Advertisement
ಈ ವಿಮಾನ ಮಾದರಿಯನ್ನು ವೈಮಾನಿಕ ಪ್ರದರ್ಶನ “ಏರೋ ಇಂಡಿಯಾ’ದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದು ನೋಡುಗರ ಗಮನ ಸೆಳೆಯುತ್ತಿದೆ. ನೆಲದಿಂದ ಸುಮಾರು 3 ಮೀಟರ್ ಒಳಗೆ ಶತ್ರುಗಳು ಅಡಗಿಸಿಟ್ಟಿರುವ ಲೋಹದ ವಸ್ತುಗಳು ಅಥವಾ ಲೋಹದ ವಸ್ತುಗಳನ್ನು ಹೊತ್ತು ನುಸುಳುವ ಶತ್ರುಗಳನ್ನು ಈ ಪವನ್‌ಸಟ್ ವಿಮಾನ ಪತ್ತೆಹಚ್ಚಲಿದೆ. ಈಚೆಗೆ ಅಭಿವೃದ್ಧಿಪಡಿಸಿದ ಈ ವಿಮಾನವನ್ನು ಈಗ ಭಾರತೀಯ ಭದ್ರತಾ ಪಡೆಯಲ್ಲಿ ಬಳಸಿಕೊಳ್ಳಲು ರಕ್ಷಣಾ ಇಲಾಖೆ ಆಸಕ್ತಿ ತೋರಿಸಿದೆ ಎಂದು ಎಲ್ಕಂಪೊನಿಕ್ಸ್ ಗ್ರೂಪ್ ನ ಯೋಜನಾ ಸಲಹೆಗಾರ್ತಿ ರಿಚಾ ಶರ್ಮಾ ತಿಳಿಸಿದ್ದಾರೆ.
ರೆಡಾರ್ (ಎಸ್‌ಎಆರ್) ಅಳವಡಿಸಿದ್ದು, ಇದರ ಸಹಾಯದಿಂದ ನೆಲದಿಂದ ಮೂರು ಮೀಟರ್ ಒಳಗಿರುವ ಲೋಹದ ವಸ್ತುಗಳನ್ನು
ಕಂಡುಹಿಡಿಯುತ್ತದೆ. ಗಂಟೆಗೆ 180 ಕಿ.ಮೀ. ವೇಗದಲ್ಲಿ ಈ ವಿಮಾನ ಹಾರುತ್ತದೆ. ನಿರಂತರ 12 ಗಂಟೆ ಇದು ಕಾರ್ಯಾಚರಣೆ ಮಾಡಬಲ್ಲದು ಎಂದು ರಿಚಾ ಶರ್ಮಾ ವಿವರಿಸಿದರು. ಈಗಾಗಲೇ ಕಣ್ಗಾವಲಿಗಾಗಿ ಹಲವು ಹೈಟೆಕ್ ಡ್ರೋಣ್ ಮತ್ತು ಮಾನವರಹಿತ ವಾಹನಗಳು ರಕ್ಷಣಾ ಕ್ಷೇತ್ರದಲ್ಲಿವೆ. ಆದರೆ, ಅವು ಬೃಹದಾಕಾರದ ವಿಮಾನಗಳಾಗಿದ್ದು, ಇವುಗಳ ಮೂರನೇ ಒಂದು ಭಾಗದಷ್ಟು ಗಾತ್ರವನ್ನು “ಪವನ್‌ಸಟ್’ ವಿಮಾನ ಹೊಂದಿದೆ. ಇದರ ಬೆಲೆ 75 ಲಕ್ಷ ರೂ. “ಮೇಕ್ ಇನ್ ಇಂಡಿಯಾ’ ಯೋಜನೆ ಅಡಿ ಇದನ್ನು ನಿರ್ಮಿಸಲಾಗಿದೆ. ಇದೇ ಮಾದರಿಯ ಮತ್ತೂಂದು ಮಾನವರಹಿತ ಪವನ್‌ಸಟ್ ವಿಮಾನವನ್ನು ಪರಿಚಯಿಸಿದ್ದು, ಕೃಷಿ ಉದ್ದೇಶಗಳಿಗೂ ಅದನ್ನು ಬಳಸಬಹುದಾಗಿದೆ. ದೊಡ್ಡ ಗಾತ್ರದ ಕೃಷಿ ಭೂಮಿಯಲ್ಲಿ ಬೆಳೆಗಳ ನಿಖರ ಮಾಹಿತಿಯನ್ನು ಚಿತ್ರಗಳ ಸಹಿತ ಸೆರೆಹಿಡಿದು ಇದು ರವಾನಿಸಲಿದೆ.
Related Articles
ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ (ನ್ಯಾಷನಲ್ ಏರೋಸ್ಪೇಸ್ ಲ್ಯಾಬರೋಟರೀಸ್) ಶತ್ರುಗಳ ಮೇಲಿನ ಕಣ್ಗಾವಲಿಡಲು ಮೈಕ್ರೊ ಮಾನವರಹಿತ ವಿಮಾನಗಳನ್ನು ಪರಿಚಯಿಸಿದೆ. ಈ “ಮೈಕ್ರೊ ಯುಎವಿ’ (ಮೈಕ್ರೊ ಅನ್‌ಮ್ಯಾನ್x ಏರಿಯಲ್ ವೇಹಿಕಲ್) ಗಾತ್ರ ಕೇವಲ 150 ಸೆಂ.ಮೀ. ಆಗಿದ್ದು, ಸುಮಾರು 100 ಮೀಟರ್‌ನಷ್ಟು ಎತ್ತರದಲ್ಲಿ ನಿರಂತರ 45 ನಿಮಿಷ ಹಾರಬಲ್ಲದು. ಇದರಲ್ಲಿ
ಅಳವಡಿಸಿರುವ ಕ್ಯಾಮೆರಾಗಳ ಮೂಲಕ ವಿಡಿಯೋ ಚಿತ್ರೀಕರಣ ಮಾಡಿ, ನಿಯಂತ್ರಣ ಕೊಠಡಿಗೆ ಸಂದೇಶ ರವಾನಿಸುತ್ತದೆ. ದೊಡ್ಡ ಯುಎವಿಗಳನ್ನು ಶತ್ರುಗಳ ರೆಡಾರ್‌ಗಳು ಸುಲಭವಾಗಿ ಪತ್ತೆ ಹಚ್ಚಿ, ಧ್ವಂಸ ಮಾಡಿಬಿಡುತ್ತವೆ. ಆದರೆ, ಈ ಮೈಕ್ರೊ ಯುಎವಿ
ರೆಡಾರ್ ಕಣ್ಣಿಗೆ ಬಿದ್ದರೂ, ಕೀಟವೋ ಅಥವಾ ಮಾಹಿತಿ ರವಾನಿಸುವ ಯುಎವಿ ಎಂಬುದು ಗೊತ್ತಾಗುವುದಿಲ್ಲ. ಈ ಉದ್ದೇಶಕ್ಕಾಗಿ ಇದನ್ನು ತಯಾರಿಸಲಾಗಿದೆ ಎಂದು ಎನ್‌ಎಎಲ್ ವಿಜ್ಞಾನಿ ಪಂಕಜ್ ಮಾಹಿತಿ ನೀಡಿದರು.
Advertisement
ವಿಜಯಕುಮಾರ್ ಚಂದರಗಿ