Advertisement
2015ರ ಡಿಸೆಂಬರ್ 16ರಂದೇ ಈ ಕುರಿತು ತೀರ್ಪು ನೀಡಿದ್ದರೂ, ಅದಕ್ಕೆ ವಿರುದ್ಧವಾಗಿ ಆರ್‌ಬಿಐ ನಡೆದುಕೊಂಡಿತ್ತು. ಆರ್‌ಟಿಐನಡಿ ಸಲ್ಲಿಸಿದ್ದ ಅರ್ಜಿಗೂ ಕ್ಯಾರೇ ಎಂದಿರಲಿಲ್ಲ. ಅಷ್ಟೇ ಅಲ್ಲ, ಕೋರ್ಟ್ ತನ್ನ ತೀರ್ಪಿನಲ್ಲಿ ಯಾವ್ಯಾವ ವಿಚಾರ ಗಳನ್ನು ಬಹಿರಂಗಪಡಿಸಬೇಕು ಎಂದು ಹೇಳಿತ್ತೋ, ಆ ಎಲ್ಲ ವಿಚಾರಗಳ ಬಹಿರಂಗಕ್ಕೂ ನಿರ್ಬಂಧ ಹೇರಿ ಹೊಸ ನೀತಿಯನ್ನು ಆರ್‌ಬಿಐ ಜಾರಿ ಮಾಡಿತ್ತು. ಇಂಥ ಯಾವ ಮಾಹಿತಿಯನ್ನೂ ಬಹಿರಂಗ ಮಾಡಬೇಡಿ ಎಂದು ವಿವಿಧ ಇಲಾಖೆಗಳಿಗೆ ಆರ್‌ಬಿಆ ನಿರ್ದೇಶಿಸಿತ್ತು. ಆರ್‌ಬಿಐನ ಈ ಕ್ರಮಕ್ಕೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮಾಹಿತಿ ಬಹಿರಂಗಕ್ಕೆ ಇದು ಕೊನೇ ಅವಕಾಶ ಎಂದು ಹೇಳಿದೆ. Advertisement
ಆರ್‌ಬಿಐ ಅನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್
12:45 PM Apr 27, 2019 | Team Udayavani |