Advertisement

ಇ.ಪಳನಿಸ್ವಾಮಿಯೇ ಎಐಎಡಿಎಂಕೆ ನಾಯಕ

11:26 PM Feb 23, 2023 | Team Udayavani |

ಹೊಸದಿಲ್ಲಿ: ಮಹತ್ವದ ತೀರ್ಪು ನೀಡಿರುವ ಸರ್ವೋಚ್ಚ ನ್ಯಾಯಪೀಠ, ಇ.ಪಳನಿಸ್ವಾಮಿ ಎಐಎಡಿಎಂಕೆ ನಾಯಕ­ರಾಗಿ ಮುಂದುವರಿಯಲು ಅನುಮತಿ ನೀಡಿದೆ. ಈ ಕುರಿತು ಮದ್ರಾಸ್‌ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ಗುರುವಾರ ಎತ್ತಿಹಿಡಿದಿದೆ.

Advertisement

ತೀರ್ಪು ಪ್ರಕಟವಾಗುತ್ತಲೇ ಪಳನಿಸ್ವಾಮಿ ಬಣ ತಮಿಳುನಾಡಿನಲ್ಲಿ ವಿಜಯೋತ್ಸವ ಆಚರಿಸಿದೆ. ಈ ಬಗ್ಗೆ ಸಂತೋಷದಿಂದ ಪ್ರತಿಕ್ರಿಯಿಸಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಪಳನಿಸ್ವಾಮಿ, “ಇದೊಂದು ಅದ್ಭುತ ಜಯ. ನ್ಯಾಯಕ್ಕೆ ಜಯ ಸಿಕ್ಕಿದೆ. ವಂಚಕರ ಮುಖವಾಡಗಳು ಕಳಚಿವೆ. ಪನ್ನೀರ್‌ಸೆಲ್ವಂ ಅಧ್ಯಾಯ ಇಲ್ಲಿಗೆ ಮುಗಿದಿದೆ’ ಎಂದಿದ್ದಾರೆ.

ಜತೆಗೆ ಅವರೊಂದಿಗೆ ಇನ್ನು ಯಾವುದೇ ವ್ಯವಹಾರಗಳಿಲ್ಲ. ಮುಂದೆ ಇನ್ನೂ ಅಧಿಕ ಉತ್ಸಾಹದಲ್ಲಿ ಕೆಲಸ ಮಾಡುತ್ತೇವೆ. ಎಐಎಡಿಎಂಕೆ ಹಿಂದಿನ ನಾಯಕಿ ಜಯಲಲಿತಾ, ತಮ್ಮ ಅನಂತರವೂ ಪಕ್ಷ 100 ವರ್ಷ ಅಸ್ತಿತ್ವದಲ್ಲಿರುತ್ತದೆ ಎಂದಿದ್ದರು. ಅದಕ್ಕೀಗ ಸಾಕ್ಷ್ಯ ಸಿಕ್ಕಿದೆ’ ಎಂದಿದ್ದಾರೆ. ಇದರಿಂದ ಒಂದು ಹಂತಕ್ಕೆ ಎಐಎಡಿಎಂಕೆಯ ಆಂತರಿಕ ಕಲಹಕ್ಕೆ ತೆರೆಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next