Advertisement
ಸೂರಂಬೈಲು ಸಮೀಪದ ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮತ್ತು ಉಳ್ಳಾಕ್ಲು, ಧೂಮಾವತಿ, ರಕ್ತೇಶ್ವರಿ ದೈವ ಸಾನಿಧ್ಯಗಳ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಥಮ ದಿನ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
Related Articles
Advertisement
ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀಕೃಷ್ಣಪ್ರಸಾದ್.ಕೆ.ಎಚ್ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿಯ ಜೊತೆಕಾರ್ಯದರ್ಶಿ ಸೂರ್ಯನಾರಾಯಣ ಹೊಸಮನೆ ವಂದಿಸಿದರು. ನೀನಾಸಂ ಕಲಾವಿದ ಮಂಜುನಾಥ ಹೊಸಮನೆ ಕಾರ್ಯಕ್ರಮ ನಿರೂಪಿಸಿದರು.
ಸಂಜೆ ಶ್ರೀಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳನ್ನು ಪೂರ್ಣಕುಂಭಗಳೊಂದಿಗೆ ಸ್ವಾಗತಿಸಲಾಯಿತು. ವೈದಿಕ ಕಾರ್ಯಕ್ರಮಗಳ ಅಂಗವಾಗಿ ರಾತ್ರಿ ಆಚಾರ್ಯವರಣ, ಋತ್ವಿಕವರಣ, ಪುಣ್ಯಾಹ, ಅಂಕುರಾರೋಪಣ, ಸ್ಥಳಶುದ್ಧಿ, ಪ್ರಾಸಾದಶುದ್ಧಿ, ವಾಸ್ತುಹೋಮ, ರಕೋÒಘ್ನ ಹೋಮಗಳು ಜರಗಿದವು.
ಮರುದಿನ ಬೆಳಿಗ್ಗೆ ಗಣಪತಿ ಹೋಮ, ಉಷಃಪೂಜೆ, ಅಂಕುರಪೂಜೆ, ಚತುಃಶುದ್ಧಿ, ಧಾರಾಪಂಚಕಂ, ಪಂಚಗವ್ಯಂ ಮತ್ತು ಸಾಯಂಕಾಲ ಕುಂಡ ಶುದ್ಧಿ, ಅಂಕುರಪೂಜೆ, ರಾತ್ರಿಪೂಜೆಗಳ ವಿಧಿವಿಧಾನಗಳು ನೆರವೇರಿದವು. ಅನಂತಪದ್ಮನಾಭ ಮಹಿಳಾ ಭಜನಾ ಸಂಘ ಅನಂತಪುರ, ಸಾರಥಿ ಮಹಿಳಾ ಭಜನಾ ಸಂಘ ಮುಜುಂಗಾವು, ಮಹಾದೇವ ಶಾಸ್ತಾರ ಭಜನಾ ಸಂಘ ಕಿದೂರು ಇವರಿಂದ ಬೆಳಿಗ್ಗೆ ಮತ್ತು ಶಾಸ್ತಾ ಭಜನಾ ಸಂಘ ನಾಯ್ಕಪು ಇವರಿಂದ ಅಪರಾಹ್ನ ಭಜನಾ ಕಾರ್ಯಕ್ರಮ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ 10.30 ರಿಂದ ಯಸ್.ಯಸ್.ಯಸ್.ಗ್ರೂಪ್, ಐ.ಸಿ.ರೋಡ್ ಮುಜುಂಗಾವು ಇವರಿಂದ ಭಕ್ತಿಗಾನಸುಧಾ, ಅಪರಾಹ್ನ ಯಕ್ಷಭಾರತೀ ನೀರ್ಚಾಲು ಇವರಿಂದ “ಸುಧನ್ವ ಮೋಕ್ಷ ‘ ಯಕ್ಷಗಾನ ತಾಳಮದ್ದಳೆ, ಸಾಯಂಕಾಲ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಇವರಿಂದ ಹರಿಕಥಾ ಸಂಕೀರ್ತನೆ ಮತ್ತು ಸ್ಥಳೀಯ ಕಲಾವಿದರಿಂದ ನƒತ್ಯ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯಗಳು ಜರಗಿದವು.
ಇಂದಿನ ಕಾರ್ಯಕ್ರಮ:ಗುರುವಾರದಂದು ಸಾಯಂಕಾಲ ಅ—ವಾಸ ಹೋಮ, ಕಲಶಾ—ವಾಸ ಕ್ರಿಯೆಗಳು ಮತ್ತು ಪ್ರಾರ್ಥನೆಗಳು ನಡೆಯಲಿವೆ. ಶ್ರೀರಾಮ ಭಜನಾ ಸಂಘ ನಾಯ್ಕಪು, ಮಹಾದೇವಿ ಮಹಿಳಾ ಭಜನಾ ಸಂಘ ಕಳತ್ತೂರು, ವಿವೇಕಾನಂದ ಸ್ವಸಹಾಯ ಸಂಘ ಬೆರಿಪದವು ಇವರಿಂದ ಬೆಳಿಗ್ಗೆ ಮತ್ತು ಶ್ರೀಕೃಷ್ಣ ಭಜನಾ ಮಂಡಳಿ ಮಂಗಲ್ಪಾಡಿ ಇವರಿಂದ ಅಪರಾಹ್ನ ಭಜನಾ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ 10.30 ರಿಂದ ವಾಣಿಪ್ರಸಾದ್ ಕಬೆಕೋRಡು ಇವರ ಶಿಷ್ಯೆ ಕುಮಾರಿ ರೂಪಾ ಕನಕಪ್ಪಾಡಿ ಇವರಿಂದ ಸಂಗೀತ ಕಛೇರಿ, ಸಂಜೆ ಡಾ.ಕಿರಣ್ ಕುಮಾರ್, ‘ಗಾನಸಿರಿ’ ಪುತ್ತೂರು ಇವರ ಶಿಷ್ಯೆ ಕುಮಾರಿ ವಿಭಾಶ್ರೀ ಬೆಳ್ಳಾರೆ ಇವರಿಂದ ಭಕ್ತಿ-ಭಾವ-ಗಾನ ಕಾರ್ಯಕ್ರಮ ಜರುಗಿತು. ನಾಟ್ಯ ವಿದ್ಯಾನಿಲಯ ಕುಂಬಳೆಯ ವಿದ್ಯಾಲಕ್ಷಿ¾ ಇವರ ಶಿಷ್ಯವೃಂದದವರಿಂದ ರಾತ್ರಿ 8 ಗಂಟೆಗೆ ‘ನƒತ್ಯ ಸಂಭ್ರಮ – 2019’ ಕಾರ್ಯಕ್ರಮ ಪ್ರಸ್ತುತಿ ನಡೆಯಲಿದೆ.