯೂ ಸಿಕಿತ್ತು. ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೆಲ ದುಷ್ಟಕೂಟಗಳು ಕಾಯ್ದೆ ರದ್ದತಿಗೆ ಒತ್ತಾಯ ಮಾಡುತ್ತಲೇ ಇದ್ದವು. ಇದಕ್ಕೆ ಮಣಿದ ಸರಕಾರ ಕಾಯ್ದೆ ರದ್ದು ಮಾಡಿ ಈಗ ಹೊಸ ನಿಯಮ ಜಾರಿಗೆ ಮುಂದಾಗಿದೆ. ಇದರಿಂದ ಬಡ ಪೋಷಕರಿಗೆ ಅನ್ಯಾಯವಾಗಲಿದ್ದು, ಇದನ್ನೂ ಕೂಡಲೆ ಕೈ ಬಿಟ್ಟು ಹಳೆ ಮಾದರಿಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಮಾಚಿ ಸಚಿವ, ಖಾಸಗಿ ಶಿಕ್ಷಣ ಸಂಸ್ಥೆಗಳ ತಾಲೂಕು ಒಕ್ಕೂಟದ ಅಧ್ಯಕ್ಷ ರಾಜಮದನ ಗೋಪಾಲ ನಾಯಕ ಮಾತನಾಡಿ, ಈ ಕಾಯ್ದೆ ರದ್ದತಿಯ ಹಿಂದೆ ದೊಡ್ಡ ದೊಡ್ಡ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಇದನ್ನು ತಡೆದು ಸಣ್ಣ ಸಣ್ಣ ಖಾಸಗಿ ಶಾಲೆಗಳನ್ನು ಉಳಿಸುವ ಕೆಲಸವಾಗಬೇಕು. ಹೈ ಕೋರ್ಟ್‌ನಲ್ಲಿ ಹಿನ್ನೆಡೆಯಾದರೂ ಸುಪ್ರೀಂನಲ್ಲಿ ನ್ಯಾಯ ಸಿಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

Advertisement

ಆರ್‌ಟಿಇ ಕಾಯ್ದೆ ಬರುವುದಕ್ಕಿಂತ ಮುಂಚಿತವಾಗಿಯೇ ಶಾಲೆಗಳು ನಡೆಯುತ್ತಿದ್ದವು. ಮಕ್ಕಳಿಗೆ ವಿದ್ಯೆ ಕೊಡುವ ಉದ್ದೇಶದಿಂದ ಖಾಸಗಿ ಶಾಲೆಗಳನ್ನು ತೆರೆಯಲಾಗಿದೆ. ಈ ಹಿಂದೆ ಆರ್‌ಟಿಇ ಪ್ರವೇಶ ಪಡೆದಿರುವ ಮಕ್ಕಳಿಗೆ 8ನೇ ತರಗತಿವರೆಗೂ ಸರ್ಕಾರದಿಂದ ಅನುದಾನ ದೊರೆಯಲಿದೆ. ಭಯ ಪಡುವ ಅಗತ್ಯವಿಲ್ಲ ಎಂದರು.

ನಿವೃತ್ತ ಎಸ್ಪಿ ಒಕ್ಕೂಟದ ಗೌರವಾಧ್ಯಕ್ಷ ಸಿ.ಎನ್‌. ಭಂಡಾರೆ, ಸಗರ ತಾಲೂಕಿನ ಉಪಾಧ್ಯಕ್ಷ ರಾಮು ಸಗರ, ದೇವದುರ್ಗದ ಶಿವಕುಮಾರ ಅರವಿ, ಬಸವರಾಜ ಜಮದ್ರಖಾನಿ, ಸುಧಾಕರ ಕುಲಕರ್ಣಿ, ತಿರುಪತಿ ಶೆಟ್ಟಿ, ಸೋಮಶೇಖರ ಸಹಾಬಾದಿ, ಕೃಷ್ಣ ದರಬಾರಿ, ಎಂ.ಬಿ. ಪಾಟೀಲ ಇದ್ದರು. ಕೃಷ್ಣ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಅಪ್ಪಣ್ಣ ಕುಲಕಣಿ ಸ್ವಾಗತಿಸಿದರು. ಮೌನೇಶ ಕಳಸರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next