Advertisement

ಸುಪ್ರೀಂನಲ್ಲಿನ್ನು ನ್ಯಾಪ್ಕಿನ್‌

06:55 AM Oct 05, 2017 | Team Udayavani |

ನವದೆಹಲಿ: ಸುಪ್ರೀಂಕೋರ್ಟಲ್ಲಿ ಮೂರು ಸ್ವಯಂಚಾಲಿತ ಸ್ಯಾನಿಟರಿ ಪ್ಯಾಡ್‌ ನೀಡುವ ಯಂತ್ರಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಈ ಬಗ್ಗೆ ನ್ಯಾಯಾಲಯದ ರಿಜಿಸ್ಟ್ರಿಗೆ ಆದೇಶ ನೀಡಿದ್ದಾರೆ.

Advertisement

ನ್ಯಾಯವಾದಿ ನಂದಿನಿ ಗೋರೆ ಎಂಬುವರು ಈ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದಿದ್ದು, ಸ್ಯಾನಿಟರಿ ನ್ಯಾಪ್ಕಿನ್‌ ಇಲ್ಲದೆ ಮಹಿಳಾ ಕಕ್ಷಿದಾರರು, ನ್ಯಾಯವಾದಿಗಳು ಮತ್ತು ಇತರ ಮಹಿಳಾ ಉದ್ಯೋಗಿಗಳಿಗೆ ಅನಾನುಕೂಲವಾಗುತ್ತಿದೆ ಎಂದು ಹೇಳಿದ್ದರು. ಇದನ್ನು ಗಣನೆಗೆ ತೆಗೆದುಕೊಂಡ ಮುಖ್ಯ ನ್ಯಾಯಮೂರ್ತಿ, ಸುಪ್ರೀಂಕೋರ್ಟ್‌ ರಿಜಿಸ್ಟ್ರಿಗೆ ಆದೇಶ ನೀಡಿ ಮೂರು ಸ್ವಯಂ ಚಾಲಿತ ಮಷಿನ್‌ಗಳನ್ನು ಅಳವಡಿಸಬೇಕು ಮತ್ತು ಅದಕ್ಕಾಗಿ 10 ಲಕ್ಷ ರೂ. ಬಿಡುಗಡೆ ಮಾಡಿರುವುದಾಗಿ ಆದೇಶ ನೀಡಿದ್ದಾರೆ. ಇದರ ಜತೆಗೆ ಬಳಕೆ ಮಾಡಿದ ಸ್ಯಾನಿಟರಿ ಪ್ಯಾಡ್‌ಗಳನ್ನು ಸುಡುವ ಮೂರು ಯಂತ್ರಗಳನ್ನು ಅಳವಡಿ ಸುವಂತೆಯೂ ಮುಖ್ಯ ನ್ಯಾಯಮೂರ್ತಿ ಸೂಚಿಸಿದ್ದಾರೆ. 

ಋತುಸ್ರಾವದ ವೇಳೆ ಮಹಿಳೆಯರು ಆದ್ಯತೆಯಲ್ಲಿ ಆರೋಗ್ಯ ಮತ್ತು ಶುಚಿತ್ವ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇಂಥ ಕ್ರಮ ಕೈಗೊಂಡಿದ್ದು, ಮಹಿಳಾ ನ್ಯಾಯವಾದಿಗಳಿಂದ ಪ್ರಶಂಸೆಗೆ ಒಳಗಾಗಿದೆ. ಸುಪ್ರೀಂಕೋರ್ಟ್‌ ನ್ಯಾಯವಾದಿ ನಂದಿನಿ ಗೋರೆ ಮಾತನಾಡಿ, ಸುಪ್ರೀಂಕೋರ್ಟಲ್ಲಿ 1 ಸಾವಿರ ಮಹಿಳಾ ನ್ಯಾಯವಾದಿಗಳು, 250 ಮಂದಿ ಮಹಿಳಾ ಉದ್ಯೋಗಿಗಳಿದ್ದಾರೆ. ಮುಖ್ಯ ನ್ಯಾಯ ಮೂರ್ತಿಗಳ ಆದೇಶದಿಂದ ಅವರೆಲ್ಲರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.

ಕೇಂದ್ರ ಸರ್ಕಾರ ಕೂಡ ವಿವಿಧ ರಾಜ್ಯಗಳಲ್ಲಿ ಮಹಿಳೆಯರಿಗಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುತ್ತಿದೆ. ಅದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆಯಾದರೂ, ಅದರ ಬಗ್ಗೆ ಮುಕ್ತವಾಗಿ ಮಾತನಾಡಲು ಈಗಲೂ ಗ್ರಾಮೀಣ ಮತ್ತು ನಗರ ಪ್ರದೇಶಗಳ ಮಂದಿ ಮುಜುಗರಪಡುತ್ತಿರುವ ಸ್ಥಿತಿಯಿದೆ.

Advertisement

Udayavani is now on Telegram. Click here to join our channel and stay updated with the latest news.

Next