Advertisement

ಸುಪ್ರೀಂ ನಿಂದನೆಗೆ ಆರು ತಿಂಗಳು ಸಜೆ

06:35 AM May 25, 2018 | |

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವ ಕುರಿತು ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ನೇತೃತ್ವದ ತ್ರಿಸದಸ್ಯ ಪೀಠ “ದೋಷಪೂರಿತ’ ತೀರ್ಪು ನೀಡಿದೆ ಎಂದು ಆರೋಪಿಸಿದ್ದ ಎಂ.ಡಿ ರಾಜಣ್ಣ ಎಂಬಾತ
ನಿಗೆ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ 6 ತಿಂಗಳು ಜೈಲು ಹಾಗೂ 2 ಸಾವಿರ ರೂ. ದಂಡ ವಿಧಿಸಿ ಹೈಕೋರ್ಟ್‌ ತೀರ್ಪು ನೀಡಿದೆ. 

Advertisement

ಮಂಡ್ಯದ ಸುಭಾಷ್‌ನಗರ ನಿವಾಸಿ ರಾಜಣ್ಣ ವಿರುದ್ಧ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ದಾಖಲಿಸಿದ್ದ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದ  ನ್ಯಾ. ಆರ್‌.ಬಿ ಬೂದಿಹಾಳ್‌ ಹಾಗೂ ನ್ಯಾ. ಕೆ. ಎಸ್‌ ಮುದ್ಗಲ್‌ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ಕಾವೇರಿ ನದಿ ನೀರು ಹಂಚಿಕೆ ಕುರಿತ ಸಿವಿಲ್‌ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ, ಮುಂದಿನ 10
ದಿನಗಳೊಳಗೆ ತ.ನಾಡಿಗೆ ಪ್ರತಿದಿನ 15 ಕ್ಯುಸೆಕ್‌ ನೀರು ಬಿಡುವಂತೆ ರಾಜ್ಯಕ್ಕೆ 2016ರ ಸೆ.5 ರಂದು ಆದೇಶಿಸಿತ್ತು. ಆದರೆ ಇದನ್ನು ದೋಷ ಪೂರಿತವೆಂದು ರಾಜಣ್ಣ ಆರೋಪಿಸಿದ್ದರು.ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಸ್ವಯಂ ಪ್ರೇರಿತವಾಗಿ ರಾಜಣ್ಣ ವಿರುದ್ಧ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next