Advertisement

ಬಹುನಿರೀಕ್ಷಿತ ಅಯೋಧ್ಯೆ ತೀರ್ಪು ನಾಳೆ ಪ್ರಕಟ

09:22 AM Nov 09, 2019 | Hari Prasad |

ನವದೆಹಲಿ: ದೇಶದ ಜನತೆ ಮಾತ್ರವಲ್ಲದೇ ವಿಶ್ವವೇ ಕಾತರದಿಂದ ಕಾಯುತ್ತಿರುವ ಅಯೋಧ್ಯಾ ಪ್ರಕರಣದ ತೀರ್ಪು ನವಂಬರ್ 09 ಶನಿವಾರದಂದು ಪ್ರಕಟವಾಗಲಿದೆ. ನಾಳೆ ಬೆಳಿಗ್ಗೆ 10.30ಕ್ಕೆ ಸುಪ್ರೀಂಕೋರ್ಟ್ ನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಸಾಂವಿಧಾನಿಕ ಪೀಠ ಈ ತೀರ್ಪನ್ನು ಪ್ರಕಟಿಸಲಿದೆ.

Advertisement

ಶತಮಾನಗಳಿಂದ ವಿವಾದದ ಕೇಂದ್ರ ಬಿಂದುವಾಗಿದ್ದ ರಾಮಜನ್ಮಭೂಮಿ ವಿವಾದಕ್ಕೆ ಈ ತೀರ್ಪಿನ ಮೂಲಕ ತಾರ್ಕಿಕ ಅಂತ್ಯ ಸಿಗಬಹುದೇ ಎಂಬ ಕಾತರ ಕೋಟ್ಯಂತರ ದೇಶವಾಸಿಗಳದ್ದಾಗಿದೆ.

ಉತ್ತರಪ್ರದೇಶದಲ್ಲಿ ರಕ್ಷಣಾ ಚಕ್ರವ್ಯೂಹ : ದೇಶಾದ್ಯಂತ ಬಿಗು ಬಂದೋಬಸ್ತ್
ನಾಳೆ ಐತಿಹಾಸಿಕ ಅಯೋಧ್ಯಾ ತೀರ್ಪು ಪ್ರಕಟವಾಗುತ್ತಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ. ಉತ್ತರಪ್ರದೇಶದಲ್ಲಿ ಭಾರೀ ಪ್ರಮಾಣದ ರಕ್ಷಣಾ ಪಡೆಗಳನ್ನು ನಿಯೋಜಿಸಲಾಗಿದ್ದು ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ ಸೋಮವಾರದವರೆಗೆ ರಜೆ ಘೋಷಿಸಲಾಗಿದೆ. ಇನ್ನು ವಿವಾದದ ಕೇಂದ್ರಬಿಂದು ಅಯೋಧ್ಯೆಯಲ್ಲಿ ಅಕ್ಷರಶಃ ಭದ್ರತಾ ಚಕ್ರವ್ಯೂಹವನ್ನು ರಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next