Advertisement

ಸುಪ್ರೀಂ ತೀರ್ಪು; ಅನರ್ಹ ಶಾಸಕರಿಗಿಂತ ಬಿಎಸ್ ಯಡಿಯೂರಪ್ಪಗೆ ಹೆಚ್ಚು ರಿಲೀಫ್!

09:29 AM Sep 27, 2019 | Nagendra Trasi |

ಬೆಂಗಳೂರು: ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ, ಕರ್ನಾಟಕದ 15 ಕ್ಷೇತ್ರಗಳ ಉಪಚುನಾವಣೆಗೆ ತಡೆ ನೀಡಿದ್ದು ಅನರ್ಹ ಶಾಸಕರಿಗೆ ತಾತ್ಕಾಲಿಕ ನಿರಾಳವಾಗಿದ್ದರೆ ಮತ್ತೊಂದೆಡೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಇನ್ನಷ್ಟು ರಿಲೀಫ್ ಸಿಕ್ಕಿದಂತಾಗಿದೆ.

Advertisement

ಅನರ್ಹ ಶಾಸಕರ ಅರ್ಜಿ ವಿಚಾರಣೆ ಕಳೆದ ಎರಡು ದಿನಗಳಿಂದ ಸುಪ್ರೀಂಕೋರ್ಟ್ ನಲ್ಲಿ ನಡೆಯುತ್ತಿದ್ದು, ಇದರಿಂದ ತೀರ್ಪು ಏನು ಬರುತ್ತದೆಯೋ ಎಂಬ ಆತಂಕದಲ್ಲಿ ಅನರ್ಹ ಶಾಸಕರಿಗಿಂತ ಯಡಿಯೂರಪ್ಪನವರಿಗೆ ಹೆಚ್ಚು ತಲೆನೋವಾಗಿತ್ತು.

ಒಂದು ವೇಳೆ ಅನರ್ಹ ಶಾಸಕರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ವ್ಯತಿರಿಕ್ತ ತೀರ್ಪು ನೀಡಿದ್ದರೆ ಅನರ್ಹ ಶಾಸಕರನ್ನು ಸಮಾಧಾನಪಡಿಸುವುದು ಬಿಎಸ್ ಯಡಿಯೂರಪ್ಪಗೆ ದೊಡ್ಡ ಸವಾಲಾಗಿತ್ತು. ಚುನಾವಣೆಗೆ ತಡೆ ನೀಡಿದ್ದರಿಂದ ಸದ್ಯ ಬೀಸೋ ದೊಣ್ಣೆಯಿಂದ ಬಿಎಸ್ ವೈ ಪಾರಾದಂತಾಗಿದೆ.

ಅಲ್ಲದೇ ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿ ಮಧ್ಯಂತರ ಆದೇಶ ನೀಡಿದ್ದರೂ ಕೂಡಾ ಯಡಿಯೂರಪ್ಪಗೆ 15 ಕ್ಷೇತ್ರಗಳಲ್ಲಿ ಟಿಕೆಟ್ ಹಂಚಿಕೆ ಹಾಗೂ ಬಿಜೆಪಿ ಕಾರ್ಯಕರ್ತರ, ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ವಿರೋಧ ಕಟ್ಟಿಕೊಳ್ಳುವ ಆತಂಕ ಎದುರಾಗುತ್ತಿತ್ತು. ಇದೀಗ ಸುಪ್ರೀಂ ಆದೇಶದಿಂದ ಈ ಎಲ್ಲಾ ಗೊಂದಲದಿಂದ ಬಿಎಸ್ ಯಡಿಯೂರಪ್ಪಗೆ ತಾತ್ಕಾಲಿಕ ನಿರಾಳತೆ ದೊರೆತಂತಾಗಿದೆ.

ಸುಪ್ರೀಂ ಆದೇಶ ಹೊರಬೀಳುತ್ತಿದ್ದಂತೆಯೇ ಬಿಎಸ್ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಿಂದ ತಮ್ಮ ಡಾಲರ್ಸ್ ಕಾಲೋನಿ ನಿವಾಸಕ್ಕೆ ತೆರಳಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next