ನವದೆಹಲಿ: ಆರಂಭಿಕ ಫಲಿತಾಂಶವನ್ನೇ ಪರಿಗಣಿಸುವಂತೆ ಸಿಬಿಎಸ್‌ಇಗೆ ನಿರ್ದೇಶಿಸಬೇಕೆಂದು ಕೋರಿ 12ನೇ ತರಗತಿಯ ಕೆಲವು ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯನ್ನು ಡಿ.6ರಂದು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
30:30:40ರ ಅನುಪಾತದಲ್ಲಿ ಮೌಲ್ಯಮಾಪನ ಮಾಡಿ ಸಿಬಿಎಸ್‌ಇ 12ನೇ ತರಗತಿಯ ಆರಂಭಿಕ ಫಲಿತಾಂಶವನ್ನು ಪ್ರಕಟಿಸಿತ್ತು.
ಆದರೆ, ಈ ಫಲಿತಾಂಶದಲ್ಲಿ ಪಾಸ್ ಆಗಿದ್ದರೂ, ತೃಪ್ತರಾಗದ ಕೆಲವು ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಸುಧಾರಿಸುವ ಸಲುವಾಗಿ ಮತ್ತೂಮ್ಮೆ ಪರೀಕ್ಷೆ ಬರೆದಿದ್ದರು.
ಆದರೆ, ಅವರಲ್ಲಿ ಕೆಲವರು ಎರಡನೇ ಬಾರಿಯ ಪರೀಕ್ಷೆಯಲ್ಲಿ ಫೇಲ್ ಆಗಿದ್ದು, ಕೆಲವರು ಕಡಿಮೆ ಅಂಕ ಗಳಿಸಿದ್ದಾರೆ.
ಇದನ್ನೂ ಓದಿ:ತೀವ್ರ ವಿರೋಧಕ್ಕೆ ಮಣಿದ ಆಂಧ್ರಪ್ರದೇಶ ಸಿಎಂ; ವಿವಾದಿತ 3 ರಾಜಧಾನಿಗಳ ಮಸೂದೆ ವಾಪಸ್
ಈ ಹಿನ್ನೆಲೆಯಲ್ಲಿ ತಮ್ಮ ಆರಂಭಿಕ ಫಲಿತಾಂಶವನ್ನೇ ಪರಿಗಣಿಸಬೇಕು ಎಂದು ಕೋರಿ 11 ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.